ತುಮಕೂರು : ತುಮಕೂರು ಬೆಂಗಳೂರಿಗೆ ಕೇವಲ ೭೦ ಕಿ.ಮೀ. ಇದ್ದು, ಬೆಂಗಳೂರಿಗೆ ಸರಿಸಮವಾಗಿ ತುಮಕೂರನ್ನು ಅಭಿವೃದ್ಧಿ ಪಡಿಸಲು ನಾನು ಕಂಕಣಬದ್ಧನಾಗಿದ್ದೇನೆ,ಬೆAಗಳೂರಿನಲ್ಲಿ ಸಿಗುವ ಎಲ್ಲ ಸವಲತ್ತು,ವಸ್ತುಗಳು ತುಮಕೂರು ನಗರದಲ್ಲಿ ನಾಗರೀಕರಿಗೆ ಸಿಗಬೇಕು, ಈ ನಿಟ್ಟಿನಲ್ಲಿ ಯೋಜನೆಯನ್ನು ಸಿದ್ಧಪಡಿಸಿ ತುಮಕೂರನ್ನು ಅಭಿವೃದ್ಧಿಪಡಿಸಲು ಶ್ರಮ ಹಾಕುತ್ತೇನೆ ಎಂದು ತುಮಕೂರು ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ರವರು ತಿಳಿಸಿದರು.
ಅವರು ಇಂದು ನಡೆದ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದಿಂದ ನಡೆದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದಿಂದ ನಡೆದ ಪ್ರತಿಭಾ ಪುರಸ್ಕಾರ,ದತ್ತಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಸಂಘದಿAದ “ಸಮಾಜಸೇವಾರತ್ನ” ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದರು.
ಪತ್ರಕರ್ತರ ಸಂಕಷ್ಟಗಳನ್ನು ನಾನು ಕಣ್ಣಾರೆ ನೋಡಿದ್ದೇನೆ, ತುಮಕೂರಿನ ವಿಜಯವಾಣಿ ಪತ್ರಿಕೆಯ ಸಂಪಾದಕರಾಗಿದ್ದ ಗುಂಡುರಾಯರು ಎರಡು ಪುಟದ ಒಂದು ಸಣ್ಣ ಪತ್ರಿಕೆಯನ್ನು ನಡೆಸಲು ಎಷ್ಟೆಲ್ಲಾ ಕಷ್ಟ ಪಡುತ್ತಿದ್ದರು ಎಂಬುದನ್ನು ನಾನು ಚಿಕ್ಕವನಿದ್ದಾಗ ನಮ್ಮ ತಂದೆಯವರ ಜೊತೆ ಎಸ್.ಎಸ್.ಪುರಂನಲ್ಲಿದ್ದ ಅವರ ಪತ್ರಿಕಾ ಕಚೇರಿಗೆ ಹೋದಾಗ ನೋಡಿದ್ದೇನೆ,ಮೊಳೆಗಳನ್ನು ಜೋಡಿಸಿ ಕಷ್ಟಪಟ್ಟು ಪ್ರಿಂಟ್ ಮಾಡಿ ಕಡಿಮೆ ಬೆಲೆಗೆ ಪತ್ರಿಕೆಯನ್ನು ವಿತರಿಸುತ್ತಿದ್ದರು. ಈ ಹಿನ್ನಲೆಯಲ್ಲಿ ಪತ್ರಕರ್ತರು ಪ್ರತಿ ದಿನ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದ್ದಾರೆ,ಸತ್ಯವನ್ನು ಸತ್ಯ ಎಂದು ಹೇಳಲು ಕಷ್ಟಪಡುತ್ತಿದ್ದಾರೆ,ಪ್ರತಿ ಪತ್ರಕರ್ತ ಎರಡು ಸವಾಲುಗಳನ್ನು ಎದುರಿಸುತ್ತಿದ್ದಾನೆ ಒಂದು ವೃತ್ತಿ ಸವಾಲು,ಇನ್ನೊಂದು ಆರ್ಥಿಕ ಸವಾಲು,ಯಾವುದೇ ಕಾರಣಕ್ಕೂ ಸತ್ಯವನ್ನು ಬಿಟ್ಟುಕೊಡಬಾರದು ಸತ್ಯವನ್ನೇ ಬರೆದು ತೀರಬೇಕು,ಯವುದೇ ಮುಲಾಜಿಗೆ ಒಳಗಾಗಬಾರದು ಎಂದು ಕಿವಿ ಮಾತುಹೇಳಿದರು, ಪತ್ರಕರ್ತರು ಆರ್ಥಿಕ ಸಂಕಷ್ಟ ಎದುರಿಸುವವರಾಗಿದ್ದು,ಜೀವನ ನಿರ್ವಹಣೆಯೇ ಕಷ್ಟವಾಗಿದೆ,ಉಳಿತಾಯ ಎಂಬುದು ಮರಿಚಿಕೆ, ಪತ್ರಕರ್ತರ ಪ್ರತಿಭಾವಂತ ೨೫ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪ್ರತಿ ವರ್ಷ ವಿದ್ಯಾರ್ಥಿ ವೇತನ ಮತ್ತು ಆರ್ಥಿಕ ನೆರವು ನೀಡಲು ೨೫ ಲಕ್ಷ ರೂ.ಗಳನ್ನು ಪತ್ರಕರ್ತರ ಸಂಘಕ್ಕೆ ದತ್ತಿನಿಧಿ ನೀಡಲಾಗುವುದು, ಇದು ಪತ್ರಕರ್ತರ ಮಕ್ಕಳಿಗೆ ಮಾತ್ರ ವಿನಿಯೋಗ ಆಗಬೇಕು ಎಂದು ಹೇಳಿದರು.
ತುಮಕೂರು ತನಕ ಮೆಟ್ರೋ ರೈಲು ತರಲು ಪ್ರಯತ್ನಿಸುತ್ತಿದ್ದೇನೆ,ಅಂದು ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ತುಮಕೂರು ಜಿಲ್ಲೆಗೆ ಪ್ರತ್ಯೇಕವಾಗಿ ವಿಶೇಷವಾಗಿ ವಿಶ್ವವಿದ್ಯಾನಿಲಯ ತಂದೆ ಇಂದು ಲಕ್ಷಾಂತರ ವಿದ್ಯಾರ್ಥಿಗಳು ವಿದ್ಯಾವಂತರಾಗುತ್ತಿರುವುದು ನಮಗೆ ಸಂತಸ ತಂದಿದೆ,ತುಮಕೂರು ಶೈಕ್ಷಣಿಕ ನಗರ ಹಲವಾರು ಇಂಜಿನಿಯರಿAಗ್ ಕಾಲೇಜು,ಮೆಡಿಕಲ್ ಕಾಲೇಜು ಇರುವುದರಿಂದ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ,ಇಂದು ನನಗೆ ಸಮಾಜಸೇವಾರತ್ನ ಪ್ರಶಸ್ತಿ ನೀಡಿದ್ದೀರಿ ರಾಜಕೀಯದಲ್ಲಿ ಸೇವೆ ಎನ್ನುವುದೇ ಪ್ರಶ್ನೆಯಾಗಿದೆ,ಆದರೂ ನಾನು ಈವರೆವಿಗೂ ನಮ್ಮ ತಂದೆ-ತಾಯಿಯ ಆಶೀರ್ವಾದದಿಂದ ಉತ್ತಮ ಸಂಸ್ಕಾರ ಪಡೆದು ಜನರ ಕೆಲಸ ಮಾಡಿದ್ದೇನೆ ಎಂಬ ತೃಪ್ತಿ ಇದೆ,ಬಸವರಾಜಹೊರಟ್ಟಿರವರು ಕಳೆದ ೪೨ ವರ್ಷದಿಂದ ಹುಬ್ಬಳ್ಳಿ ಶಿಕ್ಷಕರ ಕ್ಷೇತ್ರದಿಂದ ೮ ಬಾರಿ ವಿಧಾನಪರಿಷತ್ ಗೆ ನಿರಂತರ ಆಯ್ಕೆಯಾಗುತ್ತಾ ಬರುತ್ತಿರುವುದು ಅವರ ಸ್ವಚ್ಛ ರಾಜಕೀಯಕ್ಕೆ ನಿದರ್ಶನ ಅವರಂತವರನ್ನು ಆಹ್ವಾನಿಸಿ ಅವರಿಂದ ನನಗೆ ಸನ್ಮಾನಿಸಿ ಪ್ರಶಸ್ತಿ ನೀಡಿದ್ದು ಪ್ರಶಸ್ತಿಗೆ ಗೌರವ ಬಂದಿದೆ ಎಂದರು.
ಪರ್ತಕರ್ತರಿಗೆ ನಿವೇಶನ ನೀಡಲು ತಾವು ಬದ್ಧರಾಗಿದ್ದೇವೆ, ನನ್ನ ಅವಧಿಯಲ್ಲೇ ಆ ಕೆಲಸವನ್ನು ಮಾಡಲಾಗುವುದು ಎಂದು ತಿಳಿಸಿದರು,ಜಿಲ್ಲಾಧಿಕಾರಿಗಳು ಜಮೀನನ್ನು ಗುರುತಿಸಲು ಸೂಚಿಸಲಾಗಿದೆ,ಆದರೆ ಸ್ವಲ್ಪ ಹಣವನ್ನು ಸರ್ಕಾರಕ್ಕೆ ಪಾವತಿಸಿ ನಿವೇಶನ ಪಡೆದುಕೊಳ್ಳಿ ಎಂದು ಮನವಿ ಮಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಹಿರಿಯ ವಿಧಾನಪರಿಷತ್ ಸದಸ್ಯರು ಮತ್ತು ಮೇಲ್ಮನೆ ಸಭಾಪತಿಗಳಾದ ಬಸವರಾಜಹೊರಟ್ಟಿರವರು ನಾನು ಮೊದಲ ಸಲ ಆಯ್ಕೆ ಆಗಿ ವಿಧಾನಪರಿಷತ್ ಗೆ ಬಂದಾಗ ಹಿರಿಯ ಪತ್ರಕರ್ತರು ನನಗೆ ಇಂತಹ ವಿಚಾರಗಳನ್ನು ಮಾತನಾಡಬೇಕು,ಇಂತಹ ಜ್ವಲಂತ ಸಮಸ್ಯೆಗಳನ್ನು ಸದನದಲ್ಲಿ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆಯಬೇಕೆಂದು ಹೇಳುತ್ತಿದ್ದುದು ಪತ್ರಕರ್ತರು,ಪತ್ರಕರ್ತರ ಮಾರ್ಗದರ್ಶನದಿಂದ ನಾನು ಇಲ್ಲಿವರೆಗೂ ಬೆಳೆದಿದ್ದೇನೆ ಎಂದು ಹಿರಿಯ ಪತ್ರಕರ್ತರನ್ನು ಮತ್ತು ಹಿರಿಯ ವಿವಿಧ ಪತ್ರಿಕೆಯ ಹಿರಿಯ ಸಂಪಾದಕರನ್ನು ಸ್ಮರಿಸಿದರು.
ಜಿಲ್ಲಾ ಅಧ್ಯಕ್ಷರಾದ ಚಿ.ನಿ.ಪುರುಷೋತ್ತಮ್ ರವರ ಮನವಿಯ ಮೇರೆಗೆ ತಮ್ಮ ತಾಯಿ ಹೆಸರಿನ “ಅವ್ವ” ಟ್ರಸ್ಟ್ ನಿಂದ ಮಹಿಳಾ ಪತ್ರಕರ್ತರಿಗೆ ಪ್ರಶಸ್ತಿ ನೀಡಲು ದತ್ತಿ ನೀಡಲಾಗುವುದು ಎಂದು ತಿಳಿಸಿದರು,ಹೆಣ್ಣು ಮಕ್ಕಳು ಸಹ ಪತ್ರಿಕಾರಂಗಕ್ಕೆ ಬರಬೇಕು,ನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ಬರೆದು ಸರ್ಕಾರ,ಜನ,ಸಮಾಜವನ್ನು ಎಚ್ಚರಿಸಬೇಕೆಂದು ಕರೆ ನೀಡಿದರು.
ಸಮಾರಂಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಚಿ.ನಿ.ಪುರುಷೋತ್ತಮ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ ೨೦೨೪ರಲ್ಲಿ ಪತ್ರಕರ್ತರ ರಾಜ್ಯ ಸಮ್ಮೇಳನವನ್ನು ಆಯೋಜಿಸಲಾಗುವುದು ಎಂದು ಹೇಳಿದರು,ಜಿಲ್ಲೆಯ ಹಲವು ಜ್ವಲಂತ ಸಮಸ್ಯೆಗಳ ಬಗ್ಗೆ ಬರೆದಿದ್ದ ಪತ್ರಕರ್ತರುಗಳಿಗೆ ದತ್ತಿ ಪ್ರಶಸ್ತಿ ನೀಡಲಾಯಿತು, ಹಿರಿಯ ಪತ್ರಕರ್ತರಿಗೆ, ಛಾಯಾ ಗ್ರಾಹಕರಿಗೆ, ಪತ್ರಿಕಾ ವಿತರಕರನ್ನು ಸನ್ಮಾನಿಸಿ ಗೌರವಿಸಲಾಯಿತು, ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ವೇದಿಕೆಯಲ್ಲಿ ಡಾ||ಹುಲಿನಾಯ್ಕರ್,ಮೇಯರ್ ಪ್ರಭಾವತಿ,ಆಯುಕ್ತೆ ಬಿ.ವಿ.ಅಶ್ವಿಜ,ಎಸ್ಪಿ.ಕೆ.ವಿ.ಅಶೋಕ್,ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್,ಶಾಸಕ ಜಿ.ಬಿ.ಜ್ಯೋತಿಗಣೇಶ್,ಜಿ.ಪಂ.ಸಿಇಓ ಪ್ರಭು,ಮಧುಕರ್,ರಘುರಾಮ್, ಮುಂತಾದವರು ಉಪಸ್ಥಿತರಿದ್ದರು.