ಕಳಪೆ ಗುಣಮಟ್ಟದ ಬಿತ್ತನೆ ಬೀಜಗಳನ್ನು ನೀಡುತ್ತಿದೆಯೇ? ಕರ್ನಾಟಕ ರಾಜ್ಯ ಬೀಜ ನಿಗಮ …? ಕಂಗಾಲಾಗಿರುವ ರೈತರು

ತುಮಕೂರು : ಕರ್ನಾಟಕ ರಾಜ್ಯ ಬೀಜ ನಿಗಮ ಬೋವಿಪಾಳ್ಯ ಶಾಖೆಯ ಅಧಿಕಾರಿಗಳು ಕಳಪೆ ಬಿತ್ತನೆ ರಾಗಿ ವಿತರಿಸಿದ್ದು , ಈ ರಾಗಿ ಬಿತ್ತನೆ ಮಾಡಿದ ರೈತರು ಕಂಗಾಲಾಗುವ ಸ್ತಿತಿ ನಿರ್ಮಾಣವಾಗಿದೆ.

 

 

 

 

ತುಮಕೂರು ತಾಲ್ಲೂಕು ಕೋರ ಹೋಬಳಿ ಮೆಳೇಹಳ್ಳಿ ಗ್ರಾಮದ ರೈತರಾದ ಈಶ್ವರಯ್ಯ ಅವರು ಬೋವಿಪಾಳ್ಯ ಬೀಜ ನಿಗಮದಲ್ಲಿ ಎಂ ಎಲ್ 365 ತಳಿಯ ಬಿತ್ತನೆ ರಾಗಿ ಖರೀದಿ ಮಾಡಿ ಒಟ್ಲು ಪಾತಿ ಮಾದರಿಯಲ್ಲಿ 20 ದಿನ ಕಳೆದ ಬಳಿಕ ರಾಗಿ ನಾಟಿ ಮಾಡಿದ್ದಾರೆ, ಬೀಜ ನಿಗಮದ ಅಧಿಕಾರಿಗಳು ಕಳಪೆ ಬಿತ್ತನೆ ರಾಗಿ ನೀಡಿರುವ ಪರಿಣಾಮ ರಾಗಿ ನಾಟಿ ಮಾಡಿದ 15 ದಿನಕ್ಕೆ ರಾಗಿ ಪೈರು ಒಂದು ಗೇಣು ಬೆಳೆದು ತೆನೆ ಮೂಡಿದೆ, ರಾಗಿ ತೆನೆಯೂ ಸಹ ಸಣ್ಣ ಇಲುಕುಗಳಲ್ಲಿ ಮೂಡಿದ್ದು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

 

 

 

 

ಕರ್ನಾಟಕ ರಾಜ್ಯ ಬೀಜ ನಿಗಮ ಬೋವಿಪಾಳ್ಯ ಶಾಖೆ ಅಧಿಕಾರಿಗಳು ಕಳಪೆ ಬಿತ್ತನೆ ರಾಗಿ ವಿತರಿಸಿರುವ ಪರಿಣಾಮ 15 ದಿನದಲ್ಲಿ ಒಂದು ಗೇಣು ಬೆಳೆದು ರಾಗಿಯಲ್ಲಿ ತೆನೆ ಮೂಡಿದೆ,ರಾಗಿಯೂ ಸಹ ಹೆಚ್ಚು ಬೆಳೆಯದೆ ಕುಬ್ಜವಾಗಿದೆ,ಪ್ರತೀ ವರ್ಷ ನಾವು ಇದೇ ಜಮೀನಿನಲ್ಲಿ 8 ಕ್ವಿಂಟಲ್ ರಾಗಿ ಬೆಳೆಯುತ್ತಿದ್ದೆವು,ದನಕರುಗಳಿಗೆ ವರ್ಷಪೂರ್ತಿ ಸಾಕಾಗುವಷ್ಟು ಎರಡು ಟ್ರಾಕ್ಟರ್ ಮೇವು ಲಭಿಸುತ್ತಿತ್ತು ಈ ಭಾರಿ ಅಧಿಕಾರಿಗಳ ಬೇಜವಾಬ್ದಾರಿಯಿಂದ ರಾಗಿಯೂ ಇಲ್ಲ ಮೇವು ಇಲ್ಲದ ಸ್ತಿತಿ ನಿರ್ಮಾಣವಾಗಿದೆ ಬೀಜ ನಿಗಮದ ಅಧಿಕಾರಿಗಳ ಕರ್ತವ್ಯಲೋಪದಿಂದ ಸಾವಿರಾರು ರೂ ನಷ್ಟವಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

 

 

 

 

ಕಳಪೆ ಬಿತ್ತನೆ ತಳಿ ರಾಗಿ ವಿತರಿಸುವ ಬಗ್ಗೆ ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಕರ್ನಾಟಕ ರಾಜ್ಯ ಬೀಜ ನಿಗಮ ಬೋವಿಪಾಳ್ಯ ಶಾಖೆ ಅಧಿಕಾರಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಿ ಸೂಕ್ತ ಪರಿಹಾರ ನೀಡುವಂತೆ ಮನವಿ ಮಾಡಿದ್ದರೂ ಸಹ ಜಂಟಿ ನಿರ್ದೇಶಕರು ಸ್ತಳ ಪರಿಶೀಲನೆ ಮಾಡಿಲ್ಲ, ಈ ಬಗ್ಗೆ ಪ್ರಶ್ನೆ ಮಾಡಿದರೆ ಜಿಕೆವಿಕೆ ವಿಜ್ಙಾನಿಗಳು ಬಂದು ಪರಿಶೀಲಿಸಬೇಕು,ಅರ್ಜಿ ರವಾನಿಸಬೇಕು ಎಂದು ಹಾರಿಕೆ ಉತ್ತರ ನೀಡುತ್ತಾರೆ,ನಿಮ್ಮಭಾಗದ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ಬಂದು ಪರಿಶೀಲನೆ ನಡೆಸುತ್ತಾರೆ ಎಂಬ ಸಬೂಬು ಹೇಳುತ್ತಾರೆ,ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ನಮಗೆ ಈ ಬಗ್ಗೆ ಮಾಹಿತಿಯೇ ಇಲ್ಲ ಎಂದು ಉಡಾಫೆ ಉತ್ತರ ನೀಡುತ್ತಾರೆ ಎಂದು ಕೃಷಿ ಇಲಾಖೆ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

 

 

 

ರೈತರ ಬದುಕಿನಲ್ಲಿ ಚೆಲ್ಲಾಟವಾಡುವ ಕರ್ನಾಟಕ ರಾಜ್ಯ ಬೀಜ ನಿಗಮದ ಅಧಿಕಾರಿಗಳು ಹಾಗೂ ಕೃಷಿ ಇಲಾಖೆ ಅಧಿಕಾರಿಗಳ ವಿರುದ್ದ ಕೃಷಿ ಸಚಿವರು ಶಿಸ್ತು ಕ್ರಮ ಜರುಗಿಸಬೇಕು ಹಾಗೂ ಸೂಕ್ತ ಪರಿಹಾರ ದೊರಕಿಸಬೇಕೆಂದು ರೈತ ಈಶ್ವರಯ್ಯ ಆಗ್ರಹಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!