ತುಮಕೂರು: ರೈಲ್ವೆ ನಿಲ್ದಾಣದಲ್ಲಿ ಆಗುವ ಅವಗಡಗಳಿಗೆ ತುರ್ತು ಸೂಕ್ತ ಚಿಕಿತ್ಸೆ ನೀಡುವ ಸಲುವಾಗಿ ರೈಲ್ವೆ ನಿಲ್ದಾಣದಲ್ಲಿ ತೆರೆದಿರುವ ‘ಸಿದ್ದಾರ್ಥ ಕ್ಲಿನಿಕ್ ‘ ಸಹಕಾರಿಯಾಗಲಿದೆ ಎಂದು ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿ, ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ ಪರಮೇಶ್ವರ್ ಅವರು ತಿಳಿಸಿದರು.
ನಗರದ ರೈಲ್ವೇ ನಿಲ್ದಾಣದಲ್ಲಿ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ವತಿಯಿಂದ ಆರಂಭಿಸಲಾದ ‘ತುರ್ತು ಚಿಕಿತ್ಸೆ ಕೇಂದ್ರವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಗೃಹ ಸಚಿವರು ತುಮಕೂರು ರೈಲ್ವೆ ನಿಲ್ದಾಣದ ಆಜುಬಾಜಿನಲ್ಲಿ ಆಗುವ ಅಪಘಾತ ಸೇರಿದಂತೆ ಇತರೆ ಸಮಸ್ಯೆಗಳು ಜರುಗಿದಾಗ ತುರ್ತು ಚಿಕಿತ್ಸೆ ದೊರೆಯಲಿ ಎಂಬ ಆಶಯದಿಂದ ಶ್ರೀ ಸಿದ್ದಾರ್ಥ ವೈದ್ಯಕೀಯ ಮಹಾವಿದ್ಯಾಲಯದ ಆಶ್ರಯದಲ್ಲಿ ಸಿದ್ದಾರ್ಥ ತುರ್ತು ಚಿಕಿತ್ಸೆ ಘಟಕ ತೆರೆಯಲಾಗಿದೆ ಎಂದರು.
ಅಪಘಾತಗಳಾದಾಗ ಮನುಷ್ಯನಿಗೆ ಚಿಕಿತ್ಸೆ ಅತಿ ಮುಖ್ಯವಾಗಿದ್ದು ಇಂತಹ ಸಂದರ್ಭದಲ್ಲಿ ತುರ್ತು ಚಿಕಿತ್ಸೆ ಕೇಂದ್ರ ಅವಶ್ಯಕತೆ ಇರುತ್ತದೆ ನಿಟ್ಟಿನಲ್ಲಿ ರೈಲ್ವೆ ಪ್ರಯಾಣಿಕರಿಗೆ ಉಪಯೋಗವಾಗುವ ಪ್ರೀತಿಯಲ್ಲಿ ಚಿಕಿತ್ಸಾ ಕೇಂದ್ರದಲ್ಲಿ ಎಮರ್ಜೆನ್ಸಿ ಡಾಕ್ಟರ್ ಜೊತೆಗೆ ಸುಶೂಶ್ರಕಿಯರು ಔಷಧಿ ಸೇರಿದಂತೆ ಒಂದು ಆಂಬುಲೆನ್ಸ್ ಕೂಡ ಇಲ್ಲಿ ಲಭ್ಯವಿರಲಿದೆ ಎಂದು ಅವರು ಹೇಳಿದರು.
ಜನರ ಅಗತ್ಯತೆಗಳಿಗೆ ಜವಾಬ್ದಾರಿಯುತ ಮತ್ತು ಸ್ಪಂದಿಸುವ ಸಮಾನ, ಕೈಗೆಟುಕುವ ಮತ್ತು ಗುಣಮಟ್ಟದ ಆರೋಗ್ಯ ಸೇವೆಗೆ ಮುಂದಾಗುವುದು ಇಂದಿನ ಅಗತ್ಯವಾಗಿದೆ ಎಂದು ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಸವ್ಯಸಾಚಿ ಡಾ. ಜಿ.ಪರಮೇಶ್ವರ ಹೇಲಿದರು. ಸಾರ್ವಜನಿಕ ಪ್ರದೇಶಗಳಲ್ಲಿ ಮೂಲಭೂತ ಸೌಲಭ್ಯಗಳು ಜನರಿಗೆ ತಲುಪಬೇಕು. ಅದೇ ರೀತಿ ಸಾವಿರಾರು ಜನ ದಿನನಿತ್ಯ ಪ್ರಯಾಣಿಸುವ ರೈಲ್ವೆ ನಿಲ್ದಾಣದಲ್ಲಿ ಪ್ರಾಥಮಿಕ ಮಟ್ಟದ ಸೇವಾ ಕೇಂದ್ರ ಇರಬೇಕೆಂಬ ಆಶಯದಿಂದ ರೈಲ್ವೆ ಇಲಾಖೆ ಸಹಕಾರದಿಂದ ಸಿದ್ದಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ಈ ಘಟಕ ತೆರೆಯಲಾಗಿದೆ ಎಂದರು.
ತುರ್ತು ಚಿಕಿತ್ಸಾ ಕೊಠಡಿ ಲೋಕಾರ್ಪಣೆ ವೇಳೆ ಸೌಥ್ ವೆಸ್ಟರ್ನ್ ರೈಲ್ವೆ ಬೆಂಗಳೂರು ವಿಭಾಗದ ವ್ಯವಸ್ಥಾಪಕರಾದ ಯೋಗೇಶ್ ಮೋಹನ್, ಸಾಹೇಬ್ ವಿಶ್ವವಿದ್ಯಾಲಯದ ಸದಸ್ಯರಾದ ಕನ್ನಿಕಾ ಪರಮೇಶ್ವರ್, ಸಾಹೇ ವಿ.ವಿ. ಉಪಕುಲಪತಿಗಳಾದ ಡಾ.ಬಿ.ಕೆ. ಲಿಂಗೇಗೌಡ, ಕುಲಾಧಿಪತಿಗಳ ಸಲಹೆಗಾರರಾದ ಡಾ. ವಿವೇಕ್ ವೀರಯ್ಯ, ರಿಜಿಸ್ಟರ್ ಎಂ ಜೆಡ್ ಕುರಿಯನ್, ಸಿದ್ದಾರ್ಥ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರುಗಳಾದ ಡಾ.ಶಾಣಿಕೊಪ್ಪ, ಡಾ.ಪ್ರವೀಣ್ ಕುಡುವಾ, ಡಾ. ಪ್ರಭಾಕರ್ ಸೇರಿದಂತೆ ಜಿಲ್ಲಾ ಪಂಚಾಯಿತಿ ಸಿಇಓ ಜಿ ಪ್ರಭು, ಎಸ್ ಪಿ ಅಶೋಕ್ ವೆಂಕಟ್, ಮಹಾನಗರ ಪಾಲಿಕೆ ಆಯುಕ್ತರಾದ ಅಶ್ವಿಜಾ ಸೇರಿದಂತೆ ರೈಲ್ವೆ ನಿಲ್ದಾಣದ ಅಧಿಕಾರಿಗಳು, ಶ್ರೀ ಸಿದ್ಧಾರ್ಥ ವೈದ್ಯಕೀಯ ಮಹಾ ವಿದ್ಯಾಲಯದ ಕಾಲೇಜಿನ ಸಿಬ್ಬಂದಿಗಳು ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು.