ತುಮಕೂರು : ಪೋಕ್ಸೋ ಕೇಸ್ ಆರೋಪದ ಮೇಲೆ ಪೊಲೀಸರ ಅತಿಥಿಯಾಗಿರುವ ಕುಣಿಗಲ್ ತಾಲ್ಲೂಕು ಹುಲಿಯೂರುದುರ್ಗದ ವಿದ್ಯಾಚೌಡೇಶ್ವರಿ ಪೀಠದ ಬಾಲಮಂಜುನಾಥ ಸ್ವಾಮೀಜಿಯನ್ನು ತುಮಕೂರಿನ ಮಕ್ಕಳ ಸ್ನೇಹಿ ವಿಶೇಷ ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಿದರು.
ಪೊಲೀಸರ ಬಿಗಿ ಸರ್ಪಗಾವಲಿನಲ್ಲಿ ಸ್ವಾಮೀಜಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು,ನ್ಯಾಯಾಲಯಕ್ಕೆ ಹಾಜರಾಗಿ ವಾಪಾಸು ಬಂದ ವೇಳೆ ನೆರೆದಿದ್ದ ಅಪಾರ ಭಕ್ತವೃಂದ ಸ್ವಾಮೀಜಿಗಳ ಉಭಯಕುಶಲೋಪರಿ ವಿಚಾರಿಸಿದರು.ಬಳಿಕ ಪೊಲೀಸ್ ವಾಹನದಲ್ಲಿಯೇ ಅವರನ್ನು ಕರೆದೊಯ್ದರು.