ತುಮಕೂರು: ಸಮಗ್ರ ಶಿಕ್ಷಣ ನೀತಿ ಸೇರಿದಂತೆ ಶಿಕ್ಷಣ ಕ್ಷೇತ್ರದ ಅಮುಲಾಗರ ಬದಲಾವಣೆಗಾಗಿ ಏಕ ರೀತಿಯ ಶಿಕ್ಷಣ ನೀತಿ ತರುವ ಉದ್ದೇಶದಿಂದ ಖಾಸಗಿ ಶಾಲಾ ಶಿಕ್ಷಣ ಸಂಸ್ಥೆ ಮತ್ತು ಶಿಕ್ಷಕರ ಹೊಳತಿಗಾಗಿ ರೂಪ್ಸಾ ಸಂಘಟನೆ ಅನೇಕ ಹೋರಾಟಗಳನ್ನು ರೂಪಿಸುತ್ತಾ ಬಂದಿದ್ದು ಹಿನ್ನೆಲೆಯಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ ಅವರು ಶಿಕ್ಷಣ ಕ್ಷೇತ್ರದಲ್ಲಿರುವ ಸಮಸ್ಯೆಗಳನ್ನು ಬುಡ ಸಮೇತ ಕಿತ್ತೊಗೆಯಲು ಟೊಂಕ ಕಟ್ಟಿ ನಿಂತು ಆಗ್ನೇಯ ಶಿಕ್ಷಕರ ಕ್ಷೇತ್ರದ ಸ್ವಾತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸಮಸ್ಯೆಗಳನ್ನು ಬಗೆಹರಿಸಿ ಅಮುಲಾಗ್ರ ಬದಲಾವಣೆ ತರುವ ನಿಟ್ಟಿನಲ್ಲಿ ತುಮಕೂರು ಜಿಲ್ಲೆಯಲ್ಲಿ ಮಿಂಚಿನಂತೆ ಸಂಚಾರ ಮಾಡುತ್ತಿದ್ದು ತುಮಕೂರು ಜಿಲ್ಲೆಯ ಶೈಕ್ಷಣಿಕ ಜಿಲ್ಲೆ ಮಧುಗಿರಿ ತಾಲೂಕಿನ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಕರೊಂದಿಗೆ ಸುಧೀರ್ಘ ಸಮಾಲೋಚನೆ ನಡೆಸಿದರು.
ಮಧುಗಿರಿ ಜಿಲ್ಲೆಯ ವಿವಿಧ ಶಾಲೆಗಳಿಗೆ ಭೇಟಿ ನೀಡಿ, ಇಲ್ಲಿನ ಸ್ಥಳೀಯ ಶಿಕ್ಷಕರ ಸಮಸ್ಯೆಗಳನ್ನು ಸುಧೀರ್ಘವಾಗಿ ಆಲಿಸಿದ ಲೋಕೇಶ್ ತಾಳಿಕಟ್ಟೆಯವರು ಶಿಕ್ಷಕರುನ್ನುದ್ದೇಶಿಸಿ ಮಾತನಾಡುತ್ತಾ, ರಾಜ್ಯಕ್ಕೆ ತನ್ನದೇ ಆದ ಶಿಕ್ಷಣ ನೀತಿ ಇದ್ದು, ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸಲು ಕರೆ ನೀಡಿದರು.
ಶಿಕ್ಷಕರ ವಿಧಾನ ಪರಿಷತ್ ಕ್ಷೇತ್ರಗಳಿಗೆ ಶಿಕ್ಷಕರೇ ಸ್ಪರ್ಧೆ ಮಾಡಬೇಕು ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಕರೊಟ್ಟಿಗೆ ನಿಂತಿದ್ದೇ ಆದಲ್ಲಿ ಸದಾ ನಾನು ಬೆಂಬಲವಾಗಿ ನಿಲ್ಲುತ್ತೇನೆ ಎಂಬ ಘೋಷ ವಾಕ್ಯದೊಂದಿಗೆ ಕೋಲಾರ, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತಿದ್ದು ಈ ಪ್ರವಾಸದಲ್ಲಿ ಶಿಕ್ಷಕರ ಸಮಸ್ಯೆಗಳನ್ನು ಬಹಳ ಆಳವಾಗಿ ತಿಳುದುಕೊಳ್ಳುತ್ತಿದ್ದೇನೆ, ಒಬ್ಬಬ್ಬ ಶಿಕ್ಷಕರದು ಒಂದು ಒಂದು ರೀತಿಯ ಸಮಸ್ಯೆಗಳಾದರೇ, ಶಿಕ್ಷಣ ಸಂಸ್ಥೆಯದ್ದು ಮತ್ತೊಂದು ರೀತಿಯ ಸಮಸ್ಯೆಗಳು ನನ್ನ ಬಳಿ ತೋಡಿಕೊಳ್ಳುತ್ತಿದ್ದಾರೆ, ಇಂತಹ ಸಮಸ್ಯೆಗಳಿಗೆ ಪರಿಹಾರ ರೂಪಿಸಬೇಕೆಂದರೆ ಮೊದಲು ಚುನಾಯಿತ ವ್ಯಕ್ತಿ ಶಿಕ್ಷಕ ಮತ್ತು ಶಿಕ್ಷಣ ಸಂಸ್ಥೆಗಳ ಬಗ್ಗೆ ತಿಳಿದಿರುವ ವ್ಯಕ್ತಿಯಾಗಿರಬೇಕು ಎಂದು ಹೇಳಿದರು.
ತಾನು ಸ್ವತಃ ಶಿಕ್ಷಕನಾಗಿ ಸೇವೆ ಸಲ್ಲಿಸಿದ ಅನುಭವದೊಂದಿಗೆ ಹಲವಾರು ಶಿಕ್ಷಣ ಸಂಸ್ಥೆಗಳನ್ನು ನಡೆಸಿಕೊಂಡು ಬರುತ್ತಾ, ಶಿಕ್ಷಕರ ನೋವುಗಳಿಗೆ ಸ್ಪಂದಿಸುತ್ತಾ ಬರುತ್ತಿದ್ದೇನೆ, ಮುಂಬರುವ ಚುನಾವಣೆಯಲ್ಲಿ ಶಿಕ್ಷಕರ ಬೆಂಬಲದೊಂದಿಗೆ ನಾನು ಚುನಾಯಿತನಾಗಿ ಬಂದಲ್ಲಿ ನಾನು ಈ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಶ್ರಮವಹಿಸುವುದಲ್ಲದೇ ನನ್ನ ಅಧಿಕಾರವಧಿಯಲ್ಲಿ ಶಿಕ್ಷಕರಿಗೆ ಬೇಕಾಗುವ ಭದ್ರತೆ ಮತ್ತು ಬದ್ಧತೆಯನ್ನು ಕಲ್ಪಿಸಿಕೊಡುತ್ತೇನೆಂದು ತಿಳಿಸಿದರು.