ತುಮಕೂರು : ನಗರದ ಪತ್ರಿಕಾ ಭವನದಲ್ಲಿ ಆಗ್ನೇಯ ಪದವೀಧರರ ಕ್ಷೇತ್ರದ ಅಭ್ಯರ್ಥಿಯಾದ ವಿನೋದ್ ಶಿವರಾಜ್ ಪರ ರೂಪ್ಸಾ ಮತ್ತು ಕ್ಯಾಮ್ಸ್ (ಕೋಲಾರ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ)ದ ಸಹಯೋಗದೊಂದಿಗೆ ಪತ್ರಿಕಾ ಗೋಷ್ಠಿಯನ್ನು ಆಯೋಜಿಸಿದ್ದರು, ಈ ಸಂದರ್ಭದಲ್ಲಿ ಆಗ್ನೇಯ ಪದವೀಧರರ ಕ್ಷೇತ್ರದ ಸ್ವತಂತ್ರ್ಯ ಅಭ್ಯರ್ಥಿಯಾದ ವಿನೋದ್ ಶಿವರಾಜ್ ರವರು ಮಾತನಾಡಿ ತಾನು ವಿದೇಶದಲ್ಲಿ ವ್ಯಾಸಂಗ ಮಾಡಿದ್ದು, ಅಲ್ಲಿನ ತಾಂತ್ರಿಕತೆ ವೈಚಾರಿಕತೆ ಹಾಗೂ ಉನ್ನತೀಕರಿಸಿದ ಶಿಕ್ಷಣ ಸೇರಿದಂತೆ ಇನ್ನಿತರೆ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಹಾಕಿಕೊಂಡಿದ್ದು ಇದಕ್ಕೆ ಸಕರಾತ್ಮಕ ಪ್ರತಿಕ್ರಿಯೆ ಸಹ ಬರುತ್ತಿದೆ ಎಂದು ತಿಳಿಸಿದರು.
ಮುಂದುವರೆದು ಮಾತನಾಡುತ್ತಾ ತಾನು ಈಗಾಗಲೇ ಬಹುತೇಕ ಎಲ್ಲಾ ಜಿಲ್ಲೆಗಳು, ತಾಲ್ಲೂಕುಗಳಿಗೆ ಭೇಟಿ ನೀಡಿ ಅಲ್ಲಿನ ಶಿಕ್ಷಕರು, ಖಾಸಗಿ ವಿದ್ಯಾ ಸಂಸ್ಥೆಗಳ ಮುಖ್ಯಸ್ಥರುಗಳನ್ನು ಮಾತನಾಡಿಸಿ ನನ್ನ ವಿಚಾರಧಾರೆಯನ್ನು ಅವರೊಂದಿಗೆ ಹಂಚಿಕೊಂಡಿದ್ದೇನೆ ಅವರಿಂದಲೂ ಸಹ ಉತ್ತಮ ಪ್ರತಿಕ್ರಿಯೆ ಬಂದಿದೆ ಎಂದರಲ್ಲದೇ ಈಗಾಗಲೇ ಕೋಲಾರ ಜಿಲ್ಲೆಯ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಸೇರಿದಂತೆ ತುಮಕೂರಿನ ಮುಖಂಡರು ಆದ ಹಾಲನೂರು ಲೇಪಾಕ್ಷ್ ಅವರು ಮತ್ತು ಅವರ ಅನುಯಾಯಿಗಳು ನನ್ನ ಬೆಂಬಲಕ್ಕೆ ನಿಂತಿದ್ದಾರೆಂದು ತಿಳಿಸಿದರು.
ಇನ್ನು ಎಸ್.ಆರ್.ಎಸ್. ಶಿಕ್ಷಣ ಸಂಸ್ಥೆಯ ಮಾಲೀಕ, ಕಾಂಗ್ರೆಸ್ ಮುಖಂಡರಾಗಿರುವ ಹಾಲನೂರು ಲೇಪಾಕ್ಷ್ ಮಾತನಾಡಿ ನಾನು ಕಾಂಗ್ರೆಸ್ ಪಕ್ಷದಲ್ಲಿಯೇ ಇರಬಹುದು ಆದರೆ ನನಗೆ ಪಕ್ಷಕ್ಕಿಂತ ಒಂದೊಳ್ಳೆ ವಿಚಾರ ಧಾರೆಯನ್ನು ಇಟ್ಟುಕೊಂಡಿರುವ, ವಾಣಿಜೋದ್ಯಮಿಗಳು ಆಗಿರುವ ವಿನೋದ್ ಶಿವರಾಜ್ ಅವರನ್ನೇ ನಾನು ಬೆಂಬಲಿಸುತ್ತೇನೆ ಜೊತೆಗೆ ನನ್ನೆಲ್ಲಾ ಸನ್ಮಿತ್ರರಿಗೂ ಅವರನ್ನೇ ಬೆಂಬಲಿಸುವುದಾಗಿ ಘಂಟಾ ಘೋಷವಾಗಿ ಹೇಳಿದರು.
ಇನ್ನು ತನಗೆ ಪಕ್ಷ ಸಂಘಟನೆಗಿಂತ ವ್ಯಕ್ತಿಯೇ ಮುಖ್ಯ ಆದ್ದರಿಂದ ಅಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯನ್ನು ಬೆಂಬಲಿಸುವುದಾಗಿ ತುಮಕೂರು ಜಿಲ್ಲಾ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ಹಾಲನೂರು ಲೇಪಾಕ್ಷ ತಿಳಿಸಿದರು. ವಿನೋದ್ ಶಿವರಾಜ್‍ರವರನ್ನು ರೂಪ್ಸಾ ಸಂಘಟನೆ ಬೆಂಬಲಿಸುತ್ತಿದ್ದು ಈ ತೀರ್ಮಾನವನ್ನು ಆರು ತಿಂಗಳ ಕೆಳಗೆ ತೆಗೆದುಕೊಂಡಿದ್ದೇವೆ. ಅದಾದ ಬಳಿಕ ನಾನು ಈಗ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದು, ಪಕ್ಷ ಸಂಘಟನೆಗಿಂತ ನನಗೆ ವ್ಯಕ್ತಿ ಮುಖ್ಯ ಎಂದು ತಿಳಿಸಿದರು.
ಒಂದು ಪಕ್ಷದಲ್ಲಿ ಗುರುತಿಸಿಕೊಂಡಿದ್ದು ಮತ್ತೊಬ್ಬ ಪಕ್ಷೇತರ ಅಭ್ಯರ್ಥಿಗೆ ಚುನಾವಣೆಯಲ್ಲಿ ಸಹಾಯ ಮಾಡುವುದು ಪಕ್ಷ ವಿರೋಧಿ ಚಟುವಟಿಕೆ ಅಲ್ಲವೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ನಾನು ಕಾಂಗ್ರೆಸ್ ಪಕ್ಷದಲ್ಲಿ ಈಗ ಇರಬಹುದು ಪಕ್ಷ ಈಗಾಗಲೇ ಅಭ್ಯರ್ಥಿಯನ್ನು ಸಹ ಘೋಷಿಸಿದ್ದು ನಾವು ಶೈಕ್ಷಣಿಕ ಸಂಘಟನೆಯ ವತಿಯಿಂದ ತೆಗೆದುಕೊಂಡಿರುವ ನಿರ್ಧಾರಕ್ಕೆ ಬದಲಾಗಿದ್ದು ಪಕ್ಷಕ್ಕಿಂತ ವೈಯಕ್ತಿಕವಾಗಿ ಸಂಘಟನೆಯ ನಿರ್ಧಾರಕ್ಕೆ ಬದ್ಧನಾಗಿ ವಿನೋದ್ ಶಿವರಾಜ್ ರವರನ್ನು ಬೆಂಬಲಿಸುತ್ತಿರುವುದಾಗಿ ತಿಳಿಸಿದರು.
ಹಾಲನೂರು ಲೇಪಾಕ್ಷ ಇತ್ತೀಚಿಗಷ್ಟೇ ಜೆಡಿಎಸ್ ತೊರೆದು ಮಾಜಿ ಶಾಸಕ ಡಿಸಿ ಗೌರಿಶಂಕರ್ ಅವರೊಂದಿಗೆ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದು ಪಕ್ಷ ಅವರನ್ನು ತುಮಕೂರು ಗ್ರಾಮಾಂತರ ಬ್ಲಾಕ್ ಎರಡರ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದನ್ನು ಗಮನಿಸಬಹುದಾಗಿದ್ದು ಮುಂದಿನ ಪಕ್ಷದ ನಡೆ ಹಾಗೂ ಲೇಪಾಕ್ಷಿ ರವರ ನಡೆ ಹೇಗಿರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಜೊತೆಗೆ ಹಾಲನೂರು ಲೇಪಾಕ್ಷ್ ಅವರು ತುಮಕೂರಿನಲ್ಲಿ ಎಲ್ಲಾ ಪಕ್ಷಗಳನ್ನು ನೋಡಿಕೊಂಡು ಸಹ ಬಂದಿದ್ದಾರೆ ಈ ಮೊದಲು ಬಿಜೆಪಿ ಪಕ್ಷದಲ್ಲಿದ್ದರು ಆ ಸಮಯದಲ್ಲಿ ಸಂಸದರಾದ ಜಿ.ಎಸ್.ಬಸವರಾಜು ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು ಆ ಸಮಯದಲ್ಲಿ ವಿಧಾನಪರಿಷತ್ ಸ್ಥಾನವು ಲಭಿಸಲಿತ್ತು, ಆದರೆ ಕಾರಣಾಂತರಗಳಿಂದ ಅವರ ಕೈ ತಪ್ಪಿತು, ತದ ನಂತರ ಜೆಡಿಎಸ್ ಪಕ್ಷಕ್ಕೆ ವಲಸೆ ಬಂದರು, ಇದೀಗ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದು, ಚುನಾವಣೆಯ ಹೊಸ್ತಿಲಲ್ಲಿ ಈ ರೀತಿಯಾದ ಸ್ಪೋಟಕ ಹೇಳಿ ನೀಡಿರುವುದು ಕಾಂಗ್ರೆಸ್ ಪಕ್ಷ ಯಾವ ರೀತಿಯಾದ ಶಿಸ್ತು ಕ್ರಮ ಕೈಗೊಳ್ಳುತ್ತದೋ ಕಾದು ನೋಡಬೇಕಿದೆ.
ಏಕೆಂದರೆ ಲೋಕಸಭಾ ಚುನಾವಣೆ ಮತ್ತು ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಮುಂಬರುವ ದಿನಗಳಲ್ಲಿ ನಡೆಯಲಿದ್ದು, ಹಾಲನೂರು ಲೇಪಾಕ್ಷ್ ಅವರು ಪಕ್ಷಕ್ಕಿಂತ ವ್ಯಕ್ತಿಯೇ ಮುಖ್ಯ ಎಂದು ಹೇಳಿಕೆ ನೀಡುರುವುದು ಕೆಲವರಲ್ಲಿ ಬೇಸರ ಮೂಡಿಸಿದೆ.