ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಎಗ್ಗಿಲ್ಲದೇ ಸಾಗುತ್ತಿದೆ ಆಂಬ್ಯುಲೆನ್ಸ್ ಮಾಫೀಯಾ

ತುಮಕೂರು ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಅಕ್ರಮ ಆಂಬ್ಯುಲೆನ್ಸ್ ದಂಧೆ ರಾಜಾರೋಷವಾಗಿ ನಡೆಯುತ್ತಿದ್ದು ಇದಕ್ಕೆ ಕಡಿವಾಣ ಹಾಕುವವರೇ ಧಿಕ್ಕಿಲದ್ದಂತಾಗಿದೆ. ತುಮಕೂರಿನ ಹೃದಯಭಾಗದಲ್ಲಿರುವ ಜಿಲ್ಲಾ ಆಸ್ಪತ್ರೆಯ ನುರಿತ ಟ್ರಾಮಾ ಕೇರ್ ಸೆಂಟರ್ ಬಳಿ ಖಾಸಗಿ ಆಂಬ್ಯುಲೆನ್ಸ್ ಗಳ ದರ್ಬಾರ್ ಶುರುವಾಗಿದ್ದು ಇವರು ಬಡವರ ರಕ್ತ ಹೀರುವ ರಣ ಹದ್ದುಗಳಂತೆ ವರ್ತಿಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಠೀಕೆಗೆ ಗುರಿಯಾಗಿದೆ.

 

ಸ್ಥಳೀಯ ಸುದ್ಧಿ ವಾಹಿನಿಗಳಲ್ಲಿ ಆಂಬ್ಯುಲೆನ್ಸ್ ದಂಧೆ ಬಗ್ಗೆ ವಿಸ್ತೃತ ವರದಿ ಪ್ರಕಟವಾದ ಬೆನ್ನಲ್ಲೇ 3 – 4 ದಿನ ಜಿಲ್ಲಾ ಆಸ್ಪತ್ರೆ ಆವರಣದಿಂದ ಖಾಸಗಿ ಆಂಬ್ಯುಲೆನ್ಸ್ ಗಳನ್ನು ಎತ್ತಂಗಡಿ ಮಾಡಲಾಗಿತ್ತು, ಇದೀಗ ನೂತನ ಜಿಲ್ಲಾ ಶಸ್ತ್ರಚಿಕಿತ್ಸಕರಾಗಿ ಶ್ರೀಯುತ ಅಸ್ಗರ್ ಭೇಗ್ ರವರು ಅಧಿಕಾರ ವಹಿಸಿಕೊಂಡ ನಂತರ ಆಂಬ್ಯುಲೆನ್ಸ್ ಮಾಫೀಯಾ ಮತ್ತೆ ಚಿಗುರಿದೆ.

 

ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಂಜುನಾಥ್ ಅವರನ್ನು ಕೇಳಲಾಗಿ ನನಗೂ ಇದಕ್ಕೂ ಸಂಬಂಧವಿಲ್ಲ, ಜಿಲ್ಲಾ ಶಸ್ತ್ರಚಿಕಿತ್ಸಕರು ಹಾಗೂ ಆರ್.ಎಂ.ಒ. (ಸ್ಥಾನಿಕ ವೈದ್ಯಾಧಿಕಾರಿಗಳು) ಕ್ರಮ ಜರುಗಿಸಬೇಕು ಎಂದು ಉಡಾಫೆ ಉತ್ತರ ನೀಡುತ್ತಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಒಟ್ಟಾರೆ ಆರೋಗ್ಯಾಧಿಕಾರಿಗಳ ಚಲ್ಲಾಟ

Leave a Reply

Your email address will not be published. Required fields are marked *

error: Content is protected !!