ತುಮಕೂರು : ವಿಧಾನಪರಿಷತ್ ಆಗ್ನೇಯ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಯುತ್ತಿರುವ ಲೋಕೇಶ್ ತಾಳಿಕಟ್ಟೆರವರು ಇಂದು ತುಮಕೂರು ನಗರ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಮುಂಬರುವ ಚುನಾವಣೆಯಲ್ಲಿ ತನ್ನನ್ನು ಪ್ರೋತ್ಸಾಹಿಸುವಂತೆ ಕೋರಿದರು.
ಈ ಹಿಂದೆ ತಾವು ರಾಷ್ಟೀಯ ಪಕ್ಷದಲ್ಲಿ ಗುರುತಿಸಿಕೊಂಡಿದ್ದೇ, ಆದರೆ ಕೆಲವು ಕಾರಣಾಂತರಗಳಿಂದ ನಾನು ರಾಷ್ಟ್ರೀಯ ಪಕ್ಷವನ್ನು ತೊರೆದು ಪಕ್ಷೇತರ ಅಭ್ಯರ್ಥಿಯಾಗಿ ಈ ಭಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಸಕಲ ಸಿದ್ಧತೆಗಳನ್ನು ನಡೆಸುಕೊಳ್ಳುತ್ತಿದ್ದೇನೆಂದರು, ನನ್ನ ಮೊದಲ ಧ್ಯೇಯವೆಂದರೆ ಸ್ವಯಂ ಶಿಕ್ಷಕನಾಗಿ ಕೆಲಸ ನಿರ್ವಹಿಸಿ, ನೂರಾರು ಶಿಕ್ಷಕರು ನನ್ನ ವಿದ್ಯಾಸಂಸ್ಥೆಯಲ್ಲಿ ಪ್ರಸ್ತುತ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ ಹಾಗಾಗಿ ಶಿಕ್ಷಕರ ಸಂಕಷ್ಟುಗಳು ಏನು ಎಂಬುದು ನನಗೆ ಅರಿವಿದೆ, ಆದ್ದರಿಂದ ಅವರ ಶ್ರೇಯೋಭಿವೃದ್ಧಿಗಾಗಿ ನಾನು ಅವರ ಸೇವೆಯನ್ನು ಮಾಡಲು ಇಚ್ಛಿಸಿದ್ದೇನೆಂದು ತಿಳಿಸಿದರು.
ಇನ್ನುಳಿದಂತೆ ಇದೀಗ ತಾನೆ ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಇತ್ತೀಚೆಗೆ ಪತ್ರಿಕಾಗೋಷ್ಠಿಯೊಂದರಲ್ಲಿ ಹೇಳಿಕೊಂಡಿದ್ದು, ಅದಕ್ಕೆ ಪೂರಕವಾಗಿ ಇಂದು ಕೆಲವು ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಕರ ಸಮಸ್ಯೆಗಳನ್ನು ಆಲಿಸಿದ್ದೇನೆ ಅಲ್ಲದೇ, ಅವರ ಸಮಸ್ಯೆಗಳಿಗೆ ನಾಡಿ ಮಿಡಿತವಾಗಿ ಕೆಲಸ ಮಾಡುವ ಭರವಸೆಯನ್ನು ಅವರಿಗೆ ಒದಗಿಸಿದ್ದೇನೆಂದು ತಿಳಿಸಿದರು.
ನಾನು ಭೇಟಿ ನೀಡಿದ ಎಲ್ಲಾ ಶಾಲೆಗಳಲ್ಲಿಯೂ ಉತ್ತಮ ಪ್ರತಿಕ್ರಿಯೆ ಬರುತ್ತಿದೆ, ನಾನು ಇನ್ನೂ ಹೆಚ್ಚಿನದಾಗಿ ಪ್ರಚಾರ ಕಾರ್ಯವನ್ನು ಮುಂಬರುವ ದಿನಗಳಲ್ಲಿ ಮಾಡುತ್ತೇನೆಂದು ತಿಳಿಸಿದರು ಜೊತೆಗೆ ನನ್ನೊಟ್ಟಿಗೆ ನೂರಾರು ಜನ ಶಿಕ್ಷಕರು ಮತ್ತು ವಿದ್ಯಾ ಸಂಸ್ಥೆಗಳ ಮುಖ್ಯಸ್ಥರು ಬೆನ್ನೆಲುಬಾಗಿ ನಿಂತಿರುವುದೇ ನನ್ನ ಸೌಭಾಗ್ಯ ಮತ್ತು ಶಕ್ತಿ ಎಂದು ಹೇಳಿದರು.
ತುಮಕೂರಿನ ಸೈಂಟ್ ಮೋಸಸ್, ಚೈತನ್ಯ ಟೆಕ್ನೋ, ಆಚಾರ್ಯ ಐಟಿಐ, ಸೀತಾ ಪ್ರೌಢಶಾಲೆ, ಸಿದ್ದಾರ್ಥ ಪ್ರೌಢಶಾಲೆ, ವಾಲ್ಮೀಕಿ ಪ್ರೌಢಶಾಲೆ ಸರ್ಕಾರಿ ಪ್ರೌಢಶಾಲೆ ಬೈಲಾಂಜನೇಯನ ಗುಡಿಪಾಳ್ಯ ಹಾಗೂ ಮುಂತಾದ ಶಾಲೆಗಳಿಗೆ ಭೇಟಿ ನೀಡಿದರು.