ಅನಾರೋಗ್ಯದಿಂದ ಅಗಲಿದ ಪತ್ರಕರ್ತನಿಗೆ ಪತ್ರಕರ್ತರ ಸಂಘದಿಂದ ಶ್ರದ್ಧಾಂಜಲಿ

ತುಮಕೂರು:- ಹಿರಿಯ ಪತ್ರಕರ್ತ ಹಾಗೂ ಪತ್ರಿಕಾ ವಿತರಕ ಹೆಬ್ಬೂರಿನ ಹೆಚ್. ಕೆ. ನಾಗೇಂದ್ರ ರವರಿಗೆ ಕಾರ್ಯನಿರತ ಪತ್ರಕರ್ತರ ಜಿಲ್ಲಾ ಸಂಘದಿಂದ ಶ್ರದ್ಧಾಂಜಲಿ ಸಭೆ ನಡೆಸಲಾಯಿತು. ನಗರದ ಪತ್ರಿಕಾ ಭವನದಲ್ಲಿ ತುಮಕೂರು ತಾಲೂಕಿನ ಹಲವಾರು ವರ್ಷಗಳಿಂದ ವಿಜಯ ಕರ್ನಾಟಕ, ವಿಜಯವಾಣಿ, ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿ ಪ್ರಜಾವಾಣಿ ಪತ್ರಿಕೆ ವಿತರಣೆ ವಿಭಾಗದಲ್ಲೂ ಕಾರ್ಯನಿರ್ವಹಿಸುತ್ತಿದ್ದರು ಹೆಚ್ ಕೆ ನಾಗೇಂದ್ರ ರವರು ದೈವಾಧೀನರಾದ ಹಿನ್ನೆಲೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಾಗೂ ಜಿಲ್ಲೆಯ ಪತ್ರಕರ್ತರ ಪರವಾಗಿ ನಡೆದ ಶ್ರದ್ದಾಂಜಲಿ ಸಭೆಯಲ್ಲಿ ನಾಗೇಂದ್ರ ಅವರ ಪೋಟೋ ಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಸಮರ್ಪಿಸಲಾಯಿತು.

 

 

 

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚೀ.ನಿ. ಪುರುಷೋತ್ತಮ್ ಅವರು ಮಾತನಾಡಿ ಪತ್ರಕರ್ತರು ಇತ್ತೀಚೆಗೆ ನಾನಾ ಕಾರಣದಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಅನೇಕ ಪತ್ರಕರ್ತರು ನಮ್ಮನ್ನಾಗಲಿದ್ದು ತುಮಕೂರು ಗ್ರಾಮಾಂತರ ವರದಿಗಾರರಾಗಿದ್ದ ನಾಗೇಂದ್ರ ಅವರು ಪತ್ರಿಕಾ ವೃತ್ತಿ ಮತ್ತು ಪತ್ರಕರ್ತರ ಸಂಘದ ಬಗ್ಗೆ ಅಪಾರ ಕಾಳಜಿ ಇದೆ ನಾಗೇಂದ್ರ ಅವರು ಸರಳ, ಸಜ್ಜನರಾಗಿದ್ದು ಎಲ್ಲಾರೊಡನೆ ಉತ್ತಮ ಗುಣ, ಬಾಂಧವ್ಯವನ್ನು ಹೊಂದಿದ್ದರು ಎಲ್ಲಾ ಅಧಿಕಾರಿಗಳಿಗೆ ಸಿಂಹಸ್ವಪ್ನ ವಾಗಿದ್ದ ಇವರಿಗೆ ಅವರ ಆತ್ಮ‌ಕ್ಕೆ ಚಿರಶಾಂತಿ ಶ್ರದ್ಧಾಂಜಲಿ ಅರ್ಪಿಸಿದ್ದೇವೆ ಎಂದರು.

 

 

ಪತ್ರಕರ್ತರಿಗೆ ಯಾವುದೇ ಸಮಸ್ಯೆಗಳಾಗದಂತೆ ಮಹಾನಗರ ಪಾಲಿಕೆಯಿಂದ ಜಿಲ್ಲಾ ಪತ್ರಕರ್ತರಿಗೆ ಇನ್ಸುರೇನ್ಸ್ ಮಾಡಿಸುತ್ತಿದ್ದು ಹಂತ ಹಂತವಾಗಿ ಮೊವತ್ತು ಪತ್ರಕರ್ತರಿಗೆ ವಿಮೆ ಮಾಡಲಾಗುತ್ತದೆ. ಕೆಲ ತಾಂತ್ರಿಕ ತೊಂದರೆಗಳಿಂದ ವಿಳಂಬವಾಗಿದ್ದು ಕೋಡಲೇ ಶೀಘ್ರವಾಗಿ ವಿಮೆ ಮಾಡಿಸಲಾಗುವುದು, ನಾನಾ ಕಾರಣಗಳಿಂದ ನಿಧನ ಹೊಂದಿದ ಪತ್ರಕರ್ತರಿಗೆ ಮೊದಲು ಹತ್ತು ಸಾವಿರಗಳಿಂದ ಹಣ ಸಹಾಯ ಮಾಡಲು ಹೊರಟ್ಟಿದ್ದು ಜಿಲ್ಲಾ ಪತ್ರಕರ್ತರ ಸಂಘ ಸಂಘದಲ್ಲಿ ಯಾವುದೇ ಹಣಕಾಸಿನ ವ್ಯವಸ್ಥೆ ಇಲ್ಲದಿದ್ದರೂ ಅಕಾಲಿಕ ಮರಣ ಹೊಂದಿದ ಪತ್ರಕರ್ತರಿಗೆ ಸಹಾಯ ಮಾಡಲಾಗಿತ್ತು ಎಂದರು.

 

 

ಸಂಘದ ಪ್ರಧಾನ ಕಾರ್ಯದರ್ಶಿ ರಘುರಾಮ್‌ಮಾತನಾಡಿ ಎಲ್ಲರೂಂದಿಗೆ ಚಟುವಟಿಕೆಯಿಂದ ಇದ್ದ ನಾಗೇಂದ್ರ ಅವರು ಹಲವಾರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಲೀವರ್ ಸಮಸ್ಯೆ ಯಿಂದ ಬಳಲುತ್ತಿದ್ದರು ಅವರ ಹೆಂಡತಿಯವರು ಲೀವರ್ ನೀಡಿದ್ದರು ಅವರು ಬದುಕಿ ಬರಲಿಲ್ಲ ಎಲ್ಲರ ಒಡನಾಟ ಹೊಂದಿದ ಇವರು ಜನಸ್ನೇಹಿಯಾಗಿ ಪತ್ರಿಕೋದ್ಯಮದಲ್ಲಿ ಕೆಲಸ ಮಾಡುತ್ತಿದ್ದರು ಇವರ ಕುಟುಂಬಕ್ಕೆ ದುಖಃ ಭರಿಸುವ ಶಕ್ತಿ ದೇವರು ನೀಡಲಿ ಎಂದರು.

 

 

ನಾಮ ನೀರ್ದೇಶಿತ ನಿರ್ದೇಶಕ ಹರೀಶ್ ಆಚಾರ್ಯ ಮಾತನಾಡಿ ತುಮಕೂರು ಗ್ರಾಮಾಂತರ ವರದಿಗಾರರಾಗಿ ಪ್ರಮುಖ ದಿನ ಪತ್ರಿಕೆ ಗಳಿಗೆ ಸುದ್ದಿ ಕೊಡುತ್ತಿದ್ದರು ನೇರಾ ನಿಷ್ಠುರ ಪತ್ರಕರ್ತರು, ಅನೇಕ ಸಾಮಾಜಿಕ ಸಂಘ‌, ಸಂಸ್ಥೆಗಳ ಕಾಳಜಿ ಇತ್ತು ಇತ್ತಿಚ್ಚಿಗೆ ಪತ್ರಕರ್ತರ ಜೀವನ‌ ಸಂಕಷ್ಠವಾಗಿದ್ದು ಒಳ್ಳೆಯ ಮನಸ್ಸಿನ ವ್ಯಕ್ತಿತ್ವದ ಪತ್ರಕರ್ತರು ‌ಆಗಲುತ್ತಿರುವುದು ತುಂಬಲಾರದ ನಷ್ಟ ಎಂದರು.

 

 

ಶ್ರದ್ಧಾಂಜಲಿ ಸಭೆಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕರಾದ ಸಿ.ಜಯಣ್ಣ, ಕೆ.ಹೆಚ್.ಶಂಕರಪ್ಪ, ಆಹ್ವಾನಿತ ನಿರ್ದೇಶಕರಾದ ರೇಣುಕಾ ಪ್ರಸಾದ್, ಸುರೇಶ್ ಕಾಗೆರೆ, ಮಾಜಿ ಪ್ರಧಾನ ಕಾರ್ಯದರ್ಶಿಗಳಾದ ಎನ್ ಡಿ ರಂಗರಾಜು ಸೇರಿದಂತೆ ವಿವಿಧ ಪತ್ರಿಕೆಗಳ ಸಂಪಾದಕರು ಹಾಗೂ ವರದಿಗಾರರು ಪತ್ರಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!