ತುಮಕೂರು: ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ಅವರನ್ನು ವಿದೇಶಗಳಲ್ಲಿ ಪೂಜ್ಯ ಭಾವನೆಯಿಂದ ಕಾಣುತ್ತಿದ್ದು ನಮ್ಮ ದೇಶದಲ್ಲಿ ಅವರು ತಂದ ಕಾನೂನುಗಳನ್ನ ಇತ್ತೀಚೆಗೆ ಬರುವ ಸರ್ಕಾರಗಳು ಗಾಳೀಗೆ ತೋರುತ್ತಾ ಬಂದಿದ್ದು ದಲಿತರು ಮತ್ತು ಅಸ್ಪೃಶ್ಯರನ್ನ ಕಡೆಗಣಿನಿಂದ ನೋಡುತ್ತಿದ್ದು ಹಿನ್ನೆಲೆಯಲ್ಲಿ ತುಮಕೂರು ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಅಂಬೇಡ್ಕರ್ ಅವರ ಪುತ್ತಳಿ ಸ್ಥಾಪನೆ ವಿಚಾರ ಸುಮಾರು ವ?ಗಳಿಂದ ಚರ್ಚೆಯಲ್ಲಿದ್ದು ಇವರಿಗೂ ಜಿಲ್ಲಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಪುತ್ತಳಿ ಸ್ಥಾಪನೆಗೆ ಮನ್ನಣೆ ನೀಡುತ್ತಿಲ್ಲ ಈಗಾಗಿ ಪುತ್ಥಳಿ ಸ್ಥಾಪಿಸಲು ಅಂಬೇಡ್ಕರ್ ಸೇನೆ ಹಣ ನೀಡಲು ಮುಂದಾಗಿದೆ ಜಿಲ್ಲಾಧಿಕಾರಿಗಳೇ ಸೂಕ್ತ ಸ್ಥಳ ನೀಡಿ ಎಂದು ಅಂಬೇಡ್ಕರ್ ಸೇನೆ ನೂತನ ಜಿಲ್ಲಾಧ್ಯಕ್ಷ ಕೋರಾ ರಾಜಣ್ಣ ಅವರು ತಿಳಿಸಿದರು.
ನಗರದ ಎಂ ಜಿ ರಸ್ತೆಯ ಅಂಬೇಡ್ಕರ್ ಭವನದಲ್ಲಿ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ನಂತರ ಮಾತನಾಡಿದ ಕೋರಾ ರಾಜಣ್ಣ ಜಿಲ್ಲೆಯಲ್ಲಿ ಜಿಲ್ಲಾಡಳಿತ ಅಸ್ಪೃಶ್ಯರನ್ನ, ದಲಿತರನ್ನ ಕಡಗಣನೆ ಮಾಡುತ್ತಿದ್ದು ಸಮಸ್ಯೆಗಳನ್ನು ಆಲಿಸದೇ ವ್ಯವಸ್ಥಿತವಾಗಿ ಹಿಂದುಳಿಯಲು ಕಾರಣರಾಗಿದ್ದಾರೆ ದಲಿತರು ಹೆಚ್ಚಿರುವ ಜಿಲ್ಲೆಯಲ್ಲಿ ದೀನ ದಲಿತರ ಆಶಾಕೀರಣವಾಗಿದ್ದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಬಿಆರ್ ಅಂಬೇಡ್ಕರ್ ಅವರ ಪುತ್ಥಳಿ ಸ್ಥಾಪನೆ ಮಾಡಲು ವಿಫಲರಾಗಿದ್ದು ನಮ್ಮ ಅಂಬೇಡ್ಕರ್ ಸೇನೆ ಸಂಘಟನೆಯ ರಾಜ್ಯಾಧ್ಯಕ್ಷರಾದ ಪಿ ಮೂರ್ತಿ ಅವರು ಪುತ್ಥಳಿ ನಿರ್ಮಾಣಕ್ಕೆ ೧೦ ಲಕ್ಷಗಳನ್ನು ನೀಡಲು ಮುಂದಾಗಿದ್ದು ಜಿಲ್ಲಾಧಿಕಾರಿಗಳು ಇದಕ್ಕಾದರೂ ಜಾಗವನ್ನ ಗುರುತಿಸಿ ಕೊಡಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯಲ್ಲಿ ದಲಿತರ ಮೇಲೆ ಶೋ?ಣೆಗಳು ಹೆಚ್ಚುತ್ತಿದ್ದು ಕಾನೂನಿನ ಅಡಿಯಲ್ಲಿ ಅವರಿಗೆ ಭದ್ರತೆಯನ್ನು ಒದಗಿಸಬೇಕು ಡಾ.ಬಿ.ಆರ್ ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಂ ಅವರ ಹೆಸರಿನಲ್ಲಿ ನಿರ್ಮಾಣಗೊಳುತ್ತಿರುವ ಭವನಗಳನ್ನು ಶೀಘ್ರವಾಗಿ ಮುಗಿಸಬೇಕು ಜಿಲ್ಲೆಯ ಯಾವುದೇ ಭಾಗದಲ್ಲಿ ದಲಿತರಿಗೆ ಸಮಸ್ಯೆಗಳು ಎದುರಾದರೆ ಅವರ ಜೊತೆಗೆ ಅಂಬೇಡ್ಕರ್ ಸೇನೆ ಸಂಘಟನೆಯ ಪದಾಧಿಕಾರಿಗಳು ನೇರವಾತ್ತೇವೆ ಎಲ್ಲಾ ತಾಲ್ಲೂಕು ಸಂಘಟನೆಗಳನ್ನು ಅಸ್ತಿತ್ವಕ್ಕೆ ತಂದು ಅಂಬೇಡ್ಕರ್ ಸೇನೆ ಸಂಘಟನೆಯನ್ನು ಬಲಿ?ವಾಗಿ ಬೆಳಸಲಾಗುವುದೆಂದರು.
ತುಮಕೂರು ತಾಲೂಕು ಅಧ್ಯಕ್ಷ ಕೌತಮಾರನಹಳ್ಳಿ ಆಟೋ ಶಿವರಾಜ್ ಅವರು ಮಾತನಾಡಿ ದಲಿತರಿಗೆ ದಲಿತರ ಕೆಲಸಗಳಿಗೆ ವಿಳಂಬ ಮಾಡುತ್ತಿರುವ ಅಧಿಕಾರಿಗಳು ಜಿಲ್ಲಾ ಕೇಂದ್ರದಲ್ಲಿ ಅಂಬೇಡ್ಕರ್ ಅವರ ಪುತ್ಥಳಿ ಸ್ಥಾಪಿಸಲು ವಿಫಲವಾಗುವಲ್ಲಿ ಯಶಸ್ವಿಯಾಗಿದ್ದಾರೆ ಇದರಿಂದಲೇ ನಮ್ಮ ಅಂಬೇಡ್ಕರ್ ಸೇನೆಯ ರಾಜ್ಯಾಧ್ಯಕ್ಷರು ೧೦ ಲಕ್ಷಗಳನ್ನು ಅಂಬೇಡ್ಕರ್ ಅವರ ಪುತ್ತಳಿ ಸ್ಥಾಪನೆಗೆ ಚಾಲೆಂಜ್ ಮಾಡಿದ್ದಾರೆ ಹೀಗಾಗಿ ಜಿಲ್ಲಾಧಿಕಾರಿಗಳು ಕೂಡಲೇ ಜಾಗವನ್ನ ಗುರುತಿಸಿ ಅಂಬೇಡ್ಕರ್ ಪುತ್ತಳಿ ಸ್ಥಾಪನೆಗೆ ನೆರವಾಗಬೇಕು ಎಂದರು.
ಅಂಬೇಡ್ಕರ್ ಸೇನೆ ನೂತನ ಪದಾಧಿಕಾರಿಗಳ ಆಯ್ಕೆ ಸಂದರ್ಭದಲ್ಲಿ ಮಹಿಳಾ ಘಟಕದ ಅಧ್ಯಕ್ಷರಾದ ಕೆ.ಕುಸುಮ ಲಕ್ಷ್ಮೀದೇವಮ್ಮ ಜಿಲ್ಲಾ ಉಪಾಧ್ಯಕ್ಷರಾದ ಹೇಮಂತ್ ಕುಮಾರ್ ಮಂಜುನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.