ಐದು ಶತಮಾನಗಳ ಪರಿಶ್ರಮದ ಹೋರಾಟವೇ ರಾಮ ಮಂದಿರ ಸ್ಥಾಪನೆಗೆ ಕಾರಣ : ಆರ್.ತನುಜ್ ಕುಮಾರ್

 

ತುಮಕೂರು : ನಗರದ ಕೋತಿತೋಪು ಮುಖ್ಯರಸ್ತೆ ಜಿಲ್ಲಾ ಪಂಚಾಯಿತಿ ಕಛೇರಿಯ ಬಳಿ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ (ರಿ) ವತಿಯಿಂದ ಅಯೋದ್ಯೆಯಲ್ಲಿನ ಶ್ರೀರಾಮ ಪ್ರಾಣ ಪ್ರತಿಷ್ಠಾನ ಮಹೋತ್ಸವದ ಅಂಗವಾಗಿ ವಿಶೇಷ ಪೂಜೆಯನ್ನು ಸಲ್ಲಿಸಿ ಸಾರ್ವಜನಿಕರಿಗೆ ಪ್ರಸಾದ ವಿನಿಯೋಗ ನೆರವೇರಿಸಲಾಯಿತು.

 

 

ಈ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದ ಸೇವಾ ಸಮಿತಿಯ ಅಧ್ಯಕ್ಷರಾದ ಆರ್.ತನುಜ್ ಕುಮಾರ್‌ರವರು ಮಾತನಾಡಿ 5 ಶತಮಾನಗಳ ಅಂದರೆ 500 ವರ್ಷಗಳ ಸತತ ಹೋರಾಟದ ಪರಿಶ್ರಮ ನಮ್ಮ ರಾಮನ ನಾಡಿನಲ್ಲಿ ರಾಮನನ್ನು ಪ್ರತಿಷ್ಠಾಪಿಸಿ ಪೂಜೆ ಮಾಡುವ ಸದಾವಕಾಶ ಲಭಿಸಿರುವುದು ನಮಗೆ ಹಬ್ಬದ ವಾತಾವರಣವನ್ನು ಸೃಷ್ಠಿ ಮಾಡಿದೆ, ಭವಿಷ್ಯದಲ್ಲಿ ನಮ್ಮ ದೇಶವೂ ಸಹ ರಾಮರಾಜ್ಯವಾಗುವುದರಲ್ಲಿ ಎರಡು ಮಾತಿಲ್ಲ ಎಂದರು.

 

 

 

ಶ್ರೀರಾಮ ದೇವರ ಪ್ರತಿಷ್ಠಾಪನೆಯ ಈ ಸುಸ್ಸಂದರ್ಭದಲ್ಲಿ ಹಲವಾರು ಬಲಿದಾನಗಳು, ಹಲವಾರು ನಾಯಕರ ಪರಿಶ್ರಮ ಅತ್ಯಮೂಲ್ಯವಾಗಿದೆಂದು ಸ್ಮರಿಸಿದರು, ಜೊತೆಗೆ ಶ್ರೀರಾಮ ಶಾಂತಿಯ ಸಂಕೇತ ಶ್ರೀರಾಮನನ್ನು ಲೋಕೋದ್ಧಾರಕೆನೆಂದು ಕರೆಯುತ್ತಾರೆ, ಆತನಿಗೆ ಇದೀಗ ಅವನ ನೆಲದಲ್ಲಿಯೇ ದೇವಸ್ಥಾನ ನಿರ್ಮಾಣ ಮಾಡಿ ಶಾಶ್ವತವಾಗಿ ಪೂಜೆಯನ್ನು ನೆರವೇರಿಸುವ ಮಹತ್ಕಾರ್ಯ ನಡೆಯುತ್ತಿರುವುದು ನಮ್ಮಗಳ ಸುದೈವ ಎಂದರು. ಈ ಸುಸ್ಸಂದರ್ಭದಲ್ಲಿ ಸಾರ್ವಜನಿಕರಿಗೆ ಅನ್ನ ದಾಸೋಹವನ್ನು ನಮ್ಮ ಸಂಸ್ಥೆಯಿಂದ ನೆರವೇರಿಸುತ್ತಿರುವುದು ರಾಮನ ಅನುಗ್ರಹದಿಂದಲೇ ಎಂದು ಹೇಳಿದರು.

 

 

 

ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ದೊಡ್ಡಲಿಂಗಪ್ಪ, ನಿವೃತ್ತ ರೇಷ್ಮೆ ಜಂಟಿ ನಿರ್ದೇಶಕರಾದ ಜಿ.ಎಂ.ವಿಶ್ವನಾಥ, ತನುಜ್ ಕುಮಾರ್, ಗೋವಿಂದರಾಜು, ಚಂದ್ರು, ರಾಜೇಶ್ (ಕಲ್ಪತರು ಟಿಫನ್ ಸೆಂಟರ್), ಮಧು, ದರ್ಶನ್, ಶಿವು, ಉದಯ್, ರಾಜು, ಅಂಬರೀಶ್, ಬಾಬು ಹಾಗೂ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!