ತುಮಕೂರು – ಕಳೆದ ತಿಂಗಳು ರಾಜ್ಯವೇ ಬೆಚ್ಚಿ ಬೀಳುವಂತಹ ಪಟಾಕಿ ದುರಂತ ಕಂಡ ಅತ್ತಿಬೆಲೆ ಪಟಾಕಿ ದುರಂತ 17 ಹೆಚ್ಚು ಮಂದಿಯನ್ನು ಬಲಿ ತೆಗೆದುಕೊಂಡ ಘಟನೆಯ ನಂತರ ಸರ್ಕಾರ ಕಟ್ಟುನಿಟಿನ ಸೂಚನೆಯೊಂದಿಗೆ ಈ ಬಾರಿ ಪಟಾಕಿ ಮಳಿಗೆ ನಡೆಸಲು ಪರವಾನಗಿ ನೀಡಲು ಹಲವು ಕಟ್ಟುನಿಟಿನ ಕ್ರಮಗಳನ್ನು ತೆಗೆದುಕೊಂಡು ಪಟಾಕಿ ಮಾರಲು ಅನುಮತಿ ನೀಡಿದೆ.
ಇನ್ನು ರಾಜ್ಯ ಸರ್ಕಾರದ ಕಟ್ಟುನಿಟಿನ ಕ್ರಮಗಳಿಗೆ ಬೆಚ್ಚಿಬಿದ್ದಿರುವ ಪಟಾಕಿ ಮಾರಾಟಗಾರರು ಹೇಗಾದರೂ ಮಾಡಿ ಉಳಿದಿರುವ ಪಟಾಕಿಯನ್ನು ಮಾರಿ ಹಣ ಸಂಪಾದಿಸಲು ಹಲವು ವಾಮ ಮಾರ್ಗಗಳನ್ನು ಹುಡುಕಿಕೊಳ್ಳುತ್ತಿದ್ದಾರೆ.
ರಾಜ್ಯ ಸರ್ಕಾರದ ಕಟ್ಟುನಿಟಿನ ಕ್ರಮಗಳನ್ನು ಪೂರ್ಣಗೊಳಿಸಲು ಆಗದ ಪಟಾಕಿ ಮಾರಾಟಗಾರರು ಹಲವು ವಾಮ ಮಾರ್ಗಗಳನ್ನು ಕಂಡುಕೊಂಡು ಪಟಾಕಿ ಮಾರುತಿರುವ ಆರೋಪಗಳು ಕೇಳಿ ಬರುತ್ತಿವೆ.
ಇದಕ್ಕೆ ಪುಷ್ಟಿ ನೀಡುವಂತೆ ತುಮಕೂರಿನಲ್ಲೊಂದು ಅಕ್ರಮ ಪಟಾಕಿ ತಯಾರಿಕಾ ಘಟಕವು ಕಳೆದ ಹಲವಾರು ವರ್ಷಗಳಿಂದ ಇದ್ದು ಸದ್ದಿಲ್ಲದೇ ಊರೆಲ್ಲಾ ಸದ್ದು ಮಾಡುತ್ತಿದ್ದ ಇವರ ಪಟಾಕಿ ಸುದ್ದಿ ಇದೀಗ ಸುದ್ದಿಗೆ ಗ್ರಾಸವಾಗಿದೆ.
ತುಮಕೂರಿನ ಕೂಗಳತೆಯ ದೂರದಲ್ಲಿರುವ ಹೆಗ್ಗೆರೆಯಲ್ಲಿ ಫಿರ್ದೋಸ್ ಮತ್ತು ಅವರ ಕುಟುಂಬ ವರ್ಗ ಹಲವಾರು ವರ್ಷಗಳಿಂದ ಪಾರಂಪರಿಕ (ನಾಟಿ) ಪಟಾಕಿ ತಯಾರಿಕೆಯನ್ನು ಮಾಡಿಕೊಂಡು ಬರುತ್ತಿದ್ದರು, ಇವರ ಪಟಾಕಿ ತುಮಕೂರಿನಲ್ಲಿ ಗಣೇಶ ವಿಸರ್ಜನೆ, ಸಿದ್ದಗಂಗಾ ಮಠ ದಲ್ಲಿ ನಡೆಯುವ ಬೆಳ್ಳಿ ಪಲ್ಲಕಿ ಉತ್ಸವದಲ್ಲಿ ಹಚ್ಚುವ ಪಟಾಕಿ, ಇನ್ನು ಪ್ರಸಿದ್ಧ ಗೂಳೂರು ಗಣಪ ವಿಸರ್ಜನೆಗೂ ಇವರ ಪಟಾಕಿ ಬಳಸಲಾಗುತ್ತಿದೆ ಎಂಬ ಸುದ್ದಿ ಇದೆ. ಆದರೆ ಇದುವರೆಗೂ ಇವರ ಪಟಾಕಿ ಇಂದ ಯಾವುದೇ ಅವಘಡ ಸಂಭಾವಿಸಿಲ್ಲ, ಆದರೂ ಪ್ರಸ್ತುತ ಇರುವ ಕಾನೂನಿನ ಪಾಲನೆ ಮಾಡಬೇಕಲ್ಲವೇ ಅದು ಮಾಡದೇ ಹೋದರೆ ಅಪರಾಧ ಅಲ್ಲವೇ?
ಹಲವು ವರ್ಷಗಳಿಂದ ಪಟಾಕಿ ಮಾರುತಿದ್ದ ವರ್ತಕ ಈ ಬಾರಿ ಅಧಿಕೃತವಾಗಿ ಲೈಸೆನ್ಸ್ ಇಲ್ಲದೆ ಕಳ್ಳ ದಾರಿಯ ಮೂಲಕ ಪಟಾಕಿ ತಯಾರು ಮಾಡಿ ಅದನ್ನು ಮಾರುತಿದ್ದು ಇದಕ್ಕೆ ಸಂಬಂಧಿಸಿದಂತೆ ತುಮಕೂರಿನ ಮಾಧ್ಯಮ ತಂಡ ನಡೆಸಿರುವ ಸ್ಟಿಂಗ್ ಆಪರೇಷನ್ ನಲ್ಲಿ ವರ್ತಕನ ಮುಖವಾಡ ಸಂಪೂರ್ಣ ಬಯಲಾಗಿದೆ.
ಇನ್ನು ವರ್ತಕ ಪಟಾಕಿ ಮಾರಲು ಹಲವು ದಾರಿಗಳನ್ನ ಹುಡುಕಿಕೊಂಡಿರುವ ಮಾಹಿತಿ ಹೀಗಿದ್ದು ಪಟಾಕಿ ಬೇಕಿರುವ ಗ್ರಾಹಕ ಆತನ ತೋಟಕ್ಕೆ ಭೇಟಿ ನೀಡಿದಾಗ ಗ್ರಾಹಕರಿಗೆ ಬೇಕಿರುವ ಪಟಾಕಿಗಳ ಪಟ್ಟಿ ತಯಾರಿಸಿ ಆ ಪಟ್ಟಿಯನ್ನು ವಾಟ್ಸಾಪ್ ಮೂಲಕ ಮತೊಬ್ಬ ವ್ಯಕ್ತಿಗೆ ರವಾನಿಸಿ ಆ ವ್ಯಕ್ತಿಯ ಮೂಲಕ ಅವರು ಕೊಡುವ ಫೋನ್ ನಂಬರ್ ಸಂಪರ್ಕಿಸಿ ಅವರು ಹೇಳುವ ಜಾಗಕ್ಕೆ ಹೋದ ಬಳಿಕ ಬೇಕಿರುವ ಪಟಾಕಿಗಳನ್ನ ಕುದ್ದು ಅವರೇ ತಂದು ಗ್ರಾಹಕರ ಕೈಗೆ ಕೊಟ್ಟು ಹೋಗುತ್ತಿರುವುದು ದಂದೆಯ ಸಂಪೂರ್ಣ ಜಾಡು ಸ್ಟಿಂಗ್ ಆಪರೇಶನ್ನಲ್ಲಿ ಬಯಲಾಗಿದೆ.
ಇನ್ನು ವಾಮ ಮಾರ್ಗದ ಮೂಲಕ ಪಟಾಕಿ ಮಾರುತ್ತಿರುವ ವರ್ತಕ ಪೊಲೀಸರಿಗೆ ಕಣ್ ತಪ್ಪಿಸಿ ಯಾರು ಊಹೆಗೂ ನಿಲುಕದ ಸ್ಥಳವನ್ನು ತನ್ನ ಪಟಾಕಿ ಗೋಧಾಮನ್ನಗಿ ಮಾಡಿಕೊಂಡಿದ್ದಾನೆ ಇನ್ನು ಆ ಗೋದಾಮು ಯಾವುದೆಂದರೆ ಅದು ಸ್ಮಶಾನದ ಜಾಗದಲ್ಲಿ ಇರುವ ಹಳೇ ಕಟ್ಟಡದಲ್ಲಿ ಅಕ್ರಮವಾಗಿ ಪಟಾಕಿ ಗೊಡಾನ್ ನಾಗಿ ಮಾಡಿಕೊಂಡಿದ್ದಾರೆ ಈ ಅಕ್ರಮ ಪಟಾಕಿ ಮಾರಾಟಗಾರರು.
ಇಷ್ಟೆಲ್ಲಾ ನಡೆಯುತ್ತಿರುವುದು ಪೋಲೀಸರ ಗಮನಕ್ಕೂ ಬಂದಿದ್ದರೂ ಸಹ ಸುಮ್ಮನೆ ಇರುವುದು ಗಮನಿಸಬೇಕಾದ ವಿಷಯ ಜೊತೆಗೆ ಈ ಪ್ರದೇಶವು ಸಹ ನಮ್ಮ ಗೃಹ ಸಚಿವರ ಮನೆಗೆ ಸಮೀಪದಲ್ಲೇ ಇರುವುದು ಗಮನಾರ್ಹ ಸಂಗತಿ.
ಇವರು ತಯಾರು ಮಾಡಿ ಮಾರುವ ಯಾವುದೆ ಪಟಾಕಿಗಳಿಗೆ ಲೇಬಲ್ ಆಗಲಿ, ಹೆಸರು, ವಿಳಾಸ, ಸರ್ಕಾರ ತಿಳಿಸಿರುವ ಯಾವುದೇ ಅಂಶಗಳು ಇಲ್ಲದೆ ಇರುವುದೇ ಮೂಲ ಕಾರಣ. ಈ ಪ್ರಕರಣವನ್ನು ಸಂಬಂಧಪಟ್ಟ ಇಲಾಖೆ ಗಂಭೀರವಾಗಿ ತೆಗೆದುಕೊಳ್ಳುತ್ತಾದೋ ಇಲ್ಲವೋ ಕಾದು ನೋಡಬೇಕು.