ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಯಲ್ಲಿಯೇ ಜನರ ನೋವಿಗೆ ಸ್ಪಂದಿಸಲು ಹೊರಟ ನೂತನ ಜಿಲ್ಲಾಧಿಕಾರಿ

ತುಮಕೂರು : ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಸಿರಾ ತಾಲ್ಲೂಕು ಆಡಳಿತ ಸೌಧ ಸಭಾಂಗಣದಲ್ಲಿ ಜನತಾ ದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಈ ಕಾರ್ಯಕ್ರಮಕ್ಕೆ ನೆನ್ನೆ ತಡ ಸಂಜೆಯಷ್ಟೇ ತುಮಕೂರು ಜಿಲ್ಲಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡ ಶ್ರೀಮತಿ ಶುಭಾ ಕಲ್ಯಾಣ್‌ ರವರು ಇಂದು ಬೆಳ್ಳಂಬೆಳಿಗ್ಗೆಯ ಜನರ ಕಷ್ಟ ನಷ್ಟಗಳಿಗೆ ಸ್ಪಂದಿಸುವಂತಹ ಕಾರ್ಯ ಜನತಾದರ್ಶನದಲ್ಲಿ ಭಾಗಿಗಳಾಗಿದ್ದಾರೆ.

 

 

 

ಶ್ರೀಮತಿ ಶುಭಾಕಲ್ಯಾಣ್‌ರವರು ಈ ಹಿಂದೆ ತುಮಕೂರು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾಗಿ ಕೆಲಸ ನಿರ್ವಹಿಸಿದ ಅನುಭವವನ್ನು ಹೊಂದಿದ್ದು, ತುಮಕೂರು ಜಿಲ್ಲೆಯು ಈಗಾಗಲೇ ಅವರಿಗೆ ಚಿರಪರಿಚತವಾಗಿದೆ, ತುಮಕೂರು ಜಿಲ್ಲಾಧಿಕಾರಿಗಳಾಗಿ ಅಧಿಕಾರ ಸ್ವೀಕರಿಸುವ ಮೊದಲು ಆರ್.ಡಿ.ಪಿ.ಆರ್.‌ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸುತ್ತಿದ್ದರು.

 

 

 

ಜನರ ಅಹ್ವಾಲುಗಳನ್ನು ಕರ್ನಾಟಕ ಸರ್ಕಾರದ ವಿಶೇಷ ನವದೆಹಲಿ ಪ್ರತಿನಿಧಿ ಹಾಗೂ ಶಿರಾ ಶಾಸಕರಾದ  ಟಿ.ಬಿ.ಜಯಚಂದ್ರ ಅವರು  ಉಪಸ್ಥಿತರಿದ್ದರು, ಜೊತೆಗೆಇದೇ ಸಮಯದಲ್ಲಿ  ಅರ್ಹ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳನ್ನು ವಿತರಿಸಿದರು.

 

 

ಈ ಸಂದರ್ಭದಲ್ಲಿ ನೂತನ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್, ಜಿಲ್ಲಾ ಪಂಚಾಯತ್ ಸಿಇಒ ಜಿ.ಪ್ರಭು, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ ಕರಾಳೆ ಸೇರಿದಂತೆ ಮತ್ತಿತರರು ಜಿಲ್ಲೆಯ ಉನ್ನತ ಅಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!