ಓದುವ ಮಕ್ಕಳ ಕೈಗಳಿಗೆ ಉದ್ಯೋಗ ಬೇಡ ; ಕಾರ್ಮಿಕ ಅಧಿಕಾರಿ ತೇಜಾವತಿ

 

ತುಮಕೂರು : ಬಾಲಾ ಕಾರ್ಮಿಕ, ಟಾಸ್ಕ್ ಫೋರ್ಸ್, ಕಿಶೋರ್ ಕಾರ್ಮಿಕ ಟಾಸ್ಕ್ ಫೋರ್ಸ್ ಹಾಗೂ ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಸಹಯೋಗದೊಂದಿಗೆ ಸೆಕ್ಷನ್ 17ರ ವಿವಿಧ ಇಲಾಖೆಗಳ ಜೊತೆಗೂಡಿ ನಗರದ ವಿವಿಧ ಬಡಾವಣೆಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

 

 

ನಗರದ ವಿವಿಧ ಬಡಾವಣೆಯಲ್ಲಿರುವ ಗ್ಯಾರೇಜ್‌ಗಳು, ಅಂಗಡಿ ಮುಂಗಟ್ಟುಗಳು, ಹೋಟೆಲ್‌ಗಳು, ಬೇಕರಿಗಳು, ಸಣ್ಣ ಮತ್ತು ಗುಡಿ ಕೈಗಾರಿಕೆಗಳು ಸೇರಿದಂತೆ ಬೃಹತ್ ಕೈಗಾರಿಕೆಗಳಿಗೆ ಸ್ವಯಂ ಭೇಟಿ ನೀಡಿದ ತಂಡವು ಜನರಲ್ಲಿ ಅರಿವು ಮೂಡಿಸುವ ಜಾಥಾ ಹಾಗೂ ಬಾಲಾ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳಬಾರದು ಎಂಬ ಘೋಷಾವಾಕ್ಯಗಳನ್ನು ಒಳಗೊಂಡ ಪ್ಲೇಕಾರ್ಡ್ ಪ್ರದರ್ಶನದೊಂದಿಗೆ ರಸ್ತೆಗಿಳಿದು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡರು.

 

 

 

ಈ ಕುರಿತು ಮಾತನಾಡಿದ ತುಮಕೂರು ಉಪ ವಿಭಾಗದ ಕಾರ್ಮಿಕ ಅಧಿಕಾರಿಗಳಾದ ತೇಜಾವತಿರವರು ಸಮಾಜದಲ್ಲಿ ಇಂದಿಗೂ ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಪದ್ಧತಿಯು ಇನ್ನೂ ಜೀವಂತವಾಗಿದ್ದು ಅದನ್ನು ತೆಡೆಗಟ್ಟುವ ನಿಟ್ಟಿಲ್ಲಿ ಈ ಹಿಂದೆ 14 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ಸೇರಿಸಿಕೊಳ್ಳಬಾರದು ಎಂಬ ಸುತ್ತೋಲೆ ಇತ್ತು, ಅದನ್ನು ಪರಿಷ್ಕರಿಸಿರುವ ಸರ್ಕಾರ 18 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ಸೇರಿಸಿಕೊಳ್ಳಬಾರದು ಎಂದು ಆದೇಶ ಹೊರಡಿಸಿರುವ ಹಿನ್ನಲೆಯಲ್ಲಿ ಆ ಕುರಿತು ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆಂದು ತಿಳಿಸಿದರು.

 

 

 

 

ಜೊತೆಗೆ ಓದುವ ಕೈಗಳಿಗೆ ದುಡಿಮೆ ಬೇಡ, ಓದುವ ಕೈಗಳಿಗೆ ಪುಸ್ತಕಗಳನ್ನು ನೀಡಿ ವಿದ್ಯಾವಂತರನ್ನಾಗಿ ಮಾಡಿ ಎಂಬುದರ ಕುರಿತಾಗಿ ಜನರಲ್ಲಿ ಪ್ರಮುಖವಾಗಿ ಗ್ಯಾರೇಜ್, ಬೇಕರಿ, ಹೋಟೆಲ್, ಸಣ್ಣ-ಪುಟ್ಟ ಗುಡಿ ಕೈಗಾರಿಕೆಗಳ ಮಾಲೀಕರಿಗೆ ಅರಿವು ಮೂಡಿಸುವ ಕಾರ್ಯ ಮಾಡಲಾಗುತ್ತಿದ್ದು, ಪ್ರಮುಖವಾಗಿ ಈ ಕ್ಷೇತ್ರಗಳಲ್ಲಿಯೇ ಬಾಲ ಕಾರ್ಮಿಕರು ಹೆಚ್ಚಾಗಿ ಕಾಣಸಿಗುತ್ತಿವೆ ಎಂಬ ಸುಳಿವು ಇದ್ದ ಪರಿಣಾಮ ಯಾವುದೇ ಮುನ್ಸೂಚನೆ ನೀಡದೇ ನಾವು ಹಲವಾರು ಸ್ಥಳಗಳಲ್ಲಿ ದಿಢೀರ್ ಬೇಟಿ ನೀಡಿ ಪರಿವೀಕ್ಷಣೆಯೊಂದಿಗೆ ಅರಿವು ಮೂಡಿಸುವ ಕಾರ್ಯ ನಡೆಯುತ್ತಿದೆ, ಈ ಸಂದರ್ಭದಲ್ಲಿ ಹಲವಾರು ಮಕ್ಕಳನ್ನು ರಕ್ಷಿಸಿ ಅವರುಗಳನ್ನು ಶಾಲೆಗೆ ಸೇರಿಸುವ ಕಾರ್ಯ ನಡೆಸಲಾಗುತ್ತಿದೆ, ಈ ಕುರಿತು ನಾವು ಮಾಲೀಕರುಗಳನ್ನು ಪ್ರಶ್ನಿಸಿದಾಗ ಅವರುಗಳು ನೀಡುತ್ತಿರುವ ಉತ್ತರ ತಮಗೆ ಮಾಹಿತಿ ಕೊರತೆ ಇರುವುದರಿಂದ ೧೪ ರಿಂದ ೧೮ ವರ್ಷದೊಳಗಿನ ಮಕ್ಕಳನ್ನು ಸೇರಿಸಿಕೊಳ್ಳುತ್ತಿರುವ ಮಾಹಿತಿ ಹೊರ ಬಂದ ಪ್ರಯುಕ್ತ ನಾವು ಈ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯವನ್ನು ಸೆಕ್ಷನ್ ೧೭ಅಡಿ ೧೩ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ ಕಾರ್ಯಪಡೆ ತಂಡವು ರಚನೆಯಾಗಿದೆ ಎಂದು ತೇಜಾವತಿ ರವರು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!