ತುಮಕೂರು:(ತುರುವೇಕೆರೆ) ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿ ಮೊಬೈಲ್ ಕಸಿದುಕೊಂಡು ಹೋಗಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ತುರುವೇಕೆರೆ ತಾಲೂಕು ದಂಡಿನಶಿವರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ತುರುವೇಕೆರೆ ತಾಲೂಕು ದಂಡಿನಾಶಿವರ ಪೊಲೀಸ್ ಠಾಣಾ ವ್ಯಾಪ್ತಿಯ ಕೆಬ್ಬೆಪಾಳ್ಯ ಗ್ರಾಮದ ಬಳಿ ಫಾರಿಕ್ ಪಾಷಾ ಹಾಗೂ ಮೊಹಮ್ಮದ್ ಸಾಹಿಲ್ ಎಂಬ ವ್ಯಕ್ತಿಗಳು ಚಿಕ್ಕನಾಯಕನಹಳ್ಳಿಯಿಂದ ಕಾಲೇಜು ಮುಗಿಸಿಕೊಂಡು ಗ್ರಾಮಕ್ಕೆ ವಾಪಸ್ಸಾಗುತ್ತಿದ್ದ ವಿದ್ಯಾರ್ಥಿನಿಯನ್ನು ಅಡ್ಡಗಟ್ಟಿ ವಿಳಾಸ ಕೇಳುವ ನೆಪದಲ್ಲಿ ಕೆಟ್ಟ ದೃಷ್ಟಿಯಲ್ಲಿ ನೋಡುತ್ತಾ ಲೈಂಗಿಕ ಕಿರುಕುಳವನ್ನು ನೀಡಿದ್ದಾರೆ. ತಕ್ಷಣ ವಿದ್ಯಾರ್ಥಿನಿ ತನ್ನ ಪೋಷಕರಿಗೆ ಕರೆ ಮಾಡಲು ಮುಂದಾದಾಗ ಆರೋಪಿಗಳು ವಿದ್ಯಾರ್ಥಿನಿಯ ಮೊಬೈಲ್ ಕಸಿದು ಪರಾರಿಯಾಗಿದ್ದಾರೆ. ಈ ಸಂಬಂಧ ವಿದ್ಯಾರ್ಥಿನಿ ದೂರು ನೀಡಿದ್ದು, ದಂಡಿನಶಿವರ ಪೋಲಿಸ್ ಠಾಣೆಯಲ್ಲಿ ಕಲಂ 384, 354 ರೆ\ವಿ ಐ.ಪಿ.ಸಿ.34ರ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕುಣಿಗಲ್ ಉಪವಿಭಾಗದ ಪೋಲಿಸ್ ಉಪಾಧೀಕ್ಷಕರಾದ ಲಕ್ಷ್ಮೀಕಾಂತ್ ನೇತೃತ್ವದಲ್ಲಿ ಕ್ರೈಂ ತಂಡ ರಚಿಸಿ ಆರೋಪಿಗಳನ್ನೆ ಬಂಧಿಸಿದ್ದು, ಅವರಿಂದ ಮೊಬೈಲ್ ಫೋನ್ ವಶಪಡಿಕೊಳ್ಳಲಾಗಿದೆ.
ಸದರೀ ಆರೋಪಿಗಳನ್ನು ಪತ್ತೆಮಾಡಿದ ಕುಣಿಗಲ್ ಡಿವೈಎಸ್ಪಿ ಲಕ್ಷ್ಮೀಕಾಂತ್, ತುರುವೇಕೆರೆ ಸಿಪಿಐ ಲೋಹಿತ್ ಬಿ.ಎನ್. ದಂಡಿನಶಿವರ ಠಾಣಾ ಪಿಎಸ್ಐ ರಾಮಚಂದ್ರಯ್ಯ, ಚಿತ್ತರಂಜನ್, ಎಎಸ್ಐ ಗಂಗಣ್ಣ ಹಾಗೂ ಸಿಬ್ಬಂದಿಗಳಾದ ಮಂಜುನಾಥ್ ಗುರುಮೂರ್ತಿ ನಿಹಾಲ್ ಪ್ರವೀಣ್ ಕುಮಾರ್ ಮುಂತಾದವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ವೆಂಕಟ್ ಹಾಗೂ ಹೆಚ್ಚುವರಿ ಅಧೀಕ್ಷಕರಾದ ಮರಿಯಪ್ಪ ಹಾಗೂ ರಾಮಚಂದ್ರಯ್ಯ ಅಭಿನಂದಿಸಿದ್ದಾರೆ.