80 ನಿಮಿಷಗಳ ಸಂದರ್ಶನದಲ್ಲಿ ಪ್ರಧಾನಿ ಮೋದಿಯವರು ಬಡತನದ ಬಗ್ಗೆ ಮಾತನಾಡಿಲ್ಲ, ಅವರ ಮನಸ್ಸಿನ ಅಂತರ್ಯವೇನು ಡಾ.ಜಿ.ಪರಮೇಶ್ವರ್

ತುಮಕೂರು: ದೇಶದ ಪ್ರಧಾನಿಯವರು ಸಂದರ್ಶನ ಒಂದರಲ್ಲಿ ಸುಮಾರು 80 ನಿಮಿಷಗಳ ಕಾಲ ಮಾತನಾಡಿದ್ದು ಪ್ರಧಾನಿಯವರ ಮಾತಿನಲ್ಲಿ ಬಡತನದ ಬಗ್ಗೆ ಬಡವರ ಬಗ್ಗೆ ಮಾತುಗಳೆ ಇಲ್ಲ ಸಂದರ್ಶನದಲ್ಲಿ ಒಂದು ಬಾರಿಯೂ ರೈತನನ್ನು ನೆನೆಯಲೆ ಇಲ್ಲ ಸುಮಾರು 30 ಬಾರಿ ರಾಹುಲ್ ಗಾಂಧಿಯವರ ಹೆಸರನ್ನು ಸಂಭೋಧಿಸಿದ ಪ್ರಧಾನಿಯವರ ಅಂತರ್ಯ ತಿಳಿಯುತ್ತದೆ ಬಡವರ ಮೇಲಿನ ಕಾಳಜಿ ಇಲ್ಲವೆಂದು ಇದರಿಂದ ತಿಳಿಯುತ್ತದೆ ಸಂದರ್ಶನದಲ್ಲಿ ತಾವಾಗಿಯೇ ದೇಶದ ಮೇಲಿನ ನಿರಾಸಕ್ತಿಯನ್ನು ತೋರಿದ್ದಾರೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ದೂರಿದರು.

 

 

 

 

ನಗರದ ಕುಣಿಗಲ್ ರಸ್ತೆಯ ಸದಾಶಿವ ನಗರದಲ್ಲಿರುವ ಮಾರುತಿ ಮಹಾರಾಜ ಕನ್ವೆನ್ಷನ್ ಹಾಲ್ ನಲ್ಲಿ ನಡೆದ ಗೊಲ್ಲ ಸಮುದಾಯದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದವರು ಪ್ರಧಾನಿ ಮೋದಿಯವರು ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದು ಟೀ ಮಾಡಿಕೊಂಡು ಬಂದೆ ಎಂದು ಹೇಳಿಕೊಳ್ಳುತ್ತಿದ್ದಾರೆ ಅದಕ್ಕೆ ನಾನು ಹೆಮ್ಮೆ ಪಡುತ್ತೇನೆ ಆದರೆ ಹತ್ತು ವರ್ಷಗಳ ಕಾಲ ದೇಶವಾಳಿ 2014ರಲ್ಲಿ ಹಾಡಿದ ಮಾತುಗಳು ಇತಿಹಾಸದಲ್ಲಿ ಉಳಿದಿವೆ 2024ರಲ್ಲಿನವರ ಮಾತುಗಳು ವಿಭಿನ್ನವಾಗಿದ್ದು ಹತ್ತು ವರ್ಷಗಳ ಇವರ ಮಾತುಗಳನ್ನ ಮುಂದಿನ ಪೀಳಿಗೆ ಜ್ಞಾಪಿಸುವಂತಾಗಿದೆ ಇಂಥವರ ಕೈಯಲ್ಲಿ ದೇಶ ಇದ್ದರೆ ಹೇಗೆ ಎಂದು ಯೋಚಿಸಿ ಮತ ನೀಡಬೇಕು ಎಂದು ತಿಳಿಸಿದರು.

 

 

 

ನಮ್ಮ ದೇಶದಲ್ಲಿ ಕಾಂಗ್ರೆಸ್ ಪಕ್ಷ ಉದಯವಾಗಿದ್ದೆ ಬಡವರಿಗಾಗಿ ಗಾಂಧಿ ನೇತೃತ್ವದಲ್ಲಿ ಸ್ವಾತಂತ್ರ್ಯ ಹೋರಾಟ ನಡೆಸಿ ನಂತರ ಕಾಂಗ್ರೆಸ್ ಸರ್ಕಾರ ಬಡವರಿಗಾಗಿ ಅವರ ಶ್ರೇಯೋಭಿವೃದ್ಧಿಗಾಗಿ ಅನೇಕ ಬರಬಹುದು ನೆಹರು ಇಂದಿರಾ ಗಾಂಧಿ ರಾಜೀವ್ ಗಾಂಧಿ ಇಡೀ ದೇಶಕ್ಕೆ ಸ್ಮರಿಸುವಂತಹ ಮಹೋನ್ನತವಾದ ಕೊಡುಗೆಗಳನ್ನು ನೀಡಿದ್ದಾರೆ ಇಂಥವರ ಸಾಧನೆಯ ಮುಂದೆ 10 ವರ್ಷ ದೇಶವನ್ನಾಳಿದ ಮೋದಿ ಸಾಧನೆವಾಗಿದೆ ಎಂದರು.

 

 

 

ಸ್ವತಂತ್ರ ಬಂದು ಇಷ್ಟು ವರ್ಷವಾದರೂ ನಮ್ಮ ರಾಜ್ಯದಲ್ಲಿ ಗೊಲ್ಲ ಯಾದವ ಸಮುದಾಯ ಶೈಕ್ಷಣಿಕ ಆರ್ಥಿಕ ರಾಜಕೀಯ ಸ್ವಾತಂತ್ರ್ಯ ಸಿಗದೇ ಹಿಂದೆ ಉಳಿದಿದ್ದು ಬಲ ಸಮುದಾಯದ ಸೇವ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ರೂಪಿಸಲಾಗಿದ್ದು ನನಗೂ ಗೊಲ್ಲ ಸಮುದಾಯಕ್ಕೂ ಅವಿನ ಭಾವ ಸಂಬಂಧವಿದ್ದು ನಾನು ಬುದ್ಧಿ ಕಂಡ ಮೇಲೆ ಹುಟ್ಟಿ ಬೆಳೆದಿದ್ದೆ ಗೊಲ್ಲರ ಹಟ್ಟಿಗಳಲ್ಲಿ ಗೊಲ್ಲರ ಹಟ್ಟಿಗಳ ಸಂಪ್ರದಾಯ ಅಲ್ಲಿರುವ ಯಜಮಾನರುಗಳ ಪ್ರೀತಿ ವಿಶ್ವಾಸ ನಾನು ಮರೆತಿಲ್ಲ ಗೊಲ್ಲ ಸಮುದಾಯದವರ ಪ್ರೀತಿ ಆರೈಕೆಯಿಂದಾಗಿ ಕೆಪಿಸಿಸಿ ಅಧ್ಯಕ್ಷನಾಗಿ ಉಪಮುಖ್ಯಮಂತ್ರಿಯಾಗಿ ಮೂರು ಬಾರಿ ಗೃಹ ಮಂತ್ರಿಯಾಗಿ ಜನರ ಸೇವೆ ಮಾಡುವ ಸೌಭಾಗ್ಯವನ್ನು ಪಡೆದಿದ್ದು ಇದಕ್ಕಾಗಿ ಗೊಲ್ಲ ಸಮುದಾಯಕ್ಕೆ ಋಣಿಯಾಗಿದ್ದೇನೆ ಎಂದರು.

 

 

 

ರಾಜ್ಯದಲ್ಲಿರು ಕಾಂಗ್ರೆಸ್ ಸರ್ಕಾರ ನಿಮ್ಮ ಸರ್ಕಾರ ಬೇಡಿಕೆ ಇಡುವುದು ನಿಮ್ಮ ಕರ್ತವ್ಯ ಅಗಿದೆ ನನಗೆ ಅಪಮಾನ ಬಡತನಗಳ ಅರಿವಿದೆ ಜನರ ಕಷ್ಟ ಅರ್ಥವಾಗುತ್ತದೆ ರಾಜ್ಯ ಸರ್ಕಾರ ನಿಮ್ಮ ಪರವಾಗಿದೆ ಇದು ನಿಮ ಸರ್ಕಾರ ಗೊಲ್ಲ ಸಮುದಾಯ ವನ್ನ ಎಸ್ ಟಿ ಸಮುದಾಯ ಕ್ಕೆ ಸೇರಿಸುವ ಗುರತರವಾದ ಹೊಣೆಗಾರಿಕೆ ನಮ್ಮ ಮೇಲಿದೆ ಇದ್ದರಿಂದಾಗಿ ಅಂಚಿನಲ್ಲಿರುವ ಈ ಸಮುದಾಯಕ್ಕೆ ಶೈಕ್ಷಣಿಕ, ರಾಜಕೀಯ ಸ್ಥಾನಮಾನ ಸಾಮಾಜಿಕ ಹೊಣೆಗಾರಿಕೆ ನೀಡಲಾಗುವುದು ಎಂದರು.

 

 

ನಾಯಕ ಸಮುದಾಯಕ್ಕೆ ಏಳು ಪರ್ಸೆಂಟ್ ಮೀಸಲಾತಿ ನೀಡಬೇಕು ಎಂದು ಅಂದಿನ ಸರ್ಕಾರದ ಹದಿನೈದು ಜನ ಶಾಸಕರು ಬಂದು ಕೇಳದರು ಇದ್ದರಿಂದಾಗಿ ನಾನು ಪ್ರತಿಭಟನೆ ಜಾಗಕ್ಕೆ ಹೋಗಿ ಮೀಸಲಾತಿ ನೀಡುವುದಾಗಿ ಭರವಸೆ ನೀಡಿ ಸರ್ಕಾರದ ಗಮನಸೆಳೆದು ನುಡಿದಂತೆ ನಡೆದಿದ್ದೇವೆ‌ ಎಂದರು. ಮುದ್ದಹನುಮೇಗೌಡ ಅವರು ಗೆಲ್ಲಿಸುವ ಜವಾಬ್ದಾರಿ ನಮ್ಮ ಮೇಲಿದೆ ಅವರು ಗೆದ್ದರು ನಮಗೆ ಗೌರವ ಬರುತ್ತದೆ ಹಾಗಾಗಿ ಗೊಲ್ಲ ಸಮುದಾಯ ಸಭೆ ಸೇರಲು ಇಂದು ಕಾರಣವಾಯಿತು ಗೊಲ್ಲರಹಟ್ಟಿಯ ಗೌಡ ಪೂಜ್ಯರಿಗೂ ಮನವಿ ಮಾಡುತ್ತೇನೆ ಬಿಜೆಪಿಯ ವರಿಗೆ ಗೊಲ್ಲ ಸಮುದಾಯ ದ ಬಗ್ಗೆ ಅರಿವಿಲ್ಲ ಬಿಜೆಪಿಯವರು ಕುರಿಕಾದಿಲ್ಲ ದನ ಕಾದಿಲ್ಲ ಹಾಗಾಗಿ ಬಿಜೆಪಿಯವರ ಮಾತಿಗೆ ಮನ್ನಣೆ ನೀಡಬೇಡಿ ಎಚ್ಚರಿಕೆಯಿಂದ ಮತದಾನ ಮಾಡಿ ಎಂದು ಕರೆ ನೀಡಿದರು.

 

 

 

ಸಭೆಯಲ್ಲಿ ಸಚಿವ ಕೆ.ಎನ್.ರಾಜಣ್ಣ ಅವರು ಮಾತನಾಡಿ ಯಾದವ ಸಮುದಾಯ ಕ್ಕೆ ನೆರವು ಬೇಕಿದೆ ಇಂದು ಇಡೀ ವಿಶ್ವದಲ್ಲಿ ಶಕ್ತಿಯುತ ಆಯುಧ ಇದೆ ಏಂದರೆ ಅದು ರಾಜಕೀಯ ಹಾ.ಅಧಿಕಾರ ಪಡೆಯದೆ ಹೊದರೆ ಯಾವ ಸಮುದಾಯವಿ ಮುಂದುವರಿಯಲು ಸಾಧ್ಯವಿಲ್ಲ ಜಿಲ್ಲೆಯ ಲ್ಲಿ ಯಾದವರಿಗೆ (ಗೊಲ್ಲ) ಎಡಗೈ ಸಮುದಾಯ ಕ್ಕೆ ರಾಜಕೀಯ ಪ್ರಾತಿನಿಧ್ಯವನ್ನು ಈವರೆಗೂ ನೀಡಿಲ್ಲ ಮುಂದಿನ ದಿನಗಳಲ್ಲಿ ಅದನ್ನು ನೀಡಲಾಗುವುದು ಎಂದರು.

 

 

 

ಮಹಾಭಾರತದ ಶ್ರೀಕೃಷ್ಣನಂತೆ ಯಾದವರು ಸತ್ಯ ನಿಷ್ಠೆಯಿಂದ ಇದ್ದಾರೆ ಈ ಸಮುದಾಯ ಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡಿದರೆ ಒಳಿತು ಹಾಗುತ್ತದೆ ಈ ಭಾರಿ ಲೋಕಸಭಾ ಎಂಪಿ ಚುನಾವಣೆ ಜವಾಬ್ದಾರಿ ಎಲ್ಲ ಗೊಲ್ಲ ಸಮುದಾಯ ಮೇಲಿದೆ ಗುಬ್ಬಿ ಕೊರಟಗೆರೆ ಮಧುಗಿರಿ ಹೆಚ್ಚಿನ ಪ್ರಮಾಣದ ಸಮುದಾಯದವಿದ್ದು ಮುದ್ದಹನುಮೇಗೌಡ ಅವರಿಗೆ ಚುನಾವಣೆಯಲ್ಲಿ ಯಾದವ ಸಮಾಜ ಒಗ್ಗಟಾಗಿ ಬೆಂಬಲ ಸೂಚಿಸಬೇಕು ಎಂದರು.

 

 

 

ಭ್ರಷ್ಟಾಚಾರ ತೊಲಗಿಸಲು ಪಣ ತೊಟ್ಟಿರುವ ಎಲಕ್ಟ್ರೋಲ್ ಬಾಂಡ್ ವಿಚಾರದಲ್ಲಿ ಪ್ರಧಾನಿ ಮೊದಿಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದೆ ವಿದೇಶಿದಲ್ಲಿರು ಕಪ್ಪು ಹಣ, ಉದ್ಯೋಗ ನೀಡುವ ಸುಳ್ಳು ಹೇಳಿದ ಮೋದಿ ದೊಡ್ಡ ಸುಳ್ಳುಗಾರ ಆದರೆ ನಾವು ಸುಳ್ಳು ವುದಿಲ್ಲ ಕಾಂಗ್ರೆಸ್ ಪಕ್ಷ ಇಂದಿರಾಗಾಂಧಿ ಕಾಲದಿಂದ ಸ್ವಾತಂತ್ರ್ಯ ಕ್ಕಾಗಿ ಹೋರಾಡಿ ತ್ಯಾಗ ಮಾಡಿದವರು ದೇಶ ಕಟ್ಟುವ ಕಾಂಗ್ರೆಸ್ ನವರು ಮಾಡಿದ್ದಾರೆ ಬಿಜೆಪಿಯ ಯಾವಬ್ಬ ನಾಯಕನು ಸ್ವಾತಂತ್ರಚಳುವಳಿಯಲ್ಲಿ ಯಾರು ಆಗ ಇರಲಿಲ್ಲ ಮೋದಿ ಮತ್ತೆ ಅವರ ಮನೆಯವರು ಇರಲಿಲ್ಲ ಹಾಗಾಗಿ ದೇಶಕ್ಕೆ ಮೋದಿ ಕೊಡುಗೆ ಸೊನ್ನೆ ಎಂದರು.

 

 

 

ಶ್ರಿರಾಮ ದೇವಾಲಯ ಕಟ್ಟಿದ್ದೇವೆ ಎಂದು ಬೀಗುತ್ತಾರೆ ಎಲ್ಲಾ ಊರಿನಲ್ಲಿ ರಾಮರ ದೇವಾಲಯವಿದೆ ಅಯ್ಯೋಧ್ಯೆ ಶ್ರೀರಾಮ ದೇವಾಲಯ ನಿರ್ಮಾಣಕ್ಕೆ ಶಕ್ತಿ ಮೀರಿ ನಾವು ದೇಣಿಗೆ ಕೊಟ್ಟಿದ್ದೇವೆ ಕೊಮುಭಾವನೆ, ಅಧರ್ಮದ ಬಗ್ಗೆ ವಾತಾವರಣ ಸೃಷ್ಟಿ ಮಾಡಿ ಅರಾಜಕತೆ ಸೃಷ್ಠಿ ಮಾಡಿರುವ ಮೋದಿ ಸರ್ಕಾರ ಕ್ಕೆ ದಿಕ್ಕಾರವಿದ್ದು, ಬೆಲೆ ಏರಿಕೆ ಕಾಂಗ್ರೆಸ್ ಸರ್ಕಾರದಲ್ಲಿ ಕಡಿಮೆ ಇದೆ ಆದರೆ ಬಿಜೆಪಿ ಸರ್ಕಾರದ ಇಲ್ಲ ದುಪ್ಪಟ್ಟು ಹಾಗಿದೆ, ರೈತ ಬೆಳೆದ ಬೆಳೆಗೆ ಸರಿಯಾದ ಬೆಲೆ ಇಲ್ಲದಾಗಿದೆ ಇವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ ಹರಿಯಾಣದಿಂದ ಹೋರಾಟಕ್ಕೆ ಹೋದ ರೈತರಿಗೆ ನ್ಯಾಯ ಸಿಕ್ಕಿಲ್ಲ ಹಾಗಾಗಿ ಈ ರೈತ ವಿರೋಧಿ ಸರ್ಕಾರ ಮುಂದಿನ ದಿನ ಕಾರ್ಪೋರೆಟ್ ದೇಶ ವಾಗಲಿದ್ದು ಈ ಕಂಪನಿಗಳು ಬ್ರಿಟಿಷರಂತೆ ನಮ್ಮನ್ನು ಆಳಲಿವೆ ಎಂದರು.

 

 

ಗ್ಯಾರಂಟಿ ಯೋಜನೆಗಳು ಜನರಿಗೆ ಆಶ್ರಯವಾಗಿದ್ದು ಅನ್ನಭಾಗ್ಯ ಬಹು ಮುಖ್ಯವಾಗಿದೆ ವಿಧಾನಸಭಾ ಚುನಾವಣೆ ವೇಳೆ ಘೋಷಣೆ ಮಾಡಿದ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವಹೇಳನ ಕಾರಿಯಾಗಿ ಮಾತನಾಡಿದ್ದಾರೆ ಇವರಿಗೆ ನಾಚಿಕೆಯಾಗಬೇಕು ಇವರು ತಾಯಂದಿರಿಗೆ ಮಾಡಿರುವ ದೊಡ್ಡ ಅವಮಾನ ಇದಾಗಿದೆ ಯಾವ ಮಹಿಳೆಯು ಇವರ ಮಾತು ಒಪ್ಪಲ್ಲ ಹೆಣ್ಣು ಮಕ್ಕಳು ಇದ್ದನ್ನ ಖಂಡಿಸಬೇಕು ಎಲ್ಲರೂ ಎಚ್ಚೆತ್ತಕೊಳ್ಳಬೇಕು ಎಂದು ಟೀಕಿಸಿದರು.

 

 

 

ತುಮಕೂರಿನಲ್ಲಿ ಹೊರಗಡೆಯಿಂದ ಬಂದು ನಿಂತವರಿಗೆ ಇಲ್ಲಿನ ಜನರು ಸೋಲು ಕೊಟ್ಟಿದ್ದಾರೆ ದೇವೆಗೌಡ ಸೇರಿದಂತೆ ಅನೇಕ ಘಟನಾಘಟಿಗಳು ನಾಯಕರು ಇಲ್ಲಿ ಸೋತ್ತಿದ್ದಾರೆ ಅದು ಈಗಾಗಲೇ ಸಾಬೀತಾಗಿದೆ ಮತ್ತೆ ಅದೇ ರೀತಿಯಲ್ಲಿ ಸೋಮ್ಮಣ್ಣ ಅವರನ್ನು ಸೋಲಿಸಬೇಕಾಗಿದೆ ಮೋದಿಯವರು ಇಲ್ಲಿ ಬಂದು ರೋಡ್ ಶೋ ಮಾಡಿದರು ಯಾವುದೇ ಬದಲಾಗಲ್ಲ ಹಾಗಾಗಿ ಅಪಪ್ರಚಾರಕ್ಕೆ ಕಿವಿಗೊಡಬೇಡಿ ಸರ್ಕಾರದ ಸಾಧನೆ ಬಗ್ಗೆ ತಾವುಗಳು ತಮ್ಮ ಅಕ್ಕಪಕ್ಕದವರ ಜೊತೆಗೆ ಮಾತನಾಡಿ ಎಲ್ಲರೂ ಒಗ್ಗಟಾಗಿ ಚುನಾವಣೆಯಲ್ಲಿ ಮತ ನೀಡುವ ಮೂಲಕ ಒಂದಾಗಿ ಮುದ್ದಹನುಮೇಗೌಡ ಅವರಿಗೆ ಮತ ನೀಡುವ ಮೂಲಕ ಸೋಮಣ್ಣನವರ ಸೋಲನ್ನ ಸಾಭಿತು ಮಾಡಬೇಕು, ಅಸಮಾಧಾನ ಹೊರಹಾಕಿ ಕಾಂಗ್ರೆಸ್ ಪಕ್ಷ ಗೆಲ್ಲಿಸಬೇಕು ಎಂದರು.

 

 

 

 

ಗ್ರಾಮಾಂತರ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಅವರು ಮಾತನಾಡಿ ಮಹಾಭಾರತದ ಶ್ರೀಕೃಷ್ಣ ನಂತೆ ಯಾದವ ಸಮುದಾಯದ ಪಾಪಣ್ಣನವರು ಶ್ರೀಕೃಷ್ಣ ಪರಮಾತ್ಮನ ಹಾಗೆ ಮುದ್ದಹನುಮೇಗೌಡ ಅವರ ನಾಮ ಪತ್ರಿಕೆ ದಿನ ಜೋಡೆತ್ತು ಗಾಡಿಯಲ್ಲಿ ನಾಮಪತ್ರಿಕೆ ಸಲ್ಲಿಸಿದ್ದು ತುಮಕೂರು ಜಿಲ್ಲೆಯಲ್ಲಿ ಇತಿಹಾಸ ಹಾಗಾಗಿ ಶ್ರೀ ಕೃಷ್ಣ ರಂತೆ ಇರುವ
ಗೊಲ್ಲ ಸಮುದಾಯದ ಜನರಿಗೆ ಕೇಳುವುದು ಇಷ್ಟೇ ಮುದ್ದಹನುಮೇಗೌಡ ಅವರು ಸ್ಥಳೀಯರು ಆದರೆ ಸೋಮಣ್ಣ ಹೊರಗಿನವರು ಅವರನ್ನು ಭೇಟಿ ಮಾಡಲು ಸಾಧ್ಯವಿಲ್ಲ ಅವರನ್ನು ಭೇಟಿ ಮಾಡಲು ಸಾವಿರಾರು ವ್ಯಹಿಸಿದರು ಭೇಟಿ ಮಾಡಲು ಕಷ್ಣ ಸಾಧ್ಯವಾಗಿದ್ದು ಹಾಗಾಗಿ ಅವರ ಮತ ಹಾಕುವ ತಪ್ಪು ಮಾಡಬೇಡಿ ಎಂದರು.
ಕಾಂಗ್ರೆಸ್ ಸರ್ಕಾರ ಚಿನ್ನ ಕೋಳಿ ಇದ್ದಹಾಗೆ ಚಿನ್ನದ ಮೊಟ್ಟೆ ಕೊಡುತ್ತಿದ್ದೆ ಆದರೆ ಬಿಜೆಪಿಯವರು ಡೈಮಾಂಡ್ ಕೊಡುತ್ತಾರೆ ಎಂದು ಹೊದರೆ ನೀವು ಕೇಡುತ್ತಿರಿ ಕಾಂಗ್ರೆಸ್ ಸರ್ಕಾರದ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಬಳಸಿಕೊಂಡು ಕಾಂಗ್ರೆಸ್ ಗೆ ಮತ ನೀಡಿ ಎಂದರು.

 

 

 

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಹೆಬ್ಬೂರು ಪ್ರಚಾರದ ವೇಳೆ ಕಾಂಗ್ರೆಸ್ ಗ್ಯಾರಂಟಿ ಯಿಂದ‌ ಜನರು ಹಾಳಾಗಿದ್ದಾರೆ ಎನ್ನುವ ಮೂಲಕ ಅನೇಕರಿಗೆ ಆಶ್ರಯವಾಗಿರುವ ಬಡವರ ಗ್ಯಾರಂಟಿಯನ್ನ ಟೀಕಿಸಿದ್ದಾರೆ ಆದರೆ ನೀವು ನಿಮ್ಮ ಬಿಜೆಪಿಯ ಕಾರ್ಯಕರ್ತರ ಸಭೆಯಲ್ಲಿ ಕೇಳಿ ಕಾಂಗ್ರೆಸ್ ಗ್ಯಾರಂಟಿ ದುಡ್ಡು ಎಷ್ಟು ಜನರಿಗೆ ಬಂದಿದೆ ಎಂದು ಜನ ಹೇಳುತ್ತಾರೆ ನಿಮ್ಮ ಕಾರ್ಯಕರ್ತರಿಗೆ ಕಾಂಗ್ರೆಸ್ ಸರ್ಕಾರದ ಎಲ್ಲಾ ಯೋಜನೆಗಳು ಸಿಗುತ್ತಿವೆ ಇಂದು ಗ್ಯಾರಂಟಿ ಯೋಜನೆಗಳನ್ನ ಟೀಕಿಸುವ ಬಿಜೆಪಿಯವರು ಮೊದಲು ಯೋಜನೆ ಪಡೆಯುತ್ತಾರೆ ಎಂದು ಟೀಕಿಸಿದರು.

 

 

 

ಅಹಿಂದ ಸಮಾಜ ಸೇರಿದಂತೆ ಎಲ್ಲಾ ವರ್ಗದವರು ಕಾಂಗ್ರೆಸ್ ಗೆ ಮತ ಹಾಕುತ್ತಾರೆ ಗ್ಯಾರಂಟಿ ಯೋಜನೆಯಿಂದ ಪ್ರಯೋಜನ ಪಡೆದವರು ಕೃತಜ್ಞತೆಗೆ ಮುದ್ದಹನುಮೇಗೌಡ ಅವರಿಗೆ ಮತ ಹಾಕಿ ವಿಶೇಷ ವಾಗಿ ಕಾಂಗ್ರೆಸ್ ಶಕ್ತಿ ಎನು ಎಂದು ತೋರಿಸಿ‌ ಎಂದು ಮನವಿ ಮಾಡಿದರುಎಲ್ಲಾರ ಮುಂದೆ ಭರವಸೆ ನೀಡುತ್ತೇನೆ ತುಮಕೂರು ಗ್ರಾಮಾಂತರದಲ್ಲಿ ವಿಶೇಷವಾಗಿ ಶ್ರಮ ಪಟ್ಟು ಈ ಭಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬಹುಮತ ನೀಡುವ ಮೂಲಕ ಮುದ್ದಹನುಮೇಗೌಡ ಅವರಿಗೆ ಗೆಲವು ತಂದು ಕೊಡುತ್ತೇನೆ ಕ್ಷೇತ್ರದಲ್ಲಿ ಸಂಚಾರ ಮಾಡಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಬಗ್ಗೆ ಮನವರಿಕೆ ಮಾಡಿ ಮತ ಹಾಕಿಸುತ್ತೇನೆ ಎಂದು ಎಲ್ಲರ ಮುಂದೆ ಪ್ರಮಾಣ ಮಾಡಿ ಆಣೆ ಮಾಡುತ್ತೇನೆ ಎಂದರು.

 

 

 

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ವೇಣುಗೋಪಾಲ್, ಗ್ರಾಮಾಂತರ ಕಾಂಗ್ರೆಸ್ ಅಭ್ಯರ್ಥಿ ಷಣ್ಮುಖಪ್ಪ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ಗೌಡ ಗೊಲ್ಲ ಸಮುದಾಯದ ಮುಖಂಡರಾದ ಪ್ರೇಮಾ ಮಹಾಲಿಂಗಪ್ಪ, ಚಿಕ್ಕಣ್ಣ ಹಟ್ಟಿ ಪಾಪಣ್ಣ, ಶಿವಕುಮಾರ್ ಸೇರಿದಂತೆ ಗೊಲ್ಲ ಸಮುದಾಯದ ವಿವಿಧ ಭಾಗಗಳ ಮುಖಂಡರು ಹಾಗೂ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!