ಶ್ರೀ ಸಿದ್ಧಾರ್ಥ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ಶೈಕ್ಷಣಿಕ ಚಟುವಟಿಕೆಗಳ ಉದ್ಘಾಟನೆ, Rank ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿಗಳಾದ ಶ್ರೀ ಬಿ.ನಂಜುಂಡಪ್ಪ ರವರು ಮಾತನಾಡುತ್ತಾ ಇಡೀ ಪ್ರಪಂಚದಲ್ಲಿ ಶಿಕ್ಷಣ ಮಾತ್ರವೇ ವ್ಯಕ್ತಿಯನ್ನು ಶ್ರೀಮಂತ ಹಾಗೂ ಶ್ರೇಷ್ಠ ವ್ಯಕ್ತಿಯನ್ನಾಗಿ ರೂಪಿಸುವ ಶಕ್ತಿ ಇದೆ, ಅದನ್ನು ಶ್ರದ್ಧೆಯಿಂದ ಪಡೆಯಬೇಕು ಎಂದು ಪ್ರತಿಪಾದಿಸಿದರು.
ಒಬ್ಬ ಸಾಮಾನ್ಯ, ಕಂಡು ಬಡವನ ಮಗನೂ ಮೆಚ್ಚುಗೆ ಗಳಿಸಿ, ಧನಸಹಾಯ ಪಡೆಯುವ ಹಂತಕ್ಕೆ, ವಿದೇಶದಲ್ಲಿ ವ್ಯಾಸಂಗ ಮಾಡುವ ಸ್ಥಾನಕ್ಕೆ ಬೆಳೆದನೆಂದರೆ ಅದಕ್ಕೆ ಆತ ಪಡೆದ ಶಿಕ್ಷಣ, ಅದರಲ್ಲಿ ಮಾಡಿದ ಸಾಧನೆಯೇ ಕಾರಣ.
ಹೆಣ್ಣು ಮಕ್ಕಳೇ ಎಲ್ಲಾ ಕ್ಷೇತ್ರಗಳಲ್ಲೂ ಮುಂದೆ ಬರುತ್ತಿದ್ದಾರೆ, ಬಿ.ಇಡಿ ಶಿಕ್ಷಣ ಮಹಾವಿದ್ಯಾಲಯಗಳಲ್ಲೂ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಾಗಿದೆ, ಇದು ಸಕಾಲ ಕೂಡ, ತಾಯಿ ಮಕ್ಕಳಿಗೆ ಕಲಿಸುವಂತೆ ಎಲ್ಲಾ ಮಹಿಳಾ ಶಿಕ್ಷಕರು ಮಕ್ಕಳಿಗೆ ಕಲಿಸಬೇಕು ಎಂದರು. ಕಾರ್ಯಕ್ರಮದಲ್ಲಿ Rank ಪಡೆದ ವಿಧ್ಯಾರ್ಥಿಗಳಾದ ರಂಜಿತಾ ಎನ್ ಆರ್, ಮತ್ತು ನಂದಿತಾ ಜಿ.ಡಿ ರವರನ್ನು ಅಭಿನಂದಿಸಲಾಯಿತು. ನಿವೃತ್ತಿ ಹೊಂದಿದ ಗ್ರಂಥಪಾಲಕರಾದ ಜಯಪ್ಪ ರವರನ್ನು ಅಭಿನಂದಿಸಲಾಯಿತು.
ಪ್ರಾಂಶುಪಾಲರಾದ ಡಾ. ಕೆ.ಎಸ್ ಸಿದ್ದರಾಜು, ಸಹಾಯಕ ಆಡಳಿತಾಧಿಕಾರಿ ಖಲಂದರ್ ಪಾಷಾ, ಹಿರಿಯ ಪ್ರಾಧ್ಯಾಪಕರಾದ ಪ್ರೊ ಲತಾ ಬಿ.ಎಸ್, ಹೇಮಲತಾ, ಡಾ. ಮಾರುತಿ ಎನ್ ಎನ್, ಲಲಿತಾ ಕೆ.ಆರ್, ಕನ್ಯಾಕುಮಾರಿ, ಡಾ ಅಶ್ವತ್ಥ.ಕೆ ಮತ್ತು ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.