ತುಮಕೂರು:ಮಾರ್ಚ್ 25ರಿಂದ ಎಸ್.ಎಸ್.ಎಲ್.ಸಿ.ಪರೀಕ್ಷೆಗಳು ಪ್ರಾರಂಭವಾಗುತ್ತಿದ್ದು ಪ್ರತಿ ಕೊಠಡಿಗೆ ಸಿ.ಸಿ.ಕ್ಯಾಮರಾ ಹಾಕಿಸಬೇಕು ಅದನ್ನು ವೆಬ್ ಕ್ಯಾಸ್ಟಿಂಗ್ ಮಾಡಬೇಕು, ಇಂಟರ್ ನೆಟ್ ಹಾಕಿಸಬೇಕು ಎಂದು ಸರ್ಕಾರಿ ಸುತ್ತೋಲೆ ಹೊರಡಿಸಿರುವುದು ಹಾಸ್ಯಾಸ್ಪದ,ಶಿಕ್ಷಣ ಸಚಿವರಿಗೆ ತಮ್ಮ ಇಲಾಖೆಯ ಮೇಲೆ ಹಿಡಿತವೇ ಇಲ್ಲದಂತಾಗಿದೆ,ಮಾಹಿತಿಯೂ ಇಲ್ಲ,ಇದರಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ದಿಗ್ಭ್ರಾಂತರಾಗಿದ್ದಾರೆ,5, 8, 9ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಬೋರ್ಡ್ ಎಕ್ಸಾಂ ಎಂದು ಘೋಷಿಸಿದ್ದು ಅದು ಈಗ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದ್ದು ಇದರಿಂದ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ ಆಯಾಯ ಶಾಲೆಗಳು ತಕ್ಷಣವೇ ೫,೮,೯ನೇ ತರಗತಿ ಮಕ್ಕಳಿಗೆ ಶಾಲಾ ಪರೀಕ್ಷೆ ನಡೆಸಿ ರಿಸೆಲ್ಟ್ ನೀಡಬೇಕು,ಶಿಕ್ಷಣ ಇಲಾಖೆಯ ನಿರ್ಧಾರಗಳು ಗೊಂದಲದ ಗೂಡಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿರವರು ತಿಳಿಸಿದರು.
ಅವರು ಇಂದು ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ಸಿಸಿ ಕೆಮರಾ ಪಿಯು ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಇಲ್ಲ,ಪದವಿ ಪರೀಕ್ಷೆಗಳಿಗೆ ಇಲ್ಲ ಹಾಗಾದರೆ ಎಸ್.ಎಸ್.ಎಲ್.ಸಿ.ವಿದ್ಯಾರ್ಥಿಗಳಿಗೆ ಏಕೆ ಎಂದು ಪ್ರಶ್ನಿಸಿದರು?ಎಸ್.ಎಸ್.ಎಲ್.ಸಿ.ಮಕ್ಕಳ ಮೇಲೆ ನಿರಂತರ ದಬ್ಬಾಳಿಕೆ ಆಗುತ್ತಿದೆ,ಖಾಸಗಿ ಹೈಸ್ಕೂಲ್ ಶಿಕ್ಷಕರಿಗೆ ರೂಂ ಸೂಪರ್ ವೈಸರ್ ಮಾಡಲು ಅವಕಾಶ ನೀಡುತ್ತಿಲ್ಲ ಆದರೆ ಅವರು ಖಡ್ಡಾಯವಾಗಿ ಮೌಲ್ಯಮಾಪನ ಮಾಡಬೇಕೆಂದರೆ ಅದು ಹೇಗೆ?ತಕ್ಷಣವೇ ಸರ್ಕಾರಿ ಸುತ್ತೋಲೆ ಹಿಂಪಡೆಯದಿದ್ದರೆ ನಾವು ಹೋರಾಟ ಮಾಡಲಿದ್ದೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು, ಈಗಿನ ಸರ್ಕಾರ ಬಂದಮೇಲೆ 1-4 ಬಾರಿ ಪಠ್ಯಪುಸ್ತಕ ಪರಿಷ್ಕರಣೆ ಆಗಿದೆ,ಎನ್.ಇ.ಪಿ.ಬೇಡ ಎಂದು ಹೇಳುತ್ತಿದೆ ಆದರೆ ಕಾಂಗ್ರೆಸ್ ಸರ್ಕಾರದ ಶಾಸಕರು,ಮಂತ್ರಿಗಳು ನಡೆಸುತ್ತಿರುವ ಖಾಸಗಿ ಶಾಲೆಗಳು ಎನ್.ಇ.ಪಿ.ಬೇಕು ಎಂದು ಹೇಳುತ್ತಿರುವುದು ಇದಕ್ಕೆ ಸಾಕ್ಷಿ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಎಂ.ಚಿದಾನಂದಗೌಡ ಮಾತನಾಡುತ್ತಾ ಕಳೆದ 8 ತಿಂಗಳಿನಿಂದ ಶಿಕ್ಷಣ ಇಲಾಖೆ ಕತ್ತಲಲ್ಲಿ ಇದೆ,ಪೋಷಕರು,ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ,ಶಿಕ್ಷಣ ಸಚಿವರು ಅಧಿಕಾರ ಮೇಲೆ ಸವಾರಿ ಮಾಡುತ್ತಿದ್ದಾರೆ,ಮುಖ್ಯಮಂತ್ರಿಗಳು ಮಧ್ಯಪ್ರವೇಶ ಮಾಡಿ ಈ ಅನ್ಯಾಯವನ್ನು ತಕ್ಷಣವೇ ಸರಿಪಡಿಸದಿದ್ದರೆ ಬಿಜೆಪಿ ವಿಧಾನಪರಿಷತ್ ಸದಸ್ಯರುಗಳು ಹೋರಾಟ ಮಾಡಲಿದ್ದೇವೆ,ಒಂದು ವೇಳೆ ನ್ಯಾಯಾಲಯ 5, 8, 9 ವಿದ್ಯಾರ್ಥಿಗಳಿಗೆ ಬೋರ್ಡ್ ಎಕ್ಸಾಂ ಮಾಡಿ ಎಂದರೆ ಒಮ್ಮೆಲೆ ಎಸ್.ಎಸ್.ಎಲ್.ಸಿ ಮತ್ತು 5, 8, 9 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಕೊಠಡಿಗಳ ಕೊರತೆ ಎದ್ದು ಕಾಣಲಿದೆ,ಶಿಕ್ಷಣ ಇಲಾಖೆಯ ಕೆಲವು ಎಡವಟ್ಟುಗಳಿಗೆ ವಿದ್ಯಾರ್ಥಿಗಳಿಗೆ ನಿರಂತರ ಅನ್ಯಾಯವಾಗುತ್ತಿದೆ ಆದ್ದರಿಂದ ಶಿಕ್ಷಣ ಇಲಾಖೆಯು ಎಸ್.ಎಸ್.ಎಲ್.ಸಿ.ಪರೀಕ್ಷೆಗೆ ಸಿಸಿ ಕೆಮರಾ ಅಳವಡಿಕೆಯನ್ನು ತಕ್ಷಣವೇ ಕೈಬಿಡಬೇಕು ಎರಡು ದಿನಗಳಲ್ಲಿ ರಾಜ್ಯದ ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಸಿಸಿ ಕೆಮರಾ ಅಳವಡಿಕೆ ಸಾಧ್ಯವೇ?ಇಂಟರ್ ನೆಟ್ ಹಾಕಿಸಲು ಸಾಧ್ಯವೇ?ಅದಕ್ಕೆ ಹಣ ಎಲ್ಲಿಂದ ತರುವುದು ಎಂದು ಶಿಕ್ಷಣ ಇಲಾಖೆಯನ್ನು ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್,ಸಂದೀಪ್ ಗೌಡ,ಶಿವಪ್ರಸಾದ್, ರುದ್ರೇಶ್, ಶಿವಪ್ರಸಾದ್, ಜಿಲ್ಲಾ ಮಾಧ್ಯಮ ಪ್ರಮುಖ್ ಜೆ.ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.