ಸ್ಲಂ ಜನಾಂದೋಲನ ಕರ್ನಾಟಕ ಮತ್ತು ದಲಿತ ಸಂಘರ್ಷ ಸಮಿತಿ ಹಾಗೂ ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಯಿಂದ ಎನ್.ಆರ್ ಕಾಲೋನಿಯಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ರವರ ೧೩೩ನೇ ಹಾಗೂ ಬಾಬು ಜಗಜೀವನ್ರಾಂ ರವರ ೧೧೭ನೇ ಜಯಂತಿಯನ್ನು ಹಮ್ಮಿಕೊಳ್ಳಲಾಯಿತು.
ಮಹಾ ಭೋದಿ ಸತ್ವ ಸಂವಿಧಾನ ಶಿಲ್ಪಿ ಡಾ|| ಬಿ.ಆರ್ ಅಂಬೇಡ್ಕರ್ ಮತ್ತು ಹಸಿರುವ ಕ್ರಾಂತಿಯ ಹರಿಕಾರ ಬಾಬು ಜಗಜೀವನ್ ರಾಂ ಬಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸಂವಿಧಾನ ಪೀಠಿಕೆಯನ್ನು ಭೋದಿಸಿದ ಕರ್ನಾಟಕ ಸರ್ಕಾರದ ಗೃಹಸಚಿವರು ಮತ್ತು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ|| ಜಿ.ಪರಮೇಶ್ವರ್ ಸಂವಿಧಾನ ಉಳಿಸುವ ಸಂಕಲ್ಪವನ್ನು ನಾವೆಲ್ಲರೂ ಮಾಡೋಣ ಈ ಮೂಲಕ ವಿಶ್ವಕಂಡ ಮಹಾನ್ ಜ್ಞಾನಿ ಸಮಾನತೆಯ ಪ್ರತಿಪಾಧಕರಾದ ಅಂಬೇಡ್ಕರ್ ಮತ್ತು ಹಸಿರು ಕ್ರಾಂತಿಯ ಹರಿಕಾರ ಹಾಗೂ ಸ್ವಾಭಿಮಾನದ ಸಂಕೇತವಾದ ಬಾಬು ಜಗಜೀವನ್ರಾಂರವರ ಬಗ್ಗೆ ಗೌರವ ಸಲ್ಲಿಸಿದ್ದಂತಾಗುತ್ತದೆ. ಕಳೆದ ೧೦ ವರ್ಷಗಳಿಂದ ಸಂವಿಧಾನದ ಮೇಲೆ ನಿರಂತರ ಹಲ್ಲೆ ಮಾಡುತ್ತಿರುವ ಎನ್ಡಿಎ ಸರ್ಕಾರ ಬಿಜೆಪಿ ಆರ್,ಎಸ್,ಎಸ್ ನಿಯಂತ್ರಿತ ಮೋದಿ ೨ ದಿನಗಳ ಹಿಂದೆ ಅಂಬೇಡ್ಕರ್ ಹುಟ್ಟಿ ಬಂದರು ಸಂವಿಧಾನ ಬದಲಾಯಿಸಲು ಸಾಧ್ಯವಿಲ್ಲವೆಂದಿರುವ ಹಿಂದಿನ ಮರ್ಮವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಈ ದೇಶದ ಶೋಷಿತ ಸಮುದಾಯಗಳಿಗೆ ಶಕ್ತಿ ತುಂಬಿರುವ ಸಂವಿಧಾನ ನಮ್ಮೆಲ್ಲರಲ್ಲು ಅಂಬೇಡ್ಕರ್ ಮರುಹುಟ್ಟು ಪಡೆದಿದ್ದು ಈ ಸಂಘರ್ಷವನ್ನು ಅತ್ಯಂತ ವಿವೇಚನೆಯಿಂದ ಬಾಬಾ ಸಾಹೇಬರು ನಿಭಾಯಿಸಿ ಸಂವಿಧಾನದಲ್ಲಿ ಸ್ವಾತಂತ್ರ, ಸಮಾನತೆ, ಸೋದರತೆ, ವ್ಯಕ್ತಿಗೌರವ ಮತ್ತು ಸಾಮಾಜಿಕ ನ್ಯಾಯವನ್ನು ಪ್ರತಿಪಾಧಿಸಿ ಸನಾತನವಾದಕ್ಕೆ ತಿಲಾಂಜಲಿ ಇಟ್ಟರು ಇದನ್ನು ಮರು ಸ್ಥಾಪಿಸಲು ಬಿಜೆಪಿ ಅವಣಿಸುತ್ತಿದೆ ಹಾಗಾಗಿ ನಾವೆಲ್ಲರು ಎಚ್ಚೇತ್ತುಕೊಂಡು ಸಂವಿಧಾನವನ್ನು ಉಳಿಸುವ ಸಂಕಲ್ಪ ಮಾಡಿ ಕಾಂಗ್ರೇಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ಕರೆ ನೀಡಿದರು ರಾಜ್ಯದಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೇಸ್ ಸರ್ಕಾರ ೫ ಗ್ಯಾಂಟಿಗಳನ್ನು ಜಾರಿಗೆ ತಂದಿದ್ದು ವಿಧಾನಸಭೆ ಚುನಾವಣೆ ಪೂರ್ವದಲ್ಲಿ ನನ್ನ ನೇತೃತ್ವದ ಪ್ರಣಾಳಿಕಾ ಸಮಿತಿ ಸಿದ್ದಗೊಳಿಸಿದ ಈ ಗ್ಯಾರಂಟಿಗಳು ಬಡಜನರಿಗೆ ಆರ್ಥಿಕ ಶಕ್ತಿ ತುಂಬುತ್ತಿವೆ. ಸ್ಲಂ ಜನರ ಹಕ್ಕೋತ್ತಾಯಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ. ಈ ಅಂಶಗಳನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸುತ್ತೇವೆ ಎಂದರು.
ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಎಸ್.ಪಿ ಮುದ್ದಹನುಮೇಗೌಡ ಮಾತನಾಡಿ ನಾವು ಸಂಸತ್ನಲ್ಲಿ ಮಾತನಾಡಲು ಈ ದೇಶವನ್ನು ಏಕತೆಯಲ್ಲಿ ತೆಗೆದುಕೊಂಡು ಹೋಗಲು ಸಂಬೇಡ್ಕರ್ ರವರ ಸ್ಪೂರ್ತಿ ಕಾರಣವಾಗಿದೆ ನಾನು ಸಹಾ ಶೂದ್ರ ಜಾತಿಗೆ ಸೇರಿದ್ದು ಜಾತಿ ರಹಿತ ಸಮಾಜವನ್ನು ಕಟ್ಟಲು ಮತ್ತು ಕಾಂಗ್ರೇಸ್ನ ಸಾಮಾಜಿಕ ನ್ಯಾಯ ಉಳಿಸುವ ನ್ಯಾಯ ಪತ್ರದ ಗ್ಯಾರಂಟಿಗಳು ಜನರಿಗೆ ತಲುಪಿಸಲು ದೇಶದಲ್ಲಿ ಕಾಂಗ್ರೇಸ್ ಆಯ್ಕೆ ಮಾಡಿ ಜಿಲ್ಲೆಯಲ್ಲಿ ನನ್ನನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಪ್ರಸ್ತಾವಿಕವಾಗಿ ಸ್ಲಂ ಜನಾಂದೋಲನ ಕರ್ನಾಟಕದ ಸಂಚಾಲಕರಾದ ಎ.ನರಸಿಂಹಮೂರ್ತಿ ಮಾತನಾಡಿ ಸಮಾನತೆಯಿಲ್ಲದ ಸ್ವಾತಂತ್ರವು ಅಸಮಾನತೆಯನ್ನು ಸೃಷ್ಠಿಸುತ್ತದೆ ದೇಶದಲ್ಲಿ ಪ್ರಜಾತಂತ್ರ ವ್ಯವಸ್ಥೆ ಉಳಿಯಲು ಮೋದಿ ಗ್ಯಾರಂಟಿಗೆ ಬದಲಾಗಿ ದೇಶದ ಪ್ರತಿಯೊಬ್ಬ ನಾಗರೀಕನಿಗೂ ಸಂವಿಧಾನದ ಗ್ಯಾರಂಟಿಗಳು ಖಾತ್ರಿಯಾಗಬೇಕಿದೆ. ಹಾಗಾಗಿ ನಾವು ಸಂವಿಧಾನ ಉಳಿಸುವ ಸಂಕಲ್ಪ ಮಾಡಿ ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೇಸ್ನ್ನು ಗೆಲ್ಲಿಸಬೇಕೆಂದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಡಾ.ರಫೀಕ್ ಅಹಮದ್, ಹಿರಿಯ ಚಿಂತಕರಾದ ಕೆ.ದೊರೈರಾಜ್, ಕಾಂಗ್ರೇಸ್ ಮುಖಂಡರಾದ ಎನ್. ಗೋವಿಂದರಾಜು, ಇಕ್ಬಾಲ್ ಅಹಮದ್, ಕೆ.ಪಿ.ಸಿಸಿ ಕಾರ್ಯದರ್ಶಿ ರಾಮಕೃಷ್ಣ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಚಂದ್ರಶೇಖರ್ ಗೌಡ, ಮಾಜಿ ನಗರಸಭೆ ಸದಸ್ಯರಾದ ರೂಪಶ್ರೀ ಶೆಟ್ಟಾಳಯ್ಯ, ಎಸ್,ಮಹೇಶ್, ಜಿಲ್ಲಾ ಕಾಂಗ್ರೇಸ್ನ ಮುಖಂಡರಾದ ನರಸೀಯಪ್ಪ, ವಾಲೇಚಂದ್ರಯ್ಯ, ನಾರಾಯಾಣಮೂರ್ತಿ, ದಸಂಸದ ಸಂಚಾಲಕರಾದ ನರಸಿಂಹಯ್ಯ, ಬಿ.ಹೆಚ್ ಗಂಗಾಧರ್, ಟೂಡಾ ಮಾಜಿ ಸದಸ್ಯರಾದ ಜಯಮೂರ್ತಿ, ದಿನೇಶ್, ೨೦ನೇ ವಾರ್ಡ್ ಅಧ್ಯಕ್ಷರಾದ ಮಂಜುನಾಥ್, ತುಮಕೂರು ಕೊಳಗೇರಿ ಸಮಿತಿಯ ಕಾರ್ಯದರ್ಶಿ ಅರುಣ್, ಪದಾಧಿಕಾರಿಗಳಾದ ತಿರುಮಲಯ್ಯ, ಜಾಬೀರ್ಖಾನ್, ಕೃಷ್ಣಮೂರ್ತಿ, ಮುಬಾರಕ್, ಶಂಕರಯ್ಯ, ಗೋವಿಂದ್, ಹನುಮಕ್ಕ, ಶಾರದಮ್ಮ, ಅನುಪಮಾ, ಗಂಗಾ, ಶಾಂತಮ್ಮ, ಮೋಹನ್ಟಿಆರ್, ಧನಂಜಯ್,ರಂಗನಾಥ್ ಮುಂತಾದವರು ಪಾಲ್ಗೊಂಡಿದ್ದರು.