ತುಮಕೂರು; ಹುಬ್ಬಳ್ಳಿಯಲ್ಲಿ ನಡೆದ ನೇಹಾ ಕೊಲೆ ವಿಚಾರಕ್ಕೆ ಸಂಬಂಧಿಸಿದಂತೆ ಕೊಲೆ ಮಾಡಿದ ಆರೋಪಿಯನ್ನ ಈಗಾಗಲೇ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು ಬಿಜೆಪಿಯವರು ಇದನ್ನ ರಾಜಕೀಯವಾಗಿ ಬಳಸುತ್ತಿದ್ದಾರೆ ಕಾಂಮೆಂಟ್ ಹೇಳಿಕೆಗಳಿಗೆ ರಾಜಕೀಯ ಬಣ್ಣ ಕಟ್ಟಿದ್ದಾರೆ ಸಿಎಂ ಮತ್ತು ನಾನು ಹೇಳಿಕೆ ಕೊಡುವಾಗ ಸತ್ತ ಮಗಳ ತಂದೆ ತಾಯಿಯ ನೋವಿಗೆ ಸಾಂತ್ವನ ಹೇಳಿ ವಿಶ್ವಾಸದ ಮಾತು ವ್ಯಕ್ತ ಪಡಿಸಿದ್ದೆವೆ ಆದರೆ ಇದನ್ನ ಬಂಡವಾಳ ಮಾಡಿಕೊಂಡ ಬಿಜೆಪಿಗರು ಸಾವಿ ಮನೆಯ ರಾಜಕಾರಣ ಮಾಡುತ್ತಿದ್ದಾರೆ ಎಂದು ಗುಡುಗಿದರು.
ನನ್ನ ಮತ್ತು ಸಿಎಂ ಅವರ ಹೇಳಿಕೆಗೆ ಬಹಳ ಕೀಳಾಗಿ, ಕಟುವಾಗಿ ಕೆಟ್ಟದಾಗಿ ಟೀಕೆ ಮಾಡಿರುವ ಬಿಜೆಪಿಯವರ ಸಂಸ್ಕೃತಿ ಏನೆಂದು ತಿಳಿಯುತ್ತದೆ ಲೋಕಸಭಾ ಚುನಾವಣೆಯಲ್ಲಿ ಸೋಲುವ ಭಯದಿಂದ ನಿರಾಶೆಯಿಂದ ಈ ರೀತಿಯ ಹೇಳಿಕೆ ಖಂಡನೀಯವಾಗಿದೆ ಎಂದರು.
ನೇಹಾಳ ಕೊಲೆ ಘಟನೆ ಸಂಬಂಧ ಇಂದು ಬೆಳಿಗ್ಗೆ ಸಿಓಡಿ ತನಿಖೆಗೆ ವಹಿಸಲಾಗಿದೆ ಸಿಓಡಿ ಟೀಂ ಅದನ್ನಸೂಕ್ತ ರೀತಿಯಲ್ಲಿ ತನಿಖೆ ಮಾಡಿತ್ತದೆ, ಕೊಲೆ ಹಿಂದೆ ನಾಲ್ಕು ಜನ ಇದ್ದಾರೆ ಎಂದು ನೇಹಾ ತಂದೆ ತಾಯಿ ಹೇಳಿಕೆ ನೀಡಿದ್ದಾರೆ ಹಾಗಾಗಿ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತದೆ ಎಂದರು.
ಹತ್ತು ದಿನದೊಳಗೆ ಕೊಲೆ ಸತ್ಯಾ ಸತ್ಯತೆಯನ್ನ ಸಂಪೂರ್ಣವಾಗಿ ತನಿಖೆ ಮಾಡಿ ಕೊಡಲು ಸಿಇಓಡಿಗೆ ಈಗಾಗಲೇ ಮುಖ್ಯಮಂತ್ರಿಗಳ ಆದೇಶ ನೀಡಿದ್ದಾರೆ. ನನಗೆ ವಿಶ್ವಾಸವಿದೆ ಕೊಲೆ ಸಂಬಂಧ ಸತ್ಯವನ್ನು ಹೊರತರಲಾಗುವುದು ನೇಹಾ ಕೊಲೆ ಪ್ರಕರಣವನ್ನು ಬಿಜೆಪಿ ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿದ್ದು ತನಿಖೆ ಹಿಂದೆ ಇರುವ ಎಲ್ಲಾ ಸತ್ಯವನ್ನ ಹೊರತರಲಾಗುವುದು ಎಂದರು.
ವಿರೋಧ ಪಕ್ಷದ ನಾಯಕ ಆರ್.ಆಶೋಕ್ ಹೇಳಿಕೆಗೆ ಖಂಡನೆ.
ಎಸ್ಪಿ, ಡಿಸಿಪಿ ತನಿಖೆಯ ಹೇಳಿಕೆ ಆಧಾರದ ಮೇಲೆ ಮುಂತ್ರಿಗಳು ಮಾತನಾಡಿದ್ದಾರೆ ಹಾಗಾಗಿ ವಿರೋಧ ಪಕ್ಷದ ನಾಯಕ ಆರ್. ಆಶೋಕ್ ಅವರು ಮಾತನಾಡುವ ರೀತಿಯಲ್ಲಿ ಸರಿಯಿಲ್ಲ ಕೊಲೆ ಪ್ರಕರಣವನ್ನು ರಾಜಕೀಯಕ್ಕೆ ಬಳಸಿ ಮಾತನಾಡು ಕೀಳು ಮಟ್ಟಕ್ಕೆ ಇಳಿದಿದ್ದಾರೆ ಇದಕ್ಕೆ ಜನರು ಉತ್ತರ ಕೊಡುತ್ತಾರೆ ಎಂದರು