ತುಮಕೂರು : ತುಮಕೂರಿನ ಪ್ರತಿಷ್ಠಿತ ವಿದ್ಯೋದಯ ಕಾನೂನು ಕಾಲೇಜಿನಲ್ಲಿ ಎಲ್ಲವೂ ಅತಂತ್ರ ಮತ್ತು ಯಾವ ಕಾರ್ಯವೈಖರಿ ಸರಿ ಎಲ್ಲವೆಂದು ಹಲವಾರು ವಿದ್ಯಾರ್ಥಿಗಳ ಬಾಯಲ್ಲಿ ಇಷ್ಟು ದಿನ ಹರಿದಾಡುತ್ತಿತ್ತು, ಆದರೆ ನಮ್ಮಲ್ಲಿ ಎಲ್ಲವೂ ಸರಿ ಎಂದು ಹೇಳಿಕೊಂಡು ವಿದ್ಯೋದಯ ಕಾನೂನು ಕಾಲೇಜಿನ ಆಡಳಿತ ಮಂಡಳಿ ಹೇಳಿಕೊಂಡು ಬರುತ್ತಿದ್ದಾರೂ, ಅಲ್ಲಿ ಏನೂ ಸರಿ ಎಲ್ಲವೆಂಬ ಸತ್ಯ ಇದೀಗ ಹೊರ ಬಿದ್ದಿದೆ.
ತುಮಕೂರು ವಿಶ್ವವಿದ್ಯಾನಿಲಯದಿಂದ ಯಾವುದೇ ರೀತಿಯಾಗಿ ಪರೀಕ್ಷೆ ಫಲಿತಾಂಶ ಬಾರದೇ ಇದ್ದರೂ ಇವರು ಮುಂದಿನ ವರ್ಷಕ್ಕೆ ಪ್ರವೇಶಾತಿ ಕಲ್ಪಿಸುತ್ತಿದ್ದಾರೆ, ಅಲ್ಲದೇ ಈ ಕಾಲೇಜಿನಲ್ಲಿ ಸ್ಥಳೀಯರಿಗೆ ಪ್ರವೇಶ ಕಲ್ಪಿಸುವುದರ ಬದಲಾಗಿ ಹೆಚ್ಚಿನ ಹಣವನ್ನು ಇತರೇ ರಾಜ್ಯದ ಮಕ್ಕಳಿಂದ ಪಡೆಯಬಹುದು ಎಂಬ ದುರುದ್ದೇಶದಿಂದ ದುಪ್ಪಟ್ಟು ಮೊತ್ತವನ್ನು ಪಡೆದು ಪ್ರವೇಶಾತಿ ಕಲ್ಪಿಸಲಾಗುತ್ತಿದೆಂಬ ಗಂಭೀರ ಆರೋಪವನ್ನು ಕಾಲೇಜಿನ ವಿದ್ಯಾರ್ಥಿಗಳು ಮತ್ತು ಪೋಷಕರು ಆರೋಪಿಸುತ್ತಿದ್ದಾರೆ.
ಯಾಕೆಂದರೆ ವಿದ್ಯೋದಯ ಕಾನೂನು ಕಾಲೇಜಿನಲ್ಲಿ ವಿಶ್ವವಿದ್ಯಾನಿಲಯದಿಂದ ಪ್ರವೇಶಕ್ಕೆ ಆದೇಶ ಹೊರಡಿಸುವುದಕ್ಕಿಂತ ಮುಂಚೆಯೇ ಈ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಅಕ್ರಮವಾಗಿ ಪ್ರವೇಶ ಶುಲ್ಕ ಪಡೆದು ಪ್ರವೇಶ ಕಲ್ಪಿಸಿದ್ದು, ಇದೀಗ ಬಹಿರಂಗವಾಗಿದೆ, ಹಾಗೆಂದು ಅಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳ ಪೋಷಕರು ತುಮಕೂರು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದು ಇದೀಗ ಬಹಿರಂಗಗೊಂಡಿದೆ.
ಇದಲ್ಲದೇ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದಿಂದ ತಂಡವೊಂದು ಆಗಮಿಸಿ, ಇಲ್ಲಿನ ಎಲ್ಲಾ ನ್ಯೂನ್ಯತೆಗಳನ್ನು ಪರಿಶೀಲನೆ ಮಾಡಿ ತನಗೆ 10 ದಿನಗಳೊಳಗಾಗಿ ವರದಿ ನೀಡುವಂತೆ ವಿಶೇಷ 03 ಜನ ತಂಡವೊಂದನ್ನು ರಚಿಸಿದ್ದು, ಅವರು ನಾಳೆ ಅಥವಾ ನಾಡಿದ್ದು ವಿದ್ಯೋದಯ ಕಾನೂನು ಕಾಲೇಜು, ತುಮಕೂರು ಇಲ್ಲಿಗೆ ಆಗಮಿಸಿ ಇಲ್ಲಿನ ಚಿತ್ರಣವನ್ನು ರಾಜ್ಯ ಕಾನೂನು ವಿಶ್ವವಿದ್ಯಾನಿಲಯಕ್ಕೆ ತಲುಪಿಸಲಿದೆ ಎಂದು ಹೇಳಲಾಗಿದೆಯಾದರೂ, ಈ ತಂಡವು ಈಗಾಗಲೇ ಇಲ್ಲಿನ ಹಲವಾರು ನ್ಯೂನತೆಗಳನ್ನು ತಾವು ಬರುವುದಕ್ಕೂ ಮೊದಲೇ ಸಂಗ್ರಹಿಸಿದ್ದು, ದಾಖಲಾತಿಗಾಗಿ ಇಲ್ಲಿ ಸ್ಥಳ ಪರಿವೀಕ್ಷಣೆ ಮಾಡಿ, ವರದಿ ಸಲ್ಲಿಸುವುದು ಮಾತ್ರ ಬಾಕಿ ಇದೆ ಎಂದು ಹೇಳಲಾಗಿದೆ.
ಏನೇ ಆದರೂ ಈ ಕಾಲೇಜಿನ ಅವ್ಯವಸ್ಥೆಯು ಕಾಲೇಜಿಗೆ ಇರುವ ಹಲವಾರು ದಶಕಗಳ ಹೆಸರನ್ನು ಕೆಡಿಸುತ್ತಿದೆ ಎಂದು ಹಳೆಯ ವಿದ್ಯಾರ್ಥಿಗಳು, ನುರಿತ ವಕೀಲರು ಹೇಳುತ್ತಿದ್ದಾರೆ. ಒಳ್ಳೆಯ ಹೆಸರಿದ್ದ ಕಾಲೇಜಿಗೆ ಕೆಲವರಿಂದ ಈ ರೀತಿ ಕಪ್ಪುಚುಕ್ಕೆ ಆಗುತ್ತಿದೆಂದು ಹಿರಿಯ ವಕೀಲರೊಬ್ಬರು ಪತ್ರಿಕೆಯೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.