ಕಾರ್ಮಿಕ ಇಲಾಖೆಯ ವತಿಯಿಂದ ಬೃಹತ್ ಆರೋಗ್ಯ ತಪಾಸಣೆ ಮತ್ತು ತರಬೇತಿ ಶಿಬಿರ

 

ತುಮಕೂರು : ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಹಾಗೂ ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿತರಾಗಿರುವ ಕಟ್ಟಡ ಮತ್ತು ಎಲ್ಲಾ ವರ್ಗದ ಕಾರ್ಮಿಕರ ಆರೋಗ್ಯದ ಹಿತದೃಷ್ಠಿಯಿಂದ ಆರೋಗ್ಯ ತಪಾಸಣೆಯನ್ನು ಡಿಸೆಂಬರ್ ೧೫, ೨೦೨೩ರಿಂದ ನಡೆಸಲಾಗುವುದು, ಈ ಶಿಬಿರವು ಪ್ರತೀ ಗ್ರಾಮವಾರು ಹತ್ತಿರದ ಪಂಚಾಯಿತಿ ಕಛೇರಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಕಾರ್ಮಿಕ ಇಲಾಖೆಯ ಕಛೇರಿಗಳಲ್ಲಿ ಈ ಶಿಬಿರವನ್ನು ನಡೆಸಲಾಗುವುದು ಎಂದು ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ತೇಜಾವತಿ ರವರು ತಿಳಿಸಿದರು.

 

 

ಈ ಶಿಬಿರದ ಪ್ರಯೋಜನ ಪಡೆಯಲು ಕಾರ್ಮಿಕರು ಇಲಾಖೆಯಿಂದ ನೀಡಲಾಗಿರುವ ಕಾರ್ಮಿಕರ ಕಾರ್ಡ್, ಆಧಾರ್ ಕಾರ್ಡ್ ಮತ್ತು ಅವಲಂಬಿತರಿಗಾಗಿ ರೇಷನ್ ಕಾರ್ಡ್‌ನ್ನು ಒದಗಿಸುವುದು ಮುಖ್ಯವಾಗಿರುತ್ತದೆ.

 

 

 

ಈ ಆರೋಗ್ಯ ಶಿಬಿರದಲ್ಲಿ ಹೃದ್ರೋಗ, ಸಕ್ಕರೆ ಕಾಯಿಲೆ, ಅನುವಂಶಿಕ ರೋಗಗಳು, ಸಿಬಿಸಿ & ಇಎಸ್‌ಆರ್, ಲಿವರ್ ಕಾರ್ಯ ಪರೀಕ್ಷೆ, ದೃಷ್ಠಿ ತಪಾಸಣೆ, ಶ್ವಾಸಕೋಶದ ಕಾರ್ಯಪರೀಕ್ಷೆ ಸೇರಿದಂತೆ ಒಟ್ಟು ೨೦ ರೀತಿಯ ಆರೋಗ್ಯ ಪರೀಕ್ಷೆಗಳನ್ನು ಈ ಶಿಬಿರದಲ್ಲಿ ನಡೆಸಲಾಗುವುದು ಎಂದು ಕಾರ್ಮಿಕ ಅಧಿಕಾರಿಗಳು ತಿಳಿಸಿದರು.

 

 

 

ಈ ಶಿಬಿರವು ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆಯ ನೇತೃತ್ವದಲ್ಲಿ ರಾಜ್ಯಾದ್ಯಂತ ನಡೆಸಲಾಗುತ್ತಿದ್ದು, ಮುನ್ನೆಚ್ಚರಿಕೆ ಆರೋಗ್ಯ ರಕ್ಷಣೆ ಮತ್ತು ಔಷಧಗಳು ಕಾರ್ಮಿಕರನ್ನು ಅನಾರೋಗ್ಯದಿಂದ ರಕ್ಷಿಸುವುದಲ್ಲದೇ ಭವಿಷ್ಯದ ಖಾಯಿಲೆಗಳಿಂದ ರಕ್ಷಿಸುತ್ತದೆ, ಆದುದರಿಂದ ಎಲ್ಲಾ ಕಾರ್ಮಿಕರು ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!