ಖಾಸಗೀ ಶಾಲೆಗಳಲ್ಲಿ ನಾಡಗೀತೆ ಹಾಡುವುದು ಕಡ್ಡಾಯವಲ್ಲ ಎಂಬ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆದೇಶಕ್ಕೆ ರೂಪ್ಸಾ ಕರ್ನಾಟಕ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ ತೀವ್ರ ವಿರೋಧ ವ್ಯಕ್ತಪಡಿಸಿದರು.
ಅವರು ಶಿರಾ ಪಟ್ಟಣದಲ್ಲಿ ಈ ಕುರಿತು ಹೇಳಿಕೆ ನೀಡಿದ್ದು, ನಾಡಗೀತೆ ನಮ್ಮ ನಾಡು,ನುಡಿ, ಭಾಷೆಯ ಭಾವನಾತ್ಮಕ ಕೊಂಡಿಯಾಗಿದ್ದು, ಕರ್ನಾಟಕದಲ್ಲಿರುವ ಎಲ್ಲಾ ಸರ್ಕಾರಿ,ಅನುದಾನಿತ, ಖಾಸಗೀ ಅನುದಾನರಹಿತ ಶಾಲೆಗಳಲ್ಲಿ ಪ್ರತೀ ದಿನ ನಾಡಗೀತೆ ಹಾಡಲಾಗುತ್ತಿದೆ, ಅದು ನಮ್ಮ ಅಸ್ಮಿತೆಯ ಪ್ರತೀಕವಾದುದ್ದಾಗಿದ್ದು, ಅದನ್ನು ಹಾಡುವುದು ಖಡ್ಡಾಯವಲ್ಲ ಎಂಬುದು ಎಷ್ಟರಟ್ಟಿಗೆ ಸರಿ? ಕನ್ನಡ ನಾಡಿನ ಭಾಷೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉಳಿಸಬೆಕಾದ ಇಲಾಖೆಯೇ ಈ ರೀತಿ ಆದೇಶ ಮಾಡಿದರೆ ಇದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ, ಕೂಡಲೇ ಈ ಆದೇಶವನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.
ಸರ್ಕಾರ ಈ ರೀತಿಯಾದ ಗೊಂದಲಗಳಿಗೆ ಅವಕಾಶ ನೀಡಬಾರದು. ಖಾಸಗೀ ಶಾಲೆಯಾದರೇನು ಸರ್ಕಾರಿ ಶಾಲೆಯಾದರೇನು ಅಲ್ಲಿ ಕಲಿಯುವವರೂ ಸಹ ಮಕ್ಕಳು, ಅವರಿಗೆ ನಮ್ಮ ಹಿರಿಮೆ ಗರಿಮೆಗಳ ಮೌಲ್ಯವನ್ನು ಬಿತ್ತುವ ನಾಡಗೀತೆಯನ್ನು ಹಾಡಲೇಬೇಕು ಎಂಬ ಸ್ಪಷ್ಟ ಆದೇಶ ಮಾಡುವ ಬದಲು ಈ ರೀತಿಯಾದ ಆದೇಶಗಳನ್ನು ಮಾಡುವುದರ ಮೂಲಕ ಹೊರ ರಾಜ್ಯಗಳ ಶಾಲೆಗಳಿಗೆ ಹಾಗೂ ಸಂಸ್ಥೆಗಳಿಗೆ ಮಣೆ ಹಾಕುವ ಹುನ್ನಾರ ನಡೆಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯದಾದ್ಯಂತ ರೂಪ್ಸಾ ಸಂಘಟನೆಯಲ್ಲಿ ಸಾವಿರಾರು ಶಾಲೆಗಳು ಸದಸ್ಯತ್ವ ಪಡೆದಿದ್ದು, ನಮ್ಮ ನಿಲುವು ನಾಡಗೀತೆಯನ್ನು ಯಾವುದೇ ತಾರತಮ್ಯವಿಲ್ಲದೆ ಖಡ್ಡಾಯವಾಗಿ ಪ್ರತೀದಿನ ಹಾಎಬೇಲು ಹಾಗೂ ಸರ್ಕಾರ ಖಡ್ಡಾಯಗೊಳಿಸಿ ಆದೇಶಿಸಬೇಕು ಎಂದರು.