5,8,ಹಾಗೂ 9ನೇ ತರಗತಿಗಳ ಬೋರ್ಡ್ ಪರೀಕ್ಷೆ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಕನಿಷ್ಠ 15ರೂ ಹೆಚ್ಚಳ ಮಾಡಬೇಕೆಂದು ರುಪ್ಸ ಕರ್ನಾಟಕ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ ಆಗ್ರಹಿಸದ್ದಾರೆ.
ಅವರು ಈ ಸಂಬಂಧ ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಪತ್ರ ಬರೆದಿದ್ದು, ಕಳೆದ ವರ್ಷದಿಂದ ರಾಜ್ಯ ಸರ್ಕಾರ 5 8 ಮತ್ತು 9ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆ ನಡೆಸುತ್ತಿದ್ದು ಉತ್ತರ ಪತ್ರಿಕೆಗಳನ್ನು ಶಿಕ್ಷಕರಿಂದ ಮೌಲ್ಯಮಾಪನ ಮಾಡಿಸುತ್ತಿದ್ದು ಪ್ರತಿ ಉತ್ತರ ಪತ್ರಿಕೆಗೆ ಕೇವಲ ಎರಡು ರೂಗಳನ್ನು ಪಾವತಿ ಮಾಡಲಾಗುತ್ತಿದೆ. ಶಿಕ್ಷಣ ಇಲಾಖೆ ಶಿಕ್ಷಕರನ್ನು ಅತ್ಯಂತ ಅಮಾನವೀಯವಾಗಿ ನಡೆಸಿಕೊಂಡಿದ್ದು ಸುಮಾರು 1.66 ಕೋಟಿ ಉತ್ತರ ಪತ್ರಿಕೆಗಳನ್ನು ಮೂರು ದಿನಗಳಲ್ಲಿ ಮೌಲ್ಯಮಾಪನ ಮಾಡಿ ಫಲಿತಾಂಶ ನೀಡುವಂತೆ ಒತ್ತಡ ಹಾಕಿದೆ. ಆದಾಗ್ಯೂ ಸಹ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಹಕ್ಕಿಯ ಮಾತ್ರ ಹೆಚ್ಚಳವಾಗಿಲ್ಲ. ಆದ್ದರಿಂದ ಮೌಲ್ಯಮಾಪಕರಿಗೆ ಪ್ರತಿ ಪತ್ರಿಕೆಗೆ 15 ರೂ ಯುಗಾದಿ ಮಾಡಬೇಕು ಹಾಗೂ 400 ರೂಗಳಷ್ಟು ದಿನ ಬತ್ತಿಯನ್ನು ನೀಡಬೇಕೆಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.