5,8,9 ಮತ್ತು 11ನೇ ತರಗತಿಗೆ ಬೋರ್ಡ್ ಎಕ್ಸಾಂ ಮಾಡಬಾರದು ಎಂಬ ರೂಪ್ಸಾ ಹೋರಟಕ್ಕೆ ಸಂದ ಜಯ : ಲೋಕೇಶ್ ತಾಳಿಕಟ್ಟೆ

ರಾಜ್ಯದಲ್ಲಿನ ಶಾಲಾ ಮಕ್ಕಳು ಅಂದರೆ 5, 8, 9 ಮತ್ತು 11 ನೇ ತರಗತಿ ಮಕ್ಕಳಿಗೆ ಬೋರ್ಡ್ ಎಕ್ಸಾಂ ನ್ನು ಕಳೆದ ಡಿಸೆಂಬರ್ ನಲ್ಲಿ ಕಡ್ಡಾಯಗೊಳಿಸಿದ್ದ  ರಾಜ್ಯ ಸರ್ಕಾರ. ಇದು ಶಾಲಾ ಶಿಕ್ಷಕರಿಗೆ ಬಹಳ ದೊಡ್ಡ ಹೊರೆಯಾಗಿದ್ದನ್ನು ಮನಗಂಡ ರೂಪ್ಸಾ ಕರ್ನಾಟಕ ಲೋಕೇಶ್ ತಾಳಿಕಟ್ಟೆಯವರ ನೇತೃತ್ವದಲ್ಲಿ ಕಳೆದ ವರ್ಷ ಹೈ ಕೋರ್ಟ್ ಮೆಟ್ಟಿಲೇರಿತ್ತು, ಅದರಂತೆ ಈ ಭಾರಿ ಸಹ ರೂಪ್ಸಾ ಕರ್ನಾಟಕ ವತಿಯಿಂದ ಕೋರ್ಟ್ ಮೆಟ್ಟಿಲೇರಿತ್ತು.

 

 

 

ಈ ಕುರಿತು ಮಾತನಾಡಿದ ರೂಪ್ಸಾ ಅಧ್ಯಕ್ಷರಾದ ಲೋಕೇಶ್ ತಾಳಿಕಟ್ಟೆ ರಾಜ್ಯ ಸರ್ಕಾರ ಹೊರಡಿಸಿದ್ದ ಸುತ್ತೋಲೆಯನ್ನು ಹೈಕೋರ್ಟ್ ರದ್ದುಗೊಳಿಸಿದ್ದರ ಪರಿಣಾಮ ರೂಪ್ಸಾ ಸಂಘಟನೆಯ ನಿರಂತರ ಹೋರಾಟಕ್ಕೆ ಸಂದ ಜಯವಾಗಿದೆ, ಏಕೆಂದರೆ ಸಿಸಿಇ ಅಡಿಯಲ್ಲಿ ಎಲ್ಲಾ ಶಿಕ್ಷಕರು ಪಾಠವನ್ನು ಮಾಡುತ್ತಿದ್ದು, ಅವರೇ ಪ್ರಶ್ನೆ ಪತ್ರಿಕೆಗಳನ್ನು ತಯಾರು ಮಾಡಿ ಪರೀಕ್ಷೆಗಳನ್ನು ನಡೆಸಬೇಕಾಗಿರುತ್ತದೆ, ಇದು ಸಿಸಿಇ ಮೂಲ ನಿಯಮವೂ ಆಗಿರುತ್ತದೆ, ಅದನ್ನು ಉಲ್ಲಂಘನೆ ಮಾಡಿ ರಾಜ್ಯ ಸರ್ಕಾರವು ಬೋರ್ಡ್ ಎಕ್ಸಾಂ / ಪರೀಕ್ಷೆ ಮಾಡಲು ಮುಂದಾಗಿತ್ತು ಇದಕ್ಕಾಗಿ ತೀವ್ರ ಹೋರಾಟವನ್ನು ನಮ್ಮ ಸಂಘಟನೆಯಿಂದ ಮಾಡಲಾಯಿತು ಎಂದು ಹೇಳಿದರು.

 

 

 

ಮುಂದುವರೆದು ಮಾತನಾಡುತ್ತಾ ಒಂದು ಮಗುವು ಯಾವ ಸಾಮರ್ಥ್ಯವನ್ನು ಹೊಂದಿದ್ದಾನೆ, ಹೊಂದಿಲ್ಲ ಎಂಬುದು ಆ ತರಗತಿಯ ಶಿಕ್ಷಕರಿಗೆ ತಿಳಿದಿರುತ್ತದೆ, ಆದರೆ ರಾಜ್ಯ ಸರ್ಕಾರದ ಆದೇಶದಿಂದ ಅಂದರೆ ಬೋರ್ಡ್ ಎಕ್ಸಾಂ ಮಾಡುವುದರಿಂದ ಮಕ್ಕಳ ಸಾಮರ್ಥ್ಯವು ಎಷ್ಟಿದೆ ಎಂಬುದು ತಿಳಿದಿರುವುದಿಲ್ಲ. ಹಾಗಾಗಿ ಮಗುವು ಪರೀಕ್ಷೆಯಲ್ಲಿ ತನ್ನ ಸಾಮರ್ಥ್ಯಕ್ಕೆನುಗುಣವಾಗಿ ಪರೀಕ್ಷೆಯನ್ನು ಎದುರಿಸಲು ಸಾಧ್ಯವಾಗುವುದಿಲ್ಲ, ಜೊತೆಗೆ ಅದನ್ನು ಉನ್ನತೀಕರಿಸಲು ಸಹ ಮಕ್ಕಳಿಗೆ ಸಾಧ್ಯವಾಗದ ಹಿನ್ನಲೆಯಲ್ಲಿ ಏಕೆಂದರೆ ಶಿಕ್ಷಣ ನೀತಿಯ ವಿರುದ್ಧವಾಗಿದೆ, ಈ ಕುರಿತು ನಾವು ತೀವ್ರ ಹೋರಾಟವನ್ನು ಪ್ರಾರಂಭಿಸಿದೆವು ಎಂದು ತಿಳಿಸಿದರು.

 

 

 

ಗುಣಾತ್ಮಕ ಶಿಕ್ಷಣ ನೀಡುವುದು ನಮ್ಮ ಧರ್ಮ ಹಾಗಂತಾ ಬೋರ್ಡ್ ಪರೀಕ್ಷೆಗಳಂತಹ ಕಠಿಣ ಪರೀಕ್ಷೆಗಳನ್ನು ನೀಡುವುದು ಗುಣಾತ್ಮಕ ಶಿಕ್ಷಣವಲ್ಲ, ಗುಣಾತ್ಮಕ ಶಿಕ್ಷಣವೆಂದರೆ ಪಠ್ಯಪುಸ್ತಕಗಳನ್ನು ಸಮರ್ಪಕವಾಗಿ ನೀಡಿ, ಖಾಲಿಯಿರುವ ಶಿಕ್ಷಕ ಹುದ್ದೆಗಳನ್ನು ಭರ್ತಿ ಮಾಡುವುದರಿಂದ ಗುಣಾತ್ಮಕ ಶಿಕ್ಷಣವನ್ನು ನೀಡಬಹುದಾಗಿದೆ ಎಂದು ಲೋಕೇಶ್ ತಾಳಿಕಟ್ಟೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಅಲ್ಲದೇ ನಮ್ಮ ನಿರಂತರ ಹೋರಾಟಕ್ಕೆ ಸಂದ ಜಯವಾಗಿದೆ ಈ ನಡೆಯಿಂದ ನಮಗೆ ಅತ್ಯಂತ ಸಂತಸಕರ ವಿಷಯವಾಗಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!