ತುಮಕೂರು : ಧರ್ಮೋ ರಕ್ಷತಿ ರಕ್ಷಿತ: ಧರ್ಮದ ರಕ್ಷಣೆ, ಧಾರ್ಮಿಕ ಕೇಂದ್ರಗಳ ರಕ್ಷಣೆ, ಮಠ – ಮಂದಿರಗಳ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ. ನಾವೆಲ್ಲರೂ ಮಠ – ಮಂದಿರಗಳನ್ನು ರಕ್ಷಣೆ ಮಾಡಿ ಬೆಳೆಸಬೇಕಾಗಿದೆ ಹಾಗೂ ಮಠಗಳಲ್ಲಿ ನಡೆಯುವ ವೇದ ಆಗಮ ಶಾಸ್ತ್ರಗಳಲ್ಲಿ ಅರ್ಚಕರು, ವಿದ್ಯಾರ್ಥಿಗಳು ಪರಿಣಿತರಾದರೆ ಭಕ್ತರ ಸಂಖ್ಯೆಯು ವೃದ್ಧಿಯಾಗುತ್ತದೆ. ಇದರಿಂದ ದೇವಸ್ಥಾನಗಳು ಹಾಗೂ ಮಠಗಳ ಅಭಿವೃದ್ಧಿಯನ್ನು ಮಾಡಬಹುದು ಎಂದು ಶ್ರೀ ಶ್ರೀ ಶ್ರೀ ವೀರಭದ್ರ ಶಿವಚಾರ್ಯ ಸ್ವಾಮೀಜಿ, ಬಾಳೆಹೊನ್ನೂರು ಶಾಖ ಮಠ, ಸಿದ್ಧರಬೆಟ್ಟ.ಇವರು ಉಪಸ್ಥಿತ ಎಲ್ಲಾ ಅರ್ಚಕರಿಗೆ ಕರೆ ನೀಡಿದರು. ಅವರು ಮಾರ್ಚ್ 03 ರಂದು ತುಮಕೂರು ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆದ ತುಮಕೂರು ಜಿಲ್ಲಾಮಟ್ಟದ ದೇವಸ್ಥಾನ ಪರಿಷತ್ತಿನಲ್ಲಿ ಮಾತನಾಡುತ್ತಿದ್ದರು. ಈ ಪರಿಷತ್ತಿನಲ್ಲಿ ಸುಮಾರು ನೂರಕ್ಕೂ ಹೆಚ್ಚು ದೇವಸ್ಥಾನದ ಪ್ರತಿನಿಧಿಗಳು ಭಾಗವಹಿಸಿದ್ದರು. ಈ ಪರಿಷತ್ತನ್ನು ಕರ್ನಾಟಕ ದೇವಸ್ಥಾನ ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮವನ್ನು ಶ್ರೀ ವಾಸವಿ ಕನ್ನಿಕ ಪರಮೇಶ್ವರಿ ದೇವಸ್ಥಾನದ ಅಧ್ಯಕ್ಷರಾದ ಶ್ರೀ. ರಮೇಶ್ ಬಾಬು , ಅಯ್ಯಪ್ಪ ಸೇವಾ ಸಮಿತಿಯ ಖಜಾಂಚಿ ಶ್ರೀ. ಮೋಹನ್ ಕುಮಾರ್ , ಶ್ರೀ ಗುಡ್ಡದ ರಂಗನಾಥ ಸ್ವಾಮಿ ದೇವಸ್ಥಾನದ ವಿಶ್ವಸ್ಥರಾದ ಶ್ರೀ. ಮಂಜುನಾಥ್ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಶ್ರೀ. ಚಂದ್ರ ಮೊಗವೀರ ಇವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು.
ದೇವಸ್ಥಾನಗಳಿಂದ ಪ್ರೇಕ್ಷಪಿತವಾಗುವ ಸಕಾರಾತ್ಮಕ ಉರ್ಜೆಯಿಂದ ಅನೇಕ ರೋಗಗಳನ್ನು ದೂರವಾಗುವುವು!
– ಶ್ರೀ. ಚಂದ್ರ ಮೊಗೇರ್, ರಾಜ್ಯ ಸಮನ್ವಯಕರು ಹಿಂದೂ ಜನಜಾಗೃತಿ ಸಮಿತಿ
ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಹಿಂದೂ ದೇವಸ್ಥಾನಗಳನ್ನು ತಮ್ಮ ನಿಯಂತ್ರಣದಲ್ಲಿಟ್ಟು ಅದಕ್ಕೆ ಬರುವ ಆದಾಯವನ್ನು ಲೂಟಿ ಮಾಡುತ್ತಿದ್ದರು. ಸ್ವಾತಂತ್ರ್ಯದ ನಂತರ ನಮ್ಮ ಭಾರತ ಸರ್ಕಾರ ಹಿಂದೂ ಎಂಡೋಮೆಂಟ್ ಆಕ್ಟ್ನಲ್ಲಿ ಯಾವುದೇ ಬದಲಾವಣೆ ಮಾಡದೆ ದೇಶಾದ್ಯಂತ ಸುಮಾರು ನಾಲ್ಕು ಲಕ್ಷ ದೇವಸ್ಥಾನಗಳನ್ನು ಸರಕಾರೀಕರಣ ಗೊಳಿಸಿದೆ. ಕರ್ನಾಟಕದಲ್ಲಿ 25,000 ದೇವಸ್ಥಾನಗಳ ಜಾಗ ಅತಿಕ್ರಮಣವಾಗಿದೆ. ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ದೇವಸ್ಥಾನಗಳನ್ನು ನೆಲಸಮಗೊಳಿಸಲಾಗಿದೆ. ಆದ್ದರಿಂದ ನಾವೆಲ್ಲ ಅರ್ಚಕರು ನಮ್ಮ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಲ್ಲಿ ಶ್ರದ್ಧೆಯನ್ನು ವೃದ್ಧಿ ಮಾಡಿ ನಮ್ಮ ಮಂದಿರಗಳನ್ನು ರಕ್ಷಿಸೋಣ ಎಂದು ಕರೆ ನೀಡಿದರು.
ದೇವಸ್ಥಾನಗಳನ್ನು ಆಧ್ಯಾತ್ಮಿಕ, ಧಾರ್ಮಿಕ ಶಕ್ತಿ ಕೇಂದ್ರಗಳಾಗಿ ನಿರ್ಮಾಣ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ !
– ಶ್ರೀ. ಮಂಜುನಾಥ್ , ಶ್ರೀ ಗುಡ್ಡದ ರಂಗನಾಥ ಸ್ವಾಮಿ ದೇವಸ್ಥಾನದ ವಿಶ್ವಸ್ಥರು, ಮಾದಿಗೊಂಡನಹಳ್ಳಿ.
ಕರ್ನಾಟಕ ಮಂದಿರ ಮತ್ತು ಮಠಗಳ ಮಹಾ ಸಂಘ ಜಿಲ್ಲಾ ಮಟ್ಟದ ಮಂದಿರ ಪರಿಷತ್ತಿನ ಮುಖಾಂತರ ಎಲ್ಲ ದೇವಸ್ಥಾನಗಳ ಅರ್ಚಕರ ವಿಶ್ವಸ್ಥರ ಸಂಘಟನೆ ಮಾಡುತ್ತಿದೆ . ದೇವಸ್ಥಾನದ ಆದಾಯ ಮಾತ್ರ ಸರಕಾರಕ್ಕೆ ಬೇಕು ಆದರೆ ದೇವಸ್ಥಾನಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದಿಲ್ಲ. ಆದ್ದರಿಂದ ನಾವೆಲ್ಲ ಸೇರಿ ದೇವಸ್ಥಾನಗಳ ಸರ್ಕಾರೀಕರಣವನ್ನು ತಡೆಯಬೇಕು. ಧರ್ಮ ಶಿಕ್ಷಣವನ್ನು ಕೊಟ್ಟು ಹಿಂದೂ ಸಂಸ್ಕೃತಿಯನ್ನು ಕಾಪಾಡಬೇಕಾಗಿದೆ. ಎಲ್ಲ ಹಿಂದೂಗಳು ಸಂಘಟಿತರಾದರೆ ಮಾತ್ರ ನಮ್ಮ ದೇವಸ್ಥಾನಗಳನ್ನು ಉಳಿಸಲು ಸಾಧ್ಯ ಎಂದು ತಿಳಿಸಿದರು
ದೇವಸ್ಥಾನಗಳು ಉದ್ಧಾರವಾದರೆ ನಮ್ಮ ಮನೆ, ದೇಶ ಹಾಗೂ ಇಡೀ ಸೃಷ್ಟಿಯೇ ಉದ್ದಾರವಾದಂತೆ ! – ಶ್ರೀ.ರಮೇಶ್ ಬಾಬು, ಶ್ರೀ ವಾಸವಿ ಕನ್ನಿಕ ಪರಮೇಶ್ವರಿ ದೇವಸ್ಥಾನ ಅಧ್ಯಕ್ಷರು , ತುಮಕೂರು ದೇವಸ್ಥಾನಗಳನ್ನು ಉತ್ತಮವಾಗಿ ನಡೆಸಿಕೊಂಡು ಹೋಗುವುದು ಅರ್ಚಕರ ಕರ್ತವ್ಯವಾಗಿದೆ. ನಮ್ಮ ದೇಶದ ಸಂಸ್ಕೃತಿ, ಸಂಸ್ಕಾರವನ್ನು ನಾವು ತಿಳಿದುಕೊಂಡು ದೇವಸ್ಥಾನಕ್ಕೆ ಬರುವ ಭಕ್ತರಿಗೆ ಧರ್ಮ ಶಿಕ್ಷಣ ನೀಡಿ ಭಕ್ತರನ್ನು ದೇವಸ್ಥಾನಕ್ಕೆ ಬರುವಂತೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಇದರಿಂದ ದೇವಸ್ಥಾನದ ಅಭಿವೃದ್ಧಿಯಾಗುತ್ತದೆ.
ದೇವಸ್ಥಾನಗಳ ಪಾವಿತ್ರ್ಯತೆ ಕಾಪಾಡಲು ಎಲ್ಲ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿಗೊಳಿಸಬೇಕು ಎಲ್ಲ ಭಕ್ತಾದಿಗಳು ಸಾತ್ತ್ವಿಕ ಉಡುಪುಗಳನ್ನೇ ಧರಿಸಿ ಬರುವಂತಾಗಬೇಕು ಎಂದು ಬೆಂಗಳೂರು ಹಿಂದೂ ಜನಜಾಗೃತಿ ಸಮಿತಿ ಜಿಲ್ಲಾ ಸಮನ್ವಯಕರಾದ , ಶ್ರೀ. ಶರತ್ ಕುಮಾರ್ ಇವರು ತಿಳಿಸಿದರು.