ತುಮಕೂರು: ರಾಜ್ಯ ಸರ್ಕಾರ ಮೂರು ದಶಕಗಳ ಹಿಂದೆ ನಡೆದ ಘಟನೆಗಳನ್ನು ಆಧರಿಸಿ ಕೇಸ್ ಗಳನ್ನು ರಿ ಓಪನ್ ಮಾಡಿ ರಾಮ ಭಕ್ತರು, ಕರಸೇವಕರನ್ನ ಬಂಧಿಸಿರುವುದು ಖಂಡನೀಯವಾಗಿದ್ದು ರಾಜ್ಯ ಸರ್ಕಾರ ಅಲ್ಪಸಂಖ್ಯಾತರನ್ನ ಓಲೈಸಿಕೊಂಡು ದ್ವೇಷದ ರಾಜಕಾರಣ ಮಾಡುತ್ತಾ ಜನರ ಭಾವನೆಗಳಿಗೆ ದಕ್ಕೆ ಮಾಡುತ್ತ ಬಂದರೆ ಹಿಂದೂಗಳ ಆಕ್ರೋಶಕ್ಕೆ ಸಿಲುಕಿ ಸರ್ಕಾರ ನಾಶವಾಗುತ್ತದೆ ಎಂದು ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಸರ್ಕಾರವು ಹಿಂದೂ ವಿರೋಧಿ ನೀತಿ ಮತ್ತು ರಾಮ ವಿರೋಧಿ ನೀತಿ ಅನುಸರಿಸುತ್ತಿದ್ದು ರಾಮ ಜನ್ಮ ಭೂಮಿ ಹೋರಾಟಗಾರ ಶ್ರೀಕಾಂತ್ ಪೂಜಾರಿ ಅವರ ಬಂಧನ ವಿರೋಧಿಸಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಸೂಕ್ತ ಕ್ರಮಕ್ಕಾಗಿ ಮನವಿ ಸಲ್ಲಿಕೆ ಮಾತನಾಡಿದ ಶಾಸಕರು ಈ ದೇಶದ ಧಾರ್ಮಿಕ ತಳಹದಿ ರಾಮಾಯಣ, ರಾಮಾಯಣದ ಮೂಲಪುರುಷ ಶ್ರೀರಾಮ, ಶ್ರೀ ರಾಮನ ಜಾಗ ಅಯೋಧ್ಯೆ ಇದು ಎಲ್ಲರಿಗೂ ತಿಳಿದ ವಿಷಯವಾಗಿದ್ದು ಆದರೆ ಸರ್ಕಾರ ಕಳೆದ ಐದು ಶತಮಾನಗಳ ಹಿಂದೆ ನಡೆದ ಘಟನೆಯನ್ನ ಅನುಸರಿಸಿ ಕೇಸ್ ಗಳನ್ನು ರಿ ಓಪನ್ ಮಾಡಿರುವುದು ಸರಿ ಇಲ್ಲ ಎಂದು ತಿಳಿಸಿದರು.
ಅಯೋಧ್ಯೆ ಪ್ರಕರಣವನ್ನು ದೇಶದ ಎಲ್ಲಾ ರಾಜಕೀಯ ಪಕ್ಷಗಳು ಒಪ್ಪಿಕೊಂಡರು ರಾಜ್ಯದ ಕಾಂಗ್ರೆಸ್ ಸರ್ಕಾರ ವೋಟ್ ಬ್ಯಾಂಕ್ ಸಲುವಾಗಿ ಅಲ್ಪಸಂಖ್ಯಾತರನ್ನು ಒಲೈಸಿಕೊಳ್ಳುವ ಸಲುವಾಗಿ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿರುವುದು ಸರಿಯಿಲ್ಲ ರಾಜ್ಯದಲ್ಲಿ ಎಸ್ ಡಿ ಪಿ ಐ ಸಿಮಿ ಕಾರ್ಯಕರ್ತರು ರಾಜ್ಯದ ಅನ್ನ ತಿಂದು ರಾಜ್ಯಕ್ಕೆ ಬಾಂಬು ಇಡುವ ಮೂಲಕ ದ್ರೋಹ ಬಗೆದ ಇವರ ಮೇಲಿನ ಕೇಸುಗಳನ್ನು ವಾಪಸ್ ತೆಗೆದುಕೊಳ್ಳುತ್ತಿದ್ದು ಶ್ರೀರಾಮ ದೇವಾಲಯ ನಿರ್ಮಾಣಕ್ಕೆ ಕಾರಣಿಭೂತರಾದ ಕರ ಸೇವಕರನ್ನ ರಾಮಭಕ್ತರನ್ನು ಹಳೆ ಕೇಸಿನ ಅಡಿಯಲ್ಲಿ ಬಂಧಿಸಿರುವುದು ಖಂಡನೀಯವಾಗಿದ್ದು ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳದೆ ಹೋದರೆ ದೇಶದ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದ ಅಲೆಗೆ ಸಿಲುಕಿ ಕಾಂಗ್ರೆಸ್ ಪಕ್ಷ ಸರ್ವನಾಶವಾಗುತ್ತದೆ ಎಂದು ಗುಡುಗಿದರು.
ಬಿಜೆಪಿ ಜಿಲ್ಲಾಧ್ಯಕ್ಷ ರವಿಶಂಕರ್ ಹೆಬ್ಬಾಕ ಅವರು ಮಾತನಾಡಿ ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನ ಕಾರ್ಯ ಇದೆ ತಿಂಗಳ 22ರಂದು ನಡೆಯುತ್ತಿದ್ದು ಇಡೀ ವಿಶ್ವದ ಶ್ರೀರಾಮ ಭಕ್ತರು ಸಂಭ್ರಮದಿಂದಿರುವ ಸುಸಂದರ್ಭದಲ್ಲಿ ರಾಜ್ಯ ಸರ್ಕಾರ ಕಳೆದ 30 ವರ್ಷಗಳ ಹಳೆಯ ಕೇಸ್ ಗಳನ್ನು ರಿ ಓಪನ್ ಮಾಡಿ ರಾಮಭಕ್ತ ಮತ್ತು ಕರಸೇವಕನನ್ನು ಬಂಧಿಸಿರುವ ರಾಜ್ಯ ಸರ್ಕಾರದ ಕೃತ್ಯವನ್ನು ಭಾರತೀಯ ಜನತಾ ಪಾರ್ಟಿ ಖಂಡಿಸುತ್ತದೆ ಸರ್ಕಾರ ಅಧಿಕಾರಕ್ಕೆ ಬಂದು 8 ತಿಂಗಳು ಕಳೆದರೂ ಅಭಿವೃದ್ಧಿ ಕಾರ್ಯಗಳನ್ನು ಮಾಡದೆ ಇಂತಹ ಏಯಾ ಕೃತ್ಯಗಳನ್ನು ಮಾಡುತ್ತಿರುವುದು ಬಹುಸಂಖ್ಯಾತ ಹಿಂದೂ ಬಾಂಧವರಿಗೆ ದಕ್ಕೆಉಂಟು ಮಾಡಿದ್ದೆ ಹೀಗಾಗಿ ಭಾರತೀಯ ಜನತಾ ಪಾರ್ಟಿ ರಾಜ್ಯಾಧ್ಯಕ್ಷರ ಸೂಚನೆ ವರೆಗೆ ರಾಜ್ಯಾದ್ಯಂತ ರಾಜ್ಯ ಸರ್ಕಾರದ ವಿರುದ್ಧ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.
ಪ್ರತಿಭಟನಾ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಘಟಕದ ವಿನಯ್ ಬಿದರೆ,ಶಿವಪ್ರಸಾದ್, ಬ್ಯಾಟರಂಗೇಗೌಡ, ಉದ್ಯಮಿ ಚಿದಾನಂದ್, ಬೈರಪ್ಪ, ಅಕ್ಷಯ್ ಚೌಧರಿ, ಯಶಸ್, ನಾಗೇಂದ್ರ ಪ್ರತಾಪ್ ರುದ್ರೇಶ್, ಹನುಮಂತರಾಜು, ಗಣೇಶ್ ಮಹಿಳಾ ಘಟಕದ ಜ್ಯೋತಿ, ಲತಾಬಾಬು, ವಿಜಯಲಕ್ಷ್ಮಿ, ಕಾವ್ಯ, ಸೌಮ್ಯ ಶಕುಂತಲಾ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು ಇತರರು ಉಪಸ್ಥಿತರಿದ್ದರು.