ತುಮಕೂರು – ತುಮಕೂರು ನಗರದ ಸ್ಕ್ರಾಪ್ ಯಾರ್ಡ್(SCRAP YARD ಒಂದರಲ್ಲಿ ಅನುಮಾನ ರೀತಿಯಲ್ಲಿ ವ್ಯಕ್ತಿಯ ಮೃತ ದೇಹ ಪತ್ತೆಯಾಗಿದೆ.
ನಗರದ ಉಪ್ಪಾರಳ್ಳಿ ಮುಖ್ಯ ರಸ್ತೆಯಲ್ಲಿ ಇರುವ ತಿರುಮಲ ವೈನ್ಸ್ ಮುಂಭಾಗದಲ್ಲಿ ಇರುವ ಸ್ಕ್ರಾಪ್ ಯಾರ್ಡ್ ನಲ್ಲಿ ಇಂದು ಬೆಳೆ ಬೆಳಗ್ಗೆ ವ್ಯಕ್ತಿ ಒಬ್ಬನ ಮೃತದೇಹ ಪತ್ತೆಯಾಗಿದ್ದು ಸ್ಥಳೀಯರು ಇಂದು ಬೆಳಗ್ಗೆ ಮೃತ ದೇಹವನ್ನು ಕಂಡು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ ಮೇಲೆ ಪ್ರಕರಣ ಬೆಳಕಿಗೆ ಬಂದಿದೆ.
ಮೃತಪಟ್ಟ ವ್ಯಕ್ತಿಯ ಬಗ್ಗೆ ಇದುವರೆಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಮೃತಪಟ್ಟ ವ್ಯಕ್ತಿಯ ತಲೆ ಹಾಗೂ ಮುಖದಲ್ಲ್ಲಿ ಗಂಭೀರ ಗಾಯಗಳ ಗುರುತು ಪತ್ತೆಯಾಗಿದ್ದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿದೆ.
ಮೃತಪಟ್ಟ ವ್ಯಕ್ತಿ ಸ್ಕ್ರಾಪ್ ಯಾರ್ಡ್ ನಲ್ಲಿ ಇದ್ದ ಕಾಂಪೌಂಡ್ ಗೋಡೆ ಹಾರಲು ಮುಂದಾಗಿ ಮೃತಪಟ್ಟಿದ್ದಾನೆ ಎನ್ನಲಾಗುತ್ತಿದ್ದು ಸಾಕಷ್ಟು ಅನುಮಾನ ಮೂಡಿಸಿದೆ.
ನಗರದಲ್ಲಿ ನಡೆದ ಕಾರ್ಯಕ್ರಮವೋಂದರಲ್ಲಿ ಭಾಗವಹಿಸಿದ್ದು ಕಾರ್ಯಕ್ರಮದಲ್ಲಿ ನೀಡಿದ ಮೊಮೆಂಟೊ ಹಾಗೂ ಮಧ್ಯದ ಪ್ಯಾಕೆಟ್ ಸ್ಥಳದಲ್ಲಿ ಪತ್ತೆಯಾಗಿದೆ.
ಇನ್ನು ಸ್ಥಳಕ್ಕೆ ಅಡಿಷನಲ್ ಎಸ್ ಪಿ ಖಾದರ್, ಡಿವೈಎಸ್ಪಿ ಚಂದ್ರಶೇಖರ್, ಜಯನಗರ ರಾಣಿಯ ಪಿಎಸ್ಐ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.
ಮೃತಪಟ್ಟ ವ್ಯಕ್ತಿಯ ಮೃತ ದೇಹವನ್ನು ಜಿಲ್ಲಾಸ್ಪತ್ರೆಗೆ ರವಾನಿಸಿದ್ದು ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ.