ತುಮಕೂರು : ದಿನಾಂಕ 12-02-2024ರಂದು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ರೂಪ್ಸಾ ಸಂಘಟನೆ ಮತ್ತು ಕ್ಯಾಂಪ್ಸ್ ಸಂಘಟನೆ ಸೇರಿ ವಿನೋದ್ ಶಿವರಾಜ್ ಅವರಿಗೆ ಬೆಂಬಲ ಘೋಷಿಸುತ್ತಿದ್ದೇವೆಂದು ಹೇಳಲಾಗಿತ್ತು, ಆದರೆ ಇಂದು ರೂಪ್ಸಾ ಅಧ್ಯಕ್ಷರಾಗಿರುವ ಹಾಲನೂರು ಲೇಪಾಕ್ಷ್ ರವರು ಸುದ್ಧಿಗಾರರೊಂದಿಗೆ ಮಾತನಾಡಿ ತಾನು ನೆನ್ನೆ ಪತ್ರಿಕಾ ಗೋಷ್ಠಿಯಲ್ಲಿ ನೀಡಿದ್ದ ಹೇಳಿಕೆಯಲ್ಲಿ ವ್ಯತ್ಯಾಸವಾಗಿದ್ದು ಅದಕ್ಕೆ ಸಂಬಂಧಿಸಿದಂತೆ ಇಂದು ಮರು ಹೇಳಿಕೆ ನೀಡುತ್ತಿದ್ದೇನೆಂದು ಹೇಳಿಕೆಯನ್ನು ನೀಡಿದ್ದಾರೆ.
ತಾನು ಪಕ್ಷ ವಿರೋಧಿ ಚಟುವಟಿಕೆ ಮಡಲಾರೆ ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ನಾಯಕ ಹಾಲನೂರು ಲೇಪಾಕ್ಷ್ ಮತ್ತೊಮ್ಮೆ ಸ್ಪಷ್ಠವಾಗಿ ಹೇಳುತ್ತಿದ್ದು ನಾನು ನೆನ್ನೆ ರೂಪ್ಸಾ ಸಂಘಟನೆಯ ಅಧ್ಯಕ್ಷನಾಗಿ ಮಾತ್ರ ಪತ್ರಿಕಾಗೋಷ್ಠಿಯಲ್ಲಿ ಹಾಜರಾಗಿದ್ದೇ, ಆದರೆ ನಾನು ಕಾಂಗ್ರೆಸ್ ಪಕ್ಷದಲ್ಲಿರುವುದರಿಂದ ನಾನು ಕಾಂಗ್ರೆಸ್ ಪಕ್ಷ ಸೂಚಿಸುವ ಅಭ್ಯರ್ಥಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಮರು ಹೇಳಿಕೆಯನ್ನು ನೀಡಿದ್ದಾರೆ.
ಇನ್ನು ಮುಂಬರುವ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರ ಚುನಾವಣೆ ಮಾಡುತ್ತೇನೆ ಇದರಲ್ಲಿ ಯಾವುದೇ ರೀತಿಯಾದ ಸಂಶಯವೇ ಬೇಡ ಎಂದು ಹೇಳಿದ್ದಾರಲ್ಲದೇ ನಾನು ಆಗ್ನೇಯ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ವಿನೋದ್ ಶಿವರಾಜ್ ರವರಿಗೆ ನನ್ನ ಬೆಂಬಲವಿಲ್ಲ ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಎಂಬುದನ್ನು ಸ್ಪಷ್ಠಪಡಿಸುತ್ತಿದ್ದೇನೆ ಎಂದು ಹೇಳಿದರು.
ನಮ್ಮ ಕಾಂಗ್ರೆಸ್ ನಾಯಕರಾದ ಡಿ ಕೆ ಶಿವಕುಮಾರ್, ಜಿ ಪರಮೇಶ್ವರ್, ಕೆ ಎನ್ ರಾಜಣ್ಣ, ಹಾಗು ನಮ್ಮ ನೆಚ್ಚಿನ ನಾಯಕರಾದ ಗೌರಿಶಂಕರ್ ರವರ ಮಾರ್ಗದರ್ಶನದಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ಪಕ್ಷ ಸಂಘಟನೆಯನ್ನು ಬಲಗೊಳಿಸುವ ಉದ್ದೇಶ ಹೊಂದಿದ್ದೇನೆ ಎಂದು ತಿಳಿಸಿದ ಹಾಲನೂರು ಲೇಪಾಕ್ಷಿ.
ಇನ್ನು ಈ ವಿಚಾರವಾಗಿ ನೆನ್ನೆ ನಡೆದ ಪತ್ರಿಕಾ ಗೋಷ್ಠಿಯಲ್ಲಿಯೂ ಸಹ ನಾನು ವಿನೋದ್ ಶಿವರಾಜ್ ಅವರಿಗೆ ಬೆಂಬಲ ಘೋಷಣೆ ಮಾಡಿಲ್ಲ ನಾಮ ಮಾತ್ರಕ್ಕೆ ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿದ್ದೆ ಎಂದು ಮರು ಹೇಳಿಕೆಯನ್ನು ನೀಡಿದ್ದಾರೆ.