ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್‌ಗೆ ಸೇರಿದ ರೋಟರಿ ತುಮಕೂರು ಪ್ರೇರಣಾ

ರೋಟರಿ ತುಮಕೂರು ಪ್ರೇರಣಾ ವತಿಯಿಂದ ಕರ್ನಾಟಕದಾದ್ಯಂತ 47 ಶಾಲೆಗಳಲ್ಲಿ 47 ನುರಿತ ತರಬೇತುದಾರರುಗಳಿಂದ “ಅರ್ಲಿ ಪ್ಯಾಷನ್” ಎಂಬ ವಿಷಯದ ಬಗ್ಗೆ ಏಕಕಾಲದಲ್ಲಿ 5000 ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿತ್ತು ಈ ಕಾರ್ಯಕ್ರಮವು ಇತ್ತೀಚೆಗೆ ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ ಸೇರಲಾಗಿದೆಯೆಂದು ಪ್ರೇರಣಾ ಅಧ್ಯಕ್ಷರಾದ ಜನಾರ್ಧನ್ ಜಿ.ಎನ್ ರವರು ಹರ್ಷ ವ್ಯಕ್ತಪಡಿಸಿದರು. ರೋಟರಿ ತುಮಕೂರು ಪ್ರೇರಣಾ ಸಂಸ್ಥೆಯು ಹೆಚ್ಚು ಶಿಕ್ಷಣಕ್ಕೆ ಆದ್ಯತೆಯನ್ನು ನೀಡಿರುವುದರಿಂದ ಹೆಚ್ಚು ವಿದ್ಯಾರ್ಥಿಗಳಿಗೆ ಯೋಜನೆಗಳನ್ನು ರೂಪಿಸುತ್ತಾ ಬಂದಿರುತ್ತದೆ ಎಂದು ತಿಳಿಸಿದರು.

 

 

ಈ ಸಾಧನೆಯಲ್ಲಿ ಭಾಗವಹಿಸಿದ ಎಲ್ಲಾ ತರಬೇತುದಾರರಿಗೆ ರೋಟರಿ ತುಮಕೂರು ಪ್ರೇರಣ ಕನ್ನಡಭವನದಲ್ಲಿ ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ ಪ್ರಮಾಣ ಪತ್ರ ನೀಡಿ ಸನ್ಮಾನಿಸಲಾಯಿತು.  ಕಾರ್ಯಕ್ರಮದ ುದ್ಘಾಟಕರಾಗಿ ಆಗಮಿಸಿದ್ದ 2024-25 ರ ಜಿಲ್ಲಾ ಪಾಲಕರು ರೊ.ಮಹದೇವ ಪ್ರಸಾದ್ ರವರು ಮಾತನಾಡಿ ಶಿಕ್ಷಕರು ಸಮಾಜವನ್ನು ಉತ್ತಮವಾಗಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ. ಪ್ರೇರಣಾ ತಂಡವು ಶಿಕ್ಷಣ ಕ್ಷೇತ್ರದಲ್ಲಿ ನಡೆಸುತ್ತಿರುವ ಕ್ರಾಂತಿ ಮುಂದಿನ ದಿನಗಳಲ್ಲಿ ಎಲ್ಲೆಡೆ ಪಸರಿಸಲಿದೆ ಎಂದರು.

 

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಿಕ್ಷಣ ತಜ್ಞರಾದ ಶ್ರೀ ರಂಗದಾಸಪ್ಪನರು ಮಾತನಾಡಿ ರೋಟರಿ ಸಂಸ್ಥೆಯು ಜಿಲ್ಲೆಯಾದ್ಯಾಂತ 100ಕ್ಕೂ ಹೆಚ್ಚು ಶಾಲೆಗಳಲ್ಲಿ ಕುಡಿಯುವ ನೀರಿನ ಘಟಕಗಳನ್ನು ಕಳೆದ ಐದಾರು ವರ್ಷಗಳಲ್ಲಿ ನೀಡಿರುವುದು ಹರ್ಷದ ಸಂಗತಿಯಾಗಿದೆ ಮುಂದುವರೆದು ಹಲವಾರು ಶಾಲೆಗಳಲ್ಲಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿರುವುದು ಅರ್ಥಪೂರ್ಣವಾಗಿದೆ ಹೀಗೆ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳ ಬೆಳವಣಿಗೆಗೆ ಸಹಕಾರವಾಗುವಂತಹ ಕಾರ್ಯಕ್ರಮಗಳನ್ನು ಮುಂದುವರೆಸಲಿ ನಮ್ಮಗಳ ಸಹಕಾರವು ಅದರೊಂದಿಗೆ ಸದಾ ಇರಲಿದೆ ಎಂದು ತಿಳಿಸಿದರು ಮತ್ತು ಈ ಸಾಧನೆಯನ್ನು ಮಾಡಿರುವ ಎಲ್ಲಾ ತರಬೇತುದಾರರಿಗೆ ಅಭಿನಂದನೆಗಳನ್ನು ವ್ಯಕ್ತಪಡಿಸುತ್ತಾ ಹಲವಾರು ಶಿಕ್ಷಕರು ರೋಟರಿ ಇಂರ್ಟನ್ಯಾಷನಲ್ ಸಂಸ್ಥೆಯಲ್ಲಿಯೂ ಸೇವೆ ಮಾಡುತ್ತಿರುವುದು ತುಂಬಾ ಸಂತೋಷದ ವಿಷಯ ಎಂದರು.

 

 

ವೇದಿಕೆಯಲ್ಲಿ ರೊ. ರಾಜೇಶ್ವರಿ ಮದೇವ ಪ್ರಸಾದ್, ರೊ. ಪ್ರಕಾಶ್ ಎಂ.ಎಸ್, ರೊ. ಮಲ್ಲಿಕಾರ್ಜುನ ಸ್ವಾಮಿ ಮತ್ತು ರೊ. ರಾಜಶೇಖರ್ ಎನ್ ರವರು ಹಾಜರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ರೊ.ನಯನ ಜನಾರ್ಧನ್ ರವರು ನಡೆಸಿದರು ವಂದನಾರ್ಪಣೆಯನ್ನು ಕಾರ್ಯದರ್ಶಿ ರೊ. ಉಮಾಮಹೇಶ ರವರು ಸಲ್ಲಿಸಿದರು.

Leave a Reply

Your email address will not be published. Required fields are marked *

error: Content is protected !!