ತುಮಕೂರು ಮಳೆ ಇಲ್ಲದೆ ರಾಜ್ಯವೇ ಬರಪೀಡಿತವಾಗಿದೆ,ಹಾಕಿದ ಬೆಳೆ ಒಣಗಿ ಅನ್ನದಾತ ಕಂಗಾಲಾಗುತ್ತಿದ್ದಾರೆ, ಈ ಮಧ್ಯೆ ತುಮಕೂರು ಗ್ರಾಮಾಂತರ ರೈತರೊಬ್ಬರು ದೊಡ್ಡಬಳ್ಳಾಪುರ ತಾಲ್ಲೂಕು ಹುಲುಕುಂಟೆ ಬಳಿ ಬರದ ನಡುವೆಯೂ 75 ಎಕರೆ ಪ್ರದೇಶದಲ್ಲಿ ಬರಪೂರ ರಾಗಿ ಬೆಳೆದು ಮಾದರಿಯಾಗಿದ್ದಾರೆ.
ತುಮಕೂರು ಗ್ರಾಮಾಂತರದ ಭೈರಸಂದ್ರ ಗ್ರಾಮದ ಜಿ.ಪಾಲನೇತ್ರಯ್ಯ ಬರದ ನಡುವೆಯೂ ಉತ್ತಮ ರಾಗಿ ಬೆಳೆದಿರುವ ರೈತರಾಗಿದ್ದಾರೆ.
ಜಿ.ಪಾಲನೇತ್ರಯ್ಯ ಅವರು ಗೂಳೂರು ಜಿಲ್ಲಾಪಂಚಾಯ್ತಿ ಜೆಡಿಎಸ್ ಉಸ್ತುವಾರಿ ವಹಿಸಿಕೊಂಡಿದ್ದಾರೆ ರಾಜಕಾರಣದ ಜೊತೆಗೆ ಕೃಷಿ ಹಾಗೂ ಹೈನುಗಾರಿಕೆಗೆ ಪ್ರಧಾನ ಆದ್ಯತೆ ನೀಡಿದ್ದಾರೆ,ತಾನು ಎಷ್ಟೇ ಎತ್ತರಕ್ಕೆ ಬೆಳೆದರು ನಡೆದು ಬಂದಿರುವ ಹಾದಿ ಮರೆಯಬಾರದೆಂಬ ಗುಣ ಇವರದು,ಹೈನುಗಾರಿಕೆಯಿಂದಲೇ ಹಂತ ಹಂತವಾಗಿ ಮೇಲೇರಿರುವ ಇವರು ಇಂದಿಗೂ ಹೈನುಗಾರಿಕೆ ಮರೆತಿಲ್ಲ, ಇದೀಗ ಜಿ.ಪಾಲನೇತ್ರಯ್ಯ ಅವರು ತಮ್ಮಹುಟ್ಟೂರು ದೊಡ್ಡಬಳ್ಳಾಪುರ ತಾಲ್ಲೂಕು ಹುಲುಕುಂಟೆಯಲ್ಲಿ 75 ಎಕರೆ ಪ್ರದೇಶದಲ್ಲಿ ಮಳೆಯಾಶ್ರಯದಲ್ಲೇ ಎಂ ಆರ್ ರಾಗಿ ಬೆಳೆದಿದ್ದು ಭರಪೂರ ಫಸಲಿನ ನಿರೀಕ್ಷೆಯಲ್ಲಿದ್ದಾರೆ, ಇನ್ನು ಎರಡು ಹದ ಮಳೆ ಸುರಿದರೆ 500 ಚೀಲ ರಾಗಿ ಕೈಸೇರುತ್ತದೆ,ಖುತುಮಾನಕ್ಕನುಗುಣವಾಗಿ ಬೇಸಾಯ ಮಾಡಿದರೆ ಯಾವ ರೈತರಿಗೂ ನಷ್ಟವಾಗುವುದಿಲ್ಲ,ಭೂ ತಾಯಿ ನಂಬಿ ಶ್ರದ್ದೆಯಿಂದ ದುಡಿಯಬೇಕು ಆಗ ಫಲ ಸಿಗುತ್ತದೆ ಎಂಬುದು ರೈತ ಜಿ.ಪಾಲನೇತ್ರಯ್ಯ ಅವರ ಅಭಿಪ್ರಾಯ..