ಜನ ಸಾಮಾನ್ಯರ ಭಾವನೆಗಳಿಗೆ ಇಲ್ಲಿ ಬೆಲೆ ಇಲ್ಲವೇ? ಹೀಗೊಂದು ಆಕ್ರೋಷ ವ್ಯಕ್ತಪಡಿಸಿದ ನೊಂದ ವ್ಯಕ್ತಿ

ದಲಿತ ವ್ಯಕ್ತಿಯ ಶವ ಹೊರತಗೆದ ಜಿಲ್ಲಾಢಳಿತ: ಗೃಹಸಚಿವರ ತವರಲ್ಲಿ ಅಮಾನವೀಯ ಘಟನೆ ತುಮಕೂರು ತಾಲ್ಲೂಕಿನ ದುರ್ಗದಹಳ್ಳಿಯಲ್ಲಿ ನಡೆದಿದೆ.

 

ತುಮಕೂರು : ವಯೋಸಹಜವಾಗಿ ಮೃತಪಟ್ಟ ದಲಿತ ವ್ಯಕ್ತಿಯ ಶವವನ್ನು ಉಪದ್ರವ ನಿವಾರಣಾ ಅದೇಶ ಹೊರಡಿಸಿ ಶವವನ್ನು ಹೊರತೆಗೆದು ಮತ್ತೊಂದು ಸ್ಥಳದಲ್ಲಿ ಶವಸಂಸ್ಕಾರ ಮಾಡಿರುವ ಅಮಾನವೀಯ ಹಾಗೂ ನಾಗರೀಕ ಸಮಾಜ ತಲೆತಗ್ಗಿಸುವ ಘಟನೆ ನಡೆದಿದೆ.

 

 

 

 

ಈ ಘಟನೆ ಯಾವುದೋ ಕಣಿವೆ ರಾಜ್ಯದಲ್ಲಿ ನಡೆದಿಲ್ಲ ಜಿಲ್ಲಾಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿನಿಧಿಸುವ ತುಮಕೂರು ಜಿಲ್ಲೆ ತುಮಕೂರು ತಾಲೂಕಿನ ಊರ್ಡಿಗೆರೆ ಹೋಬಳಿಯ ದುರ್ಗದಹಳ್ಳಿ ನಡೆದಿದೆ. ಗ್ರಾಮದ ವೃದ್ದ ಪೆದ್ದಯ್ಯ ವಯೋಸಹಜವಾಗಿ ಕಳೆದ ವರ್ಷ ಡಿಸೆಂಬರ್ ನಲ್ಲಿ ಮೃತಪಟ್ಟಿದ್ದರು . ಮೃತಪಟ್ಟವರನ್ನು ಶವ ಸಂಸ್ಕಾರ ಮಾಡಲು ಗ್ರಾಮದಲ್ಲಿ ಸ್ಮಶಾನ ಇಲ್ಲದ ಕಾರಣ ಮೃತಪಟ್ಟ ವೃದ್ಧ ಪೆದ್ದಯ್ಯನ ಮಗ ತಿಮ್ಮರಾಜು ನಮ್ಮ ತಂದೆ ಮೃತಪಟ್ಟಿದ್ದಾರೆ ಸ್ಮಶಾನ ಇಲ್ಲ ನಮ್ಮ ತಂದೆ ಶವಸಂಸ್ಕಾರ ಮಾಡಬೇಕು ತಹಶೀಲ್ದಾರ್ ಹಾಗೂ ಪಿಡಿಒ ಅವರಿಗೆ ಕೇಳಿದ್ದಾರೆ, ಆದರೆ ಅವರಿಂದ ಸಮರ್ಪಕ ಉತ್ತರ ಬಾರದ ಹಿನ್ನಲೆ ದುರ್ಗದ ಹಳ್ಳಿಯ ಗ್ರಾಮಕ್ಕೆ ತೆರಳುವ ರಸ್ತೆಯ ಬದಿ ಅಂತ್ಯ ಸಂಸ್ಕಾರ ನೆರವೇರಿಸಿದ್ದರು.

 

 

 

ಈ ಘಟನೆ ರಾಜ್ಯಾದ್ಯಂತ ಸುದ್ದಿಯಾಗಿ ರಾಜ್ಯಾದ್ಯಂತ ಸಂಚಲನ ಮೂಡಿಸಿತ್ತು. ಘಟನೆಗೆ ಸಂಬಂಧಿಸಿದಂತೆ ಸ್ಮಶಾನಕ್ಕಾಗಿ ಹಲವು ವರ್ಷಗಳಿಂದ ಹೋರಾಟ ಮಾಡಿರುವ ದುರ್ಗದ ಹಳ್ಳಿಯ ತಿಮ್ಮರಾಜು ನಾವು ದಲಿತ ಕುಟುಂಬಕ್ಕೆ ವರ್ಗಕ್ಕೆ ಸೇರಿದವರಾಗಿದ್ದು ಭೂಮಿ ಇಲ್ಲದ ಕಾರಣ ಅಧಿಕಾರಿಗಳ ಹೇಳಿಕೆಯಂತೆ ರಸ್ತೆಯ ಬದಿ ಅಂತ್ಯ ಸಂಸ್ಕಾರ ಮಾಡಿರುವುದಾಗಿ ತಿಳಿಸಿದ್ದರು, ಗೃಹ ಸಚಿವ ಡಾ.ಜಿ. ಪರಮೇಶ್ವರವರೂ ಸಹ ಪ್ರತಿಕ್ರಿಯಿಸಿ ಇಂತಹ ಅಮಾನವೀಯ ಘಟನೆ ನಡೆಯಬಾರದೆಂದು ಮುಂದೆ ಈ ರೀತಿ ಆಗದಂತೆ ಜಾಗೃತಿ ವಹಿಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಿ ಕುಟುಂಬಸ್ತರು ಒಪ್ಪಿದರೆ, ವ್ಯಕ್ತಿಯ ಶವವನ್ನು ಬೇರೆಡೆ ಅಂತ್ಯಸಂಸ್ಕಾರ ಮಾಡಿ ಎಂದು ಹೇಳಿದ್ದರು.

 

 

 

 

 

ಗೃಹಸಚಿವರ ಆದೇಶಕ್ಕೂ ಸೊಪ್ಪು ಹಾಕದ ತುಮಕೂರು ಎಸಿ ಗೌರವ್ ಕುಮಾರ್ ಶೆಟ್ಟಿ ಅವರು ಉಪದ್ರವ ನಿವಾರಣ ಕಾಯ್ದೆ ಅಡಿಯಲ್ಲಿ ತಹಶೀಲ್ದಾರ್ ಅವರಿಗೆ 48 ಗಂಟೆ ಒಳಗೆ ಮೃತ ಪೆದ್ದಯ್ಯನ ಶವ ಹೊರ ತೆಗೆದು ಬೇರೆ ಅಂತ್ಯ ಸಂಸ್ಕಾರ ಮಾಡಿ ವರದಿ ನೀಡಲು ಆದೇಶಿಸಿದ್ದರು ಈ ಹಿನ್ನೆಲೆಯಲ್ಲಿ ಶುಕ್ರವಾರ ಮುಂಜಾನೆ ತಹಸೀಲ್ದಾರ್ ಸಿದ್ದೇಶ್ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳ ಮುಂದಾಳತ್ವದಲ್ಲಿ ಮೃತ ಪೆದ್ದಯ್ಯನ ಶವ ಹೊರತೆಗೆದಿದ್ದಾರೆ. ಹೊರ ತೆಗೆದ ಶವವನ್ನು ದುರ್ಗದ ಹಳ್ಳಿಯಿಂದ 2 ಕಿಲೋ ಮೀಟರ್ ದೂರದಲ್ಲಿರುವ ಗುಡ್ಡದ ಬಳಿ ಗುರುತಿಸಿರುವ ಸ್ಮಶಾನದಲ್ಲಿ ಸಂಸ್ಕಾರ ಮಾಡಿರುವ ಜಿಲ್ಲಾಡಳಿತದ ನಡೆಗೆ ಪ್ರಗತಿಪರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

 

 

ಹಿಂದು ಸಂಪ್ರದಾಯದಂತೆ ಒಮ್ಮೆ ಅಂತ್ಯ ಸಂಸ್ಕಾರ ಮಾಡಿದರೆ ಅಂತ ಶ್ರವಣ ಹೊರ ತೆಗೆದು ಮತ್ತೊಂದು ಸ್ಥಳದಲ್ಲಿ ಶವ ಸಂಸ್ಕಾರ ಮಾಡಿರುವ ಯಾವುದೇ ಉದಾಹರಣೆಗಳು ಇಲ್ಲ ಆದರೆ ಜಿಲ್ಲಾ ಸಚಿವರ ಮಾತನ್ನು ಸಹ ಧಿಕ್ಕರಿಸಿ ಏಕ ಪಕ್ಷಿಯ ನಿರ್ಧಾರ ತೆಗೆದುಕೊಂಡಿರುವ ಜಿಲ್ಲಾಡಳಿತದ ಕಾರ್ಯವೈಖರಿಯನ್ನ ಪ್ರಗತಿಪರರು ಹೋರಾಟಗಾರರು ಹಾಗೂ ದಲಿತ ಸಂಘಟನೆಗಳು ತೀವ್ರವಾಗಿ ಖಂಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!