ಪಾವಗಡ:ನಗರದ ಶನಿಮಹಾತ್ಮಸರ್ಕಲ್ ನಲ್ಲಿ ಇಂದು ಗಾಂಧಿಜೀಯವರ ಹುತಾತ್ಮ ದಿನದ ನೆನಪಿನಲ್ಲಿ ಸೌಹಾರ್ದತಾ ಮಾವನ ಸರಪಳಿ ಕಾರ್ಯಕ್ರಮವನ್ನು ಆಯೋಸಲಾಗಿತ್ತು.
ಈ ಸಂದರ್ಭದಲ್ಲಿ ಸೌಹಾರ್ದತಾ ಮಾನವ ಸರಪಳಿಯನ್ನು ಉದ್ದೇಶಿಸಿ ಎಸ್ ಪ್ ಐ ಜಿಲ್ಲಾದ್ಯಕ್ಷರು ಹಾಗು ವಕಿಲಾರ ಈ ಶಿವಣ್ಣ ಮಾತನಾಡಿ ಅವರು ಮಾತನಾಡಿ ಕರ್ನಾಟಕ ಬಸವ ತತ್ವದ ನಾಡು ಇಲ್ಲಿ ಸೌಹಾರ್ದತೆ ಎಂಬುದು ಜನರ ಅಂತರಕರಣದಲ್ಲಿ ಹಾಸು ಹೋಕ್ಕಿದೆ ಅದಕ್ಕೆ ಸೌಹಾರ್ದ ಪರಂಪರೆಯನ್ನು ಎತ್ತಿ ಹಿಡಿಯುವ ಕಾರ್ಯ ಮಾಡಬೇಕು ಇಂದು ಜಾತಿ, ಧರ್ಮ, ದೇವರ ಹೆಸರಲ್ಲಿ ಮತೀಯವಾದ ಹಬ್ಬಿಸುತ್ತಿರುವುದು ಖೇದಕರ್. ಗಾಂಧಿಜೀಯವರು ದೇಶದ ಸೌಹಾರ್ದತೆ ಪರಂಪರೆಯ ಸಂಕೇತವಾಗಿದ್ದರು ಅವರನ್ನು ಇಂದು ನೆನೆಯಬೇಕು ಅವರ ಆದರ್ಶ ಪಾಲಿಸಬೇಕು. ಆದರೆ ಇಂದು ಮತೀಯವಾದಿಗಳು ಗಾಂಧಿಜೀಯವರನ್ನು ಅವಮಾನಿಸುತ್ತವೆ ಮತ್ತು ಯಾವುದೋ ರಾಜಕೀಯ ವ್ಯಕ್ತಿಗಳನ್ನು ವಿಜೃಂಭಿಸುತ್ತವೆ. ಇದನ್ನು ನಾವು ಅರ್ಥ ಮಾಡಿಕೊಂಡು ಎಲ್ಲಾ ಜಾತಿ ಬೇಧ ಧರ್ಮ ಬೇಧ ಇಲ್ಲದೇ ಸೌಹಾರ್ದತೆಯಿಂದ ಬಾಳಬೇಕು ಎಂದು ಸಂದೇಶ ನೀಡಿದರು.
ನಂತರ ಪಾವಗಡ ಅಂಗನವಾಡಿ ನೌಕರರ ಸಂಘದ ತಾಲ್ಲೂಕ್ ಸಂಚಾಲಕರಾದ ಶಿವಗಂಗ ಅವರು ಮಾತನಾಡಿ ನಾವು ಭಾರತೀಯರು ಸೌಹಾರ್ದತೆಯಿಂದ ಬಾಳಿ ಬದುಕಿದವರು ಗಾಂಧಿಜೀಯವರು ರಾಷ್ಟ್ರಪಿತರಾಗಿ ಸ್ವಾತಂತ್ರ್ಯ ತರುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು ಅವರ ಆಶಯದ ಭಾರತದಲ್ಲಿ ಬುದುಕುತ್ತಿರುವ ನಾವು ಅವರ ಅಹಿಂಸೆಯ ತತ್ವವನ್ನು ಅಳವಡಿಸಿಕೊಂಡು ಸಾಗಬೇಕು ಸೌಹಾರ್ದತೆಯನ್ನು ಎತ್ತಿ ಹಿಡಿಯಬೇಕು ಎಂದರು.
ಕಟ್ಟಡ ಕಾರ್ಮಿಕ ಸಂಘದ ತಾಲ್ಲೂಕು ಅಧ್ಯಕ್ಷರಾದ ರಾಮಾಂಜಿನಿ ಮಾತನಾಡಿ ಇಂದು ಗಾಂಧಿಜೀಯವರು ಹುತಾತ್ಮರಾದ ದಿನದ ನೆನಪಿನಲ್ಲಿ ನಾವು ಈ ಸೌಹಾರ್ದತೆ ಸಾರುತ್ತಿರುವುದು ತೀರಾ ಅಗತ್ಯವಾಗಿದ್ದು ಇಂದು ದೇಶ ಮತ್ತು ರಾಜ್ಯದಲ್ಲಿ ಒಂದು ರೀತಿಯಲ್ಲಿ ಜಾತಿ,ಮತ, ಧರ್ಮಗಳ ನಡುವೆ ಕಲುಷಿತ ವಾತಾವರಣ ನಿರ್ಮಾಣ ಮಾಡಲಾಗುತ್ತಿರುವ ಕಾಲದಲ್ಲಿ ಈ ಸೌಹಾರ್ದತೆ ಬಹು ಮುಖ್ಯ ಆಗಿದೆ ಎಂದರು.
ಸೌಹಾರ್ದತೆಯ ಸಂದೇಶವನ್ನು ಆಂದ್ರಾ ಪ್ರದೇಶ ಸತ್ಯ ಸಾಯಿ ಎಸ್ ಪ್ ಐ ಜಿಲ್ಲಾದ್ಯಕ್ಷರಾದ ವೀರೆಶ್ ಅವರು ಮಾತನಾಡಿ ದೇಶ ದಲ್ಲಿ ಜನರ ಐಕ್ಯತೆಯನ್ನು ಬೆಳೆಸಲು ಎಡಪಂಥೀಯ ಪಕ್ಷಗಳಿಂದ ಮಾತ್ರ ಸಾದ್ಯ ಅದು ಮುಂದಿನ ದಿನಗಳಲ್ಲಿ ಜನರಿಗೆ ತಿಳಿಯಲಿದೆ ಎಂದರು.
ನಂತರ ಶನಿ ಮಹಾತ್ಮಸರ್ಕಲ್ ನಲ್ಲಿ ಮಾನವ ಸರಪಳಿಯನ್ನು ರಚಿಸಿ ಸೌಹಾರ್ದತೆ ಸಂದೇಶ ಸಾರಲಾಯಿತು ಕೆಂಚ್ಚಮ್ಮ ಅವರು ಕಾರ್ಯಕ್ರಮವನ್ನು ನಿರೂಪಿಸಿದರು, ಭೊಲಕ್ಷ್ಮಿ ವಂದಿಸಿದರು.
ಈ ಸಂದರ್ಭದಲ್ಲಿ ಮದ್ಲೆಟಪ್ಪ ವಿ ಚ್ ಮಮತ ಸಂಜಿವಮ್ಮ ದುಗ್ಗಪ್ಪ ಅನಿಲ್ ವೆಂಕಟೇಶ್ ಈಶ್ವರಪ್ಪ ಸುಬ್ಬು ಹಾಗೂ ಮುಂತಾದವರು, ವಿವಿಧ ಪ್ರಗತಿಪರ ಸಂಘಟನೆ ಮುಖಂಡರು, ಸೌಹಾರ್ದ ಮನಸ್ಸುಗಳು ಹಾಜರಿದ್ದರು.