ತುಮಕೂರು : ದಿನಾಂಕ 24-01-2024 ರಿಂದ 23-02-2024 ರವರೆಗೆ ಜಿಲ್ಲೆಯ ಎಲ್ಲಾ ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯ್ತಿ ಹಾಗೂ 330 ಗ್ರಾಮ ಪಂಚಾಯ್ತಿಗಳಿಗೆ ಗಣರಾಜ್ಯೋತ್ಸವ ದಿನದಂದು ಸಂವಿಧಾನ ಜಾಗೃತಿ ಜಾಥದ ಸ್ಥಬ್ದ ಚಿತ್ರಕ್ಕೆ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ.ಪರಮೇಶ್ವರರವರು ಚಾಲನೆ ನೀಡಿದ ನಂತರ ಆಗಮಿಸುವ ಜಾಗೃತಿ ಜಾಥಾ ಕಾರ್ಯಕ್ರಮದ ಪೂರ್ವ ಸಿದ್ಧತೆಗಾಗಿ ಇಂದು ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಮಾನ್ಯ ಜಿಲ್ಲಾಧಿಕಾರಿಗಳು ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಸಭೆಯನ್ನು ನಡೆಸಿ ಸಮಗ್ರವಾಗಿ ಚರ್ಚೆ ಮಾಡಲಾಯಿತು ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಾದ ಕೃಷ್ಣಪ್ಪರವರು ತಿಳಿಸಿದ್ದಾರೆ.
ಮುಂದುವರೆದು ಕೃಷ್ಣಪ್ಪರವರು ಮಾತನಾಡುತ್ತಾ ಸರ್ಕಾರದ ಆದೇಶದನ್ವಯ ಸಂವಿಧಾನದ ಮಹತ್ವ, ಆಶಯ, ಮತ್ತು ಸಮಾನತೆಯ ತತ್ವಗಳ ಬಗ್ಗೆ ಸಮಾಜದ ಸರ್ವಜನರಿಗೂ ಆರಿವು ಮೂಡಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯದ ಪ್ರತಿ ಪಂಚಾಯತಿಗಳಿಗೆ ಬೃಹತ್ ಸಂವಿಧಾನದ ಜಾಗೃತಿ ಜಾಥ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿರುತ್ತದೆಂದು ಜಂಟಿ ನಿರ್ದೇಶಕರು ತಿಳಿಸಿದರು.
ಆದೇ ರೀತಿ ತುಮಕೂರು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳಿಗೆ ಬೃಹತ್ ಸಂವಿಧಾನ ಜಾಗೃತಿ ಜಾಥ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿರುತ್ತದೆ. ರಾಜ್ಯ ಮಟ್ಟದಲ್ಲಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಮಾನ್ಯ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ. ಅದೇ ರೀತಿ ತುಮಕೂರು ಜಿಲ್ಲೆಯಲ್ಲಿ ಸಂವಿಧಾನ ಜಾಗೃತಿ ಜಾಥ ಕಾರ್ಯಕ್ರಮಕ್ಕೆ ಜಿಲ್ಲಾ ಮಟ್ಟದಲ್ಲಿ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗೃಹ ಸಚಿವರು ಕರ್ನಾಟಕ ಸರ್ಕಾರ ದಿನಾಂಕ 26-01-2024ರಂದು ಚಾಲನೆ ನೀಡಲಿದ್ದಾರೆ. ನಂತರ ಸಂವಿಧಾನ ಜಾಗೃತಿ ಜಾಥವು ತುಮಕೂರು ಜಿಲ್ಲೆಯ ಪ್ರತಿಯೊಂದು ಗ್ರಾಮ ಪಂಚಾಯಿತಿಗೆ ಸಂಚರಿಸಲಿದ್ದು, ಸದರಿ ಗ್ರಾಮ ಪಂಚಾಯತಿಗಳಲ್ಲಿ ಸಂವಿಧಾನ ಕುರಿತು ನಾಗರೀಕರಿಗೆ ಮತ್ತು ಸಮಾಜದ ಸರ್ವರಿಗೂ ಸಂವಿಧಾನದ ಮಹತ್ವವನ್ನು ತಿಳಿಸುವ ಮತ್ತು ಪ್ರಚಾರ ಪಡಿಸುವ ಜವಾಬ್ದಾರಿ ಗ್ರಾಮ ಪಂಚಾಯತಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳಿಗೆ ವಹಿಸಿ ಆದೇಶಿಸಿದೆ ಎಂದು ಜಂಟಿ ನಿರ್ದೇಶಕರು ತಿಳಿಸಿದರು.
ಇನ್ನು ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಸಂಬಂಧಿಸಿದ ಅಧಿಕಾರಿಗಳು ಈ ಕೆಳಕಂಡಂತೆ ಅಗತ್ಯ ಕ್ರಮ ಕೈಗೊಂಡು ಸಂವಿಧಾನ ಜಾಗೃತಿ ಜಾಥ ಕಾರ್ಯಕ್ರಮವು ಯಶಸ್ವಿಗೊಳಿಸಲು ಕೋರಿದರು.
1) ಸಂವಿಧಾನ ಜಾಗೃತಿ ಜಾತ ಕಾರ್ಯಕ್ರಮದಲ್ಲಿ ಸಮಾಜದ ಸರ್ವಜನರು. ನಾಗರಿಕರು. ಎಲ್ಲಾ ಸಂಘಟನೆಗಳು, ಹೋರಾಟಗಾರರು, ಕಲಾವಿದರು. ಮಹಿಳೆಯರು, ಗ್ರಾಮ ಪಂಚಾಯಿತಿ ಹಾಲಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಮಾಜಿ ಸದಸ್ಯರು, ಎಲ್ಲಾ ಜನಪ್ರತಿನಿಧಿಗಳು, ಶಾಸಕರು, ಮುಂಚಿತವಾಗಿ ಮಾಹಿತಿ ನೀಡಿ ಸರ್ವರೂ ಪಾಲ್ಗೊಳ್ಳುವಂತೆ ಕ್ರಮ ವಹಿಸುವುದು.
2) ಸರ್ವರು ಪಾಲ್ಗೊಳ್ಳುವಂತೆ ಅರಿವು ಮೂಡಿಸುವುದು. ಪ್ರತಿ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿ ಸಂವಿಧಾನದ ಜಾಗೃತಿ ಜಾತ ತಲುಪಿದ ವೇಳೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸರ್ವರೂ ಪಾಲ್ಗೊಳ್ಳುವುದು ಮತ್ತು ಸಂಪನ್ಮೂಲ ವ್ಯಕ್ತಿಗಳು ಸಂವಿಧಾನದ ಮಹತ್ವ ಮತ್ತು ಆಶಯ ಕುರಿತು ಭಾಷಣ ಮಾಡಿಸುವುದು.
3) ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳುವುದು, ಕಲಾವಿದರ ಪಾಲ್ಗೊಳ್ಳುವಂತೆ ಮಾಡುವುದು, ವಿವಿಧ ಕಲಾತಂಡಗಳ ಪ್ರದರ್ಶನ ಏರ್ಪಡಿಸುವುದು.
4) ಸಂವಿಧಾನ ವಿಷಯ ಕುರಿತು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗಿರುವ ವಿದ್ಯಾರ್ಥಿಗಳಿಗೆ ಬಹುಮಾನ ಸ್ಥಳೀಯ ಶಾಸಕರು ಅಥವಾ ಗಣ್ಯರಿಂದ ವಿತರಣೆ ಮಾಡಲು ಕ್ರಮವಹಿಸುವುದು. ನಂತರ ಮುಂದಿನ ಗ್ರಾಮ ಪಂಚಾಯಿತಿಗಳಿಗೆ ಜಾತವನ್ನು ಕೊಂಡೊಯ್ಯುವುದು. ಈ ರೀತಿಯಾಗಿ ಒಟ್ಟಾರೆ ಪ್ರತಿ ತಾಲೂಕಿನಲ್ಲಿ ಜಿಲ್ಲೆಯ ೩೩೦ ಗ್ರಾಮ ಪಂಚಾಯಿತಿಗಳಲ್ಲಿಯೂ ಸಹ ಸಂವಿಧಾನ ಜಾಗೃತಿ ಜಾತ ಕಾರ್ಯಕ್ರಮ ತಲುಪಿ ಯಶಸ್ವಿಗೊಳಿಸುವಂತೆ ಗ್ರಾಮ ಪಂಚಾಯತಿಯ ಎಲ್ಲಾ ಅಭಿವೃದ್ಧಿ ಅಧಿಕಾರಿಗಳಿಗೆ ಮತ್ತು ರಾಜಸ್ವ ನಿರೀಕ್ಷಕರಿಗೆ ಮತ್ತು ಗ್ರಾಮ ಸಹಾಯಕರಿಗೆ ತಾಲ್ಲೂಕಿನ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಿ ಜವಾಬ್ದಾರಿಯನ್ನು ವಹಿಸಿ ಆದೇಶಿಸಲಾಗಿರುತ್ತದೆ.
5) ಆದ್ದರಿಂದ ಇದರ ಪೂರ್ವಭಾವಿಯಾಗಿ ಪ್ರತಿ ಗ್ರಾಮ ಪಂಚಾಯತಿಯಲ್ಲಿ ಪ್ರಸ್ತುತ ಅಧಿಕಾರದಲ್ಲಿರುವ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಗ್ರಾಮ ಪಂಚಾಯತಿ ವ್ಯಾಪ್ತಿಯ ವಿವಿಧ ಸಂಘಟನೆಗಳಾದ ರೈತಪರ, ಮಹಿಳಾಪರ, ಕನ್ನಡ ಪರ, ದಲಿತಪರ, ಪ್ರಗತಿಪರ, ಸಂಘಟನೆಗಳ ಮುಖಂಡರು ಮತ್ತು ಹೋರಾಟಗಾರರನ್ನು ಮತ್ತು ವಿವಿಧ ಜನಾಂಗದವರ ಸಂಘಟನೆಗಳನ್ನ ಸೇರಿಸಿಕೊಂಡು ಸಂವಿಧಾನ ಜಾಗೃತಿ ಜಾಥ ಗ್ರಾಮ ಪಂಚಾಯಿತಿಗೆ ಆಗಮಿಸುವ ವೇಳೆಯಲ್ಲಿ ಸರ್ವರು ಹಾಜರಿದ್ದು ಯಶಸ್ವಿಗೊಳಿಸಿಕೊಡುವ ಬಗ್ಗೆ ಮತ್ತು ಗ್ರಾಮ ಪಂಚಾಯತಿಯ ಶೇಕಡ ೨೫ರಷ್ಟು ಅನುದಾನದಲ್ಲಿ ಸದರಿ ಕಾರ್ಯಕ್ರಮಕ್ಕೆ ವೆಚ್ಚ ಭರಿಸುವ ಬಗ್ಗೆ ಸಂಬಂಧಪಟ್ಟ ಎಲ್ಲಾ ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ವಿಶೇಷ ಸಭೆಗಳನ್ನು ಎರಡು ಮೂರು ದಿನದಲ್ಲಿ ತುರ್ತಾಗಿ ಕರೆದು ಎಲ್ಲರ ಗಮನಕ್ಕೆ ತಂದು ಯಶಸ್ವಿಗೊಳಿಸುವ ಬಗ್ಗೆ ತೀರ್ಮಾನ ಕೈಗೊಳ್ಳುವಂತೆ ಸೂಚಿಸಿದೆ ಹಾಗೂ ಈ ಸಂಬಂಧ ಗ್ರಾಮ ಪಂಚಾಯಿತಿ ಸಭೆ ನಡೆಸಿದ ಬಗ್ಗೆ ಮತ್ತು ಸಂವಿಧಾನ ಜಾಗೃತೆ ಜಾತವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಬಗ್ಗೆ ಕೈಗೊಂಡ ಕ್ರಮದ ಬಗ್ಗೆ ವರದಿಯನ್ನು ತಹಸಿಲ್ದಾರ್ ಅವರಿಗೆ ಮತ್ತು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಗೆ ವರದಿ ಸಲ್ಲಿಸುವಂತೆ ಸೂಚಿಸಿದೆ.
6) ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಸಂವಿಧಾನ ಜಾಗೃತಿ ಜಾಥ ಕುರಿತು ಬ್ಯಾನರ್, ಪೋಸ್ಟರ್, ಗಳನ್ನು ಅಳವಡಿಸುವುದು. ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಕಸ ವಿಲೇವಾರಿ ಮಾಡುವ ವಾಹನಗಳಲ್ಲಿ ಸಂವಿಧಾನ ಜಾಗೃತಿ ಜಾಥ ಅಭಿಯಾನ ಕುರಿತು ಯಾವ ದಿನ ಗ್ರಾಮ ಪಂಚಾಯಿತಿಗೆ ಆಗಮಿಸುತ್ತಿದೆ ಎಂಬುದರ ಬಗ್ಗೆ ಮತ್ತು ಎಲ್ಲರೂ ಆ ದಿನದಂದು ನಿಗದಿತ ಸಮಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಧ್ವನಿ ಮುದ್ರಿತ ಪ್ರಚಾರವನ್ನು ಕಡ್ಡಾಯವಾಗಿ ಮಾಡಿಸುವುದು.
7) ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಸ್ತ್ರೀಶಕ್ತಿ ಸಂಘಗಳ ಮಹಿಳೆಯರು, ವಿವಿಧ ಸಂಘಟನೆಗಳ ಮುಖಂಡರು, ಹೋರಾಟಗಾರರು, ಪದಾಧಿಕಾರಿಗಳು ನಾಗರಿಕರು, ಎಲ್ಲಾ ಜಾತಿ ಧರ್ಮದ ಗುರುಗಳು, ಸ್ವಾಮೀಜಿಗಳು, ಸರ್ವರೂ ಪಾಲ್ಗೊಳ್ಳುವಂತೆ ಪ್ರತಿ ಗ್ರಾಮಗಳಲ್ಲಿ ಡಂಗೂರ ಒಡೆಸುವುದು ಮತ್ತು ಮಾಹಿತಿ ನೀಡುವುದು.
8) ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಪ್ರತಿ ಇಲಾಖೆಯ ನೋಡಲ್ ಅಧಿಕಾರಿಗಳು, ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿ, ನೌಕರರು, ತಾಲೂಕ ಪಂಚಾಯತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಧಿಕಾರಿ ನೌಕರರೊಂದಿಗೆ ಸಮನ್ವಯ ಸಾಧಿಸಿಕೊಂಡು ಸದರಿ ಸಂವಿಧಾನ ಜಾಥವನ್ನು ಯಶಸ್ವಿಗೊಳಿಸುವುದು.
9) ಸದರಿ ಸಂವಿಧಾನ ಜಾಥ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಆಗಮಿಸುವ ಸಂದರ್ಭದಲ್ಲಿ ಗಡಿಭಾಗದಲ್ಲಿ ಸಂಬಂಧಿಸಿದ ಎಲ್ಲಾ ಅಧಿಕಾರಿ, ನೌಕರರು ಆಗಮಿಸಿ ಸದರಿ ಸಂವಿಧಾನ ಜಾಥವನ್ನ ಅತ್ಯಂತ ಗೌರವ ಮತ್ತು ಪ್ರೀತಿಯಿಂದ ಸ್ವಾಗತ ಮಾಡುವುದು. ಹಾಗೂ ಅದೇ ರೀತಿಯಲ್ಲಿ ರೂಟ್ ಮ್ಯಾಪ್‌ನಂತೆ ಮುಂದಿನ ಗ್ರಾಮ ಪಂಚಾಯಿತಿಗೆ ಗೌರವ ಮತ್ತು ಮನ್ನಣೆಯಿಂದ ಬೀಳ್ಕೊಡುವುದು.
10) ಸದರಿ ಸಂವಿಧಾನ ಜಾಗೃತಿ ಜಾಥ ಕಾರ್ಯಕ್ರಮವು ಯಾವುದೇ ಕಾರಣಕ್ಕೂ ಆಕ್ಷೇಪಣೆಗಳಿಗೆ ಮತ್ತು ಗೊಂದಲಗಳಿಗೆ ಅವಕಾಶ ಮಾಡಿಕೊಡದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ಥಳೀಯ ಅಧಿಕಾರಿಗಳು ಹೆಚ್ಚು ಜವಾಬ್ದಾರಿಯನ್ನು ವಹಿಸಿಕೊಂಡು ನೋಡಲು ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಅತ್ಯಂತ ಅರ್ಥಪೂರ್ಣವಾಗಿ ಮತ್ತು ಪರಿಣಾಮಕಾರಿಯಾಗುವ ರೀತಿಯಲ್ಲಿ ಯಶಸ್ವಿಗೊಳಿಸುವುದು
11) ಸಂವಿಧಾನವು ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು, ಸಮಾನತೆ, ಭ್ರಾತೃತ್ವ ಮತ್ತು ಸ್ವಾತಂತ್ರ್ಯ ಹಕ್ಕು ಮತ್ತು ಕರ್ತವ್ಯಗಳನ್ನು ಸಮಾನವಾಗಿ ನೀಡಿರುವ ಕಾರಣ ಸಮಾಜದ ಸರ್ವಜನರು ಅಂದರೆ ಅಲ್ಪಸಂಖ್ಯಾತರು, ಜೈನರುಬುದ್ದರುಕ್ರಿಶ್ಚಿಯನ್ನರುಹಿಂದುಗಳು, ನೌಕರರು ಅಧಿಕಾರಿಗಳು ವಿದ್ಯಾರ್ಥಿಗಳು ಮಹಿಳೆಯರು ವಿವಿಧ ಎಲ್ಲಾ ಸಂಘಗಳ ಹೋರಾಟಗಾರರು ಮುಖಂಡರು ಕಲಾವಿದರು. ಸ್ತ್ರೀಶಕ್ತಿ ಗುಂಪುಗಳ ಮಹಿಳೆ ಸದಸ್ಯರು ಒಟ್ಟಾರೆ ಸರ್ವರೂ ಪಾಲ್ಗೊಳ್ಳುವಂತೆ ಕ್ರಮ ವಹಿಸಿ ಸಂವಿಧಾನ ಜಾಥ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮಾನ್ಯ ಜಿಲ್ಲಾಧಿಕಾರಿಗಳು, ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಹಾಜರಿದ್ದ ಜಿಲ್ಲಾ ಮತ್ತು ತಾಲ್ಲೂಖು ಮಟ್ಟದ ಅಧಿಕಾರಿಗಳು ಹಾಗೂ ನೋಡೆಲ್ ಅಧಿಕಾರಿಗಳು, ಜಿಲ್ಲೆಯ ಎಲ್ಲಾ ತಹಸಿಲ್ದಾರ್ ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಸಂಬಂಧಿಸಿದ ಗ್ರಾಮ ಪಂಚಾಯಿತಿ ನೋಡಲ್ ಅಧಿಕಾರಿಗಳು, ಪ್ರತಿ ಶಾಲಾ-ಕಾಲೇಜು ಮುಖ್ಯೋಪಾಧ್ಯಾಯರು, ಶಿಕ್ಷಕರು, ಪ್ರತಿ ಹೋಬಳಿಯ ರಾಜಸ್ವ ನಿರೀಕ್ಷಕರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಿಗರು ರವರಿಗೆ ಸ್ಪಷ್ಟವಾಗಿ ಸೂಚನೆ ನೀಡಿದರು.