ಗೌರಿಶಂಕರ್‌ ನೇತೃತ್ವದಲ್ಲಿ ನೂರಾರು ಜೆಡಿಎಸ್‌ ಕಾರ್ಯಕರ್ತರು ಕಾಂಗ್ರೆಸ್‌ ಸೇರ್ಪಡೆ

ಇತ್ತೀಚೆಗೆಷ್ಟೇ ಜೆಡಿಎಸ್‌ ಪಕ್ಷವನ್ನು ತೊರೆದು ಕಾಂಗ್ರೆಸ್‌ ಪಕ್ಷವನ್ನು ಸೇರ್ಪಡೆಯಾದ ತುಮಕೂರು ಗ್ರಾಮಾಂತರ ಶಾಸಕರಾದ ಡಿ.ಸಿ.ಗೌರಿಶಂಕರ್‌ ಅವರ ಸೇರ್ಪಡೆ ನಂತರ ಗ್ರಾಮಾಂತರ ವಿಭಾಗದಲ್ಲಿ ವಿಶೇಷ ಬದಲಾವಣೆಗಳು ಆಗಿ ದಿನಂಪ್ರತಿ ನೂರಾರು ಜನರು ಕಾಂಗ್ರೆಸ್‌ ಪಕ್ಷದತ್ತ ವಲಸೆ ಹೋಗುತ್ತಿದ್ದಾರೆ, ಅದಕ್ಕೆ ಮುನ್ನಡಿಯಾಗಿ

 

 

 

 

ರಂಗನಾಥಪುರ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯರಾದ, ರಮೇಶ್ ಗೌಡ್ರು, ಕುಮಾರ್ ,ಜನಾರ್ಧನ್ ರವರ ಸಮ್ಮುಖದಲ್ಲಿ 50 ಕ್ಕು ಹೆಚ್ಚು ಜನರು ಸೇರ್ಪಡೆಯಾದರು. ಹೊಸಹಳ್ಳಿ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯರಾದ ಜಗದೀಶ್ ಗೌಡ ರವರ ಸಮ್ಮುಖದಲ್ಲಿ 25 ಕ್ಕು ಹೆಚ್ಚು ಜನರು ಸೇರ್ಪಡೆಯಾದರು. ಕೊತ್ತಿಹಳ್ಳಿ ಗ್ರಾಮದ ಜಗದೀಶ್ ಗೌಡ, ಚಿಕ್ಕಣ್ಣ ಗೌಡ್ರು ರವರ ಸಮ್ಮುಖದಲ್ಲಿ 35ಕ್ಕು ಹೆಚ್ಚು ಜನರು ಸೇರ್ಪಡೆಯಾದರು. ಬೆಳಗುಂಬ ಗ್ರಾಮದ ಮಂಜು ಮತ್ತು ಸುಬ್ಬು ರವರ ಸಮ್ಮುಖದಲ್ಲಿ 15 ಕ್ಕು ಹೆಚ್ಚು ಜನರು ಸೇರ್ಪಡೆಯಾದರು.

 

 

 

 

ಇನ್ನು ಹೊನ್ನುಡಿಕೆ ಗ್ರಾಮದ ವಾಲಿಬಾಲ್ ಟೀಮ್ ಮನು ರವರ ಸಮ್ಮುಖದಲ್ಲಿ 30 ಕ್ಕು ಹೆಚ್ಚು ಯುವಕರು ಸೇರ್ಪಡೆಯಾದರು. ಕಣಕುಪ್ಪೆ ಗ್ರಾಮದ ಲೋಕೇಶ್, ಮಾಯಣ್ಣಗೌಡ ರಾಜಣ್ಣ, ರವರ ಸಮ್ಮುಖದಲ್ಲಿ 40 ಕ್ಕು ಹೆಚ್ಚು ಜನರು ಸೇರ್ಪಡೆಯಾದರು. ಕುಡುವಲಕುಂಟೆ ಗಂಗಾಧರ್ ಗೌಡ, ನಾಗೇಶ್ 15ಕ್ಕು ಹೆಚ್ಚು ಜನರು ಸೇರ್ಪಡೆಯಾದರು. ಸೋರೆಕುಂಟೆ ಗ್ರಾಮದ 50 ಕ್ಕು ಹೆಚ್ಚು ಜನರು ಸೇರ್ಪಡೆಯಾದರು. ಕೌತಮಾರನಹಳ್ಳಿ ಶಿವರಾಜುರವರ ಸಮ್ಮುಖದಲ್ಲಿ 50 ಕ್ಕು ಹೆಚ್ಚು ಜನರು ಸೇರ್ಪಡೆಯಾದರು. ಮಾಚನಹಳ್ಳಿ ಗ್ರಾಮದ ಜಯಣ್ಣ ಮತ್ತು ಅವರ ತಂಡದಿಂದ 15 ಕ್ಕು ಹೆಚ್ಚು ಜನರು ಸೇರ್ಪಡೆಯಾದರು.

 

 

 

ಇನ್ನು ಹಲವಾರು ಗ್ರಾಮದಿಂದ ಬಂದಂತ ಪ್ರಮುಖ ನಾಯಕರುಗಳು 500ಕ್ಕು ಜನರು ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು, ಈ ಸಂದರ್ಭದಲ್ಲಿ ಮಾತನಾಡಿದ ಗೌರಿಶಂಕರ್‌ರವರು ಗ್ರಾಮಾಂತರ ಭಾಗದಲ್ಲಿ ನನ್ನ ನಂಬಿಕೊಂಡು ಲಕ್ಷಾಂತರ ಕಾರ್ಯಕರ್ತರು ಇದ್ದಾರೆ, ಅವರಿಗೆ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದಲೇ ಪಕ್ಷ ಸೇರ್ಪಡೆ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಜೊತೆಗೆ ಹಲವಾರು ವರ್ಷಗಳಿಂದ ಇಲ್ಲಿನ ಜನರಿಗೆ ಬಿಜೆಪಿ ಪಕ್ಷದಿಂದ ಅನ್ಯಾಯವಾಗಿದೆ ಅದಕ್ಕಾಗಿ ಜೆಡಿಎಸ್‌ ಮತ್ತು ಬಿಜೆಪಿ ಮೈತ್ರಿಯಿಂದ ಬೇಸತ್ತು ನಾನು ಈ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಿದರು.

Leave a Reply

Your email address will not be published. Required fields are marked *

error: Content is protected !!