ತುಮಕೂರು ಜಿಲ್ಲಾಡಳಿತದಲ್ಲಿ ಇಂದು ಮೇಜರ್ ಸರ್ಜರಿ ಮಾಡಿ ಆದೇಶ ಮಾಡಿದ ಜಿಲ್ಲಾಧಿಕಾರಿ

ತುಮಕೂರು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಜಿಲ್ಲಾಧಿಕಾರಿಗಳ ಆಪ್ತ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದ ಹೇರಂಭ ಅವರನ್ನು ತುಮಕೂರಿನಿಂದ ಗುಬ್ಬಿ ತಾಲ್ಲೂಕು ಕಛೇರಿಗೆ ವರ್ಗಾವಣೆ ಮಾಡಲಾಗಿದೆ.

 

ಹೇರಂಭ ಸೇರಿದಂತೆ ಪ್ರಥಮ ದರ್ಜೆ ಸಹಾಯಕರಾದ ಶಶಿಧರ್ ಮತ್ತು ದ್ವಿತೀಯ ದರ್ಜೆ ಸಹಾಯಕರಾದ ಸುಮಿತ್ರ ರವರುಗಳನ್ನು ವರ್ಗಾವಣೆ ಮಾಡಲಾಗಿದೆ. ಇನ್ನು ಹೇರಂಭ ಅವರನ್ನು ವರ್ಗಾವಣೆ ಮಾಡುವಂತೆ ಕಳೆದ ವಾರ ಕುಣಿಗಲ್ ಹೆಚ್.ಜಿ.ರಮೇಶ್ ಅವರ ನೇತೃತ್ವದಲ್ಲಿ ರಾಜ್ಯ ಮಾಹಿತಿ ಹಕ್ಕು ಹೋರಾಟಗಾರರ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಿ ಹೇರಂಭ ಅವರನ್ನು ವರ್ಗಾವಣೆ ಮಾಡುವಂತೆ ಮನವಿಯನ್ನು ಸಲ್ಲಿಸಿದ್ದರು, ಮನವಿಯಲ್ಲಿ ಹೇಳಿದ್ದಂತೆ ಕಳೆದ ಎರಡು ದಿನಗಳಿಂದ ಜಿಲ್ಲಾಧಿಕಾರಿಗಳ ಕಛೇರಿ ಬಳಿ ಪ್ರತಿಭಟನೆಯನ್ನು ಸಹ ಮಾಡುತ್ತಿದ್ದರು.

ಇದರ ಬೆನ್ನಲ್ಲಿಯೇ ಹೇರಂಭ ಸೇರಿದಂತೆ ಶಶಿಧರ್ ಮತ್ತು ಸುಮಿತ್ರ ಅವರ ವರ್ಗಾವಣೆಯನ್ನೂ ಮಾಡಿ ಮೇಜರ್ ಸರ್ಜರಿ ಮಾಡಿರುವ ತುಮಕೂರು ಜಿಲ್ಲಾಡಳಿತ ಹತ್ತಾರು ವರ್ಷಗಳಿಂದ ಒಂದೇ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದವರಿಗೆ ಬಿಗ್ ಶಾಕ್ ನೀಡಿದ್ದಾರೆ ಎನ್ನಲಾಗಿದೆ.

ಇನ್ನುಳಿದಂತೆ ಹೇರಂಭ ಅವರು ಡಿ ಸಿ ಸೋಮಶೇಖರ್ ಜಿಲ್ಲಾಧಿಕಾರಿಯಾಗಿದ್ದ ಅವಧಿಯಿಂದಲೂ ಸಹ ಹೇರಂಭ ಜಿಲ್ಲಾಧಿಕಾರಿ ಆಪ್ತ ಸಹಾಯಕರಾಗಿ ಮುಂದುವರೆದಿದ್ದರು, ಹಲವು ಜಿಲ್ಲಾಧಿಕಾರಿಗಳು ಬದಲಾವಣೆಯಾಗಿದ್ದರೂ ಆಪ್ತ ಸಹಾಯಕ ಮಾತ್ರ ಬದಲಾವಣೆಯಾಗಿರಲ್ಲ ಈ ಬಗ್ಗೆ ಜಿಲ್ಲಾಧಿಕಾರಿ ಕಚೇರಿ, ತಾಲ್ಲೂಕು ಕಚೇರಿಯಲ್ಲಿ ಸಾಕಷ್ಟು ಅಪಸ್ವರಗಳು ಸಹ ಕೇಳಿಬಂದಿದ್ದವು.

 

 

Leave a Reply

Your email address will not be published. Required fields are marked *

error: Content is protected !!