ತುಮಕೂರು ನಗರದಲ್ಲಿ ಯುವಕನೊಬ್ಬನನ್ನು ಪೊಲೀಸರು ಅಮಾನುಷವಾಗಿ ನಡೆಸಿಕೊಂಡ ವಿಡಿಯೋ ವೈರಲ್

ತುಮಕೂರು ನಗರದ ಟೌನ್ ಹಾಲ್ ವೃತ್ತದ ಬಳಿ ಹಳೆ ಡಿ ಹೆಚ್ ಒ ಕಚೇರಿ ಬಳಿ ಡಿಸೆಂಬರ್ 14ರಂದು ರಾತ್ರಿ 9:30 ಸಮಯದಲ್ಲಿ ಸುಮಾರು ನಾಲ್ವರು ಪೊಲೀಸ್ ಸಿಬ್ಬಂದಿಗಳು ಯುವಕನೊಬ್ಬನನ್ನ ಸಾರ್ವಜನಿಕವಾಗಿ ಲಾಟಿ ಹಾಗೂ ಬೂಟು ಕಾಲಿನಲ್ಲಿ ಒದ್ದು ಹಲ್ಲೆ ಮಾಡಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಸಕತ್‌ ವೈರಲ್‌ ಆಗಿದೆ.

 

 

 

ವಿಡಿಯೋದಲ್ಲಿನ ಪೊಲೀಸರ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.‌ ಪೊಲೀಸರು ವಿಚಾರಣೆ ನೆಪದಲ್ಲಿ ಯುವಕನಿಗೆ ಅಮಾನವೀಯವಾಗಿ ಹಲ್ಲೆ ಮಾಡಿರುವುದು ನಿಜಕ್ಕೂ ಶೋಚನೀಯ ಸಂಗತಿಯಾಗಿದೆ.  ಪೋಲೀಸರು ಸಾರ್ವಜನಿಕವಾಗಿ ಬೂಟು ಕಾಲಿನಲ್ಲಿ ಒದೆಯುವ ಅಧಿಕಾರ ಕೊಟ್ಟವರು ಯಾರು? ಆತ ಅಮಾಯಕನೇ ಅಥವಾ ಅಪರಾಧಿಯೇ ಎಂದು ತಿಳಿದುಕೊಂಡ ನಂತರವಷ್ಟೇ ಆತನಿಗೆ ಶಿಕ್ಷಿಸುವ ಅಧಿಕಾರವನ್ನು ಪೊಲೀಸ್‌ ಇಲಾಖೆಗೆ ನೀಡಿದ್ದು, ಅದನ್ನು ಮೀರಿ ಸಾರ್ವಜನಿಕವಾಗಿ ಈ ರೀತಿಯಾಗಿ ವರ್ತಿಸಿರುವುದಕ್ಕೆ ನೆಟಿಗರು ಬಹಳ ಆಕ್ರೋಷವನ್ನು ಹೊರ ಹಾಕಿದ್ದಾರೆ.

Leave a Reply

Your email address will not be published. Required fields are marked *

error: Content is protected !!