ಪಿಂಜಾರ್ / ನದಾಫ್ ನಿಗಮ ಮಂಡಳಿಯನ್ನು ಅನುಷ್ಠಾನಗೊಳಿಸುವಂತೆ ಡಿ.ಸಿ.ಎಂ. ಗೆ ಮನವಿ ಸಲ್ಲಿಸಿದ ಬಷೀರ್ ಅಹಮದ್

ತುಮಕೂರು : ಇತ್ತೀಚೆಗೆ ತುಮಕೂರಿನ ಹಿರಿಯ ಕಾಂಗ್ರೆಸ್ ಮುಖಂಡರು ಮತ್ತು ಮಾಜಿ ಶಾಸಕರಾದ ಎಸ್.ಷಫೀ ಅಹಮ್ಮದ್‌ರವರು ಕಳೆದ ಚುನಾವಣೆಯ ಸಮಯದಲ್ಲಿ ಜೆಡಿಎಸ್ ಪಕ್ಷ ಸೇರಿದ್ದರು, ಆದರೆ ಮತ್ತೊಮ್ಮೆ ತಮ್ಮ ಅಪಾರ ಬೆಂಬಲಿಗರೊಂದಿಗೆ ಬೆಂಗಳೂರಿನ ಇಂದಿರಾ ಭವನದಲ್ಲಿ ಉಪ ಮುಖ್ಯಮಂತ್ರಿಗಳು ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್‌ರವರ ಸಮ್ಮುಖದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಸೇರ್ಪಡೆಯಾದರು.

 

 

ಈ ಸಂದರ್ಭದಲ್ಲಿ ತುಮಕೂರು ಜಿಲ್ಲಾ ಪಿಂಜಾರ್ / ನದಾಫ್ ಸಂಘದ ಜಿಲ್ಲಾಧ್ಯಕ್ಷರಾದ ಬಷೀರ್ ಅಹಮದ್‌ರವರು ತಮ್ಮ ಸಮುದಾಯದ ಮುಖಂಡರು ಹಾಗೂ ಸದಸ್ಯರೊಂದಿಗೆ ಡಿ.ಕೆ.ಶಿವಕುಮಾರ್‌ರವರನ್ನು ಭೇಟಿಯಾಗಿ ಈಗಾಗಲೇ ರಚನೆಯಾಗಿರುವ ಪಿಂಜಾರ ಅಭಿವೃದ್ಧಿ ನಿಗಮ ಮಂಡಳಿಯನ್ನು ಅನುಷ್ಠಾನಗೊಳಿಸಲು (ಚಾಲನೆ / ಕಾರ್ಯರೂಪಕ್ಕೆ) ತರಲು ಮನವಿಯನ್ನು ಮಾಡಿರುತ್ತಾರೆ.

 

 

 

ತಮ್ಮ ಮನವಿ ಪತ್ರದಲ್ಲಿ ರಾಜ್ಯದಲ್ಲಿ ಸರಿ ಸುಮಾರು 25 ಲಕ್ಷ ಜನ ಪಿಂಜಾರ್ / ನದಾಫ್ ಸಮುದಾಯದವರಿದ್ದು, ಇವರುಗಳು ಸಮಾಜದಲ್ಲಿ ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ಔದ್ಯೋಗಿಕವಾಗಿ ಹಿಂದುಳಿದವರಾಗಿರುತ್ತಾರೆ, ಇವರುಗಳ ಸರ್ವತೋಮುಖ ಅಭಿವೃದ್ಧಿಗಾಗಿ ಪಿಂಜಾರ್ / ನದಾಫ್ ನಿಗಮವನ್ನು ಬಿಜೆಪಿ ಸರ್ಕಾರ ರಚನೆ ಮಾಡಿತ್ತಾದರೂ, ಅದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದ ನಮ್ಮ ಸಮುದಾಯಕ್ಕೆ ಅನ್ಯಾಯವಾಗಿದೆಂದು ಮನವಿ ಮಾಡಿದರಲ್ಲದೇ ಅಭಿವೃದ್ಧಿ ನಿಗಮಕ್ಕೆ ಜೀವಕೊಟ್ಟು ಅನುದಾನವನ್ನು ನೀಡಿದಲ್ಲಿ ಲಕ್ಷಾಂತರ ಜನರಿಗೆ ಉದ್ಯೋಗ, ಆರ್ಥಿಕ ಸೌಲಭ್ಯಗಳನ್ನು ನೀಡುವುದರ ಮೂಲಕ ಅವರುಗಳನ್ನು ಸಮಾಜಮುಖಿಯಾಗಿ ನೋಡಬಹುದೆಂದು ತಿಳಿಸಿದ್ದಾರೆ.

 

 

 

ಇದರೊಂದಿಗೆ ಈಗಾಗಲೇ ನಮ್ಮ ಸಮುದಾಯವನ್ನು ಪ್ರವರ್ಗ-1ರ ಜಾತಿ ಪಟ್ಟಿಯಲ್ಲಿ ಸೇರಿಸಲಾಗಿದ್ದು, ಎಲ್ಲಿಯೂ ಸಹ ನಮ್ಮ ಸಮುದಾಯದವರಿಗೆ ಸರಿಯಾಗಿ ಪ್ರವರ್ಗ-1ರ ಜಾತಿ ಪ್ರಮಾಣ ಪತ್ರವನ್ನು ನೀಡಲಾಗುತ್ತಿಲ್ಲ ಆದರೆ ನಮ್ಮ ತುಮಕೂರು ಜಿಲ್ಲೆಯಲ್ಲಿ ಈಗಾಗಲೇ ನಮ್ಮ ಸಂಘದ ಜಿಲ್ಲಾಧಿಕಾರಿಗಳಿಗೆ ಪತ್ರ ವ್ಯವಹಾರ ಮಾಡಿದ ನಂತರ ಪ್ರವರ್ಗ-1ರ ಜಾತಿ ಪ್ರಮಾಣ ಪತ್ರವನ್ನು ಜಿಲ್ಲೆಯಲ್ಲಿ ನೀಡುತ್ತಿದ್ದಾರೆ, ಇದೇ ಮಾದರಿಯಂತೆ ರಾಜ್ಯಾದ್ಯಂತ ಅನುಷ್ಠಾನಗೊಳಿಸಲು ಸಹ ಸಂಬಂಧಪಟ್ಟ ಇಲಾಖೆಗೆ ಶಿಫಾರಸ್ಸು / ಆದೇಶ ಮಾಡುವಂತೆಯೂ ಸಹ ಮನವಿ ಪತ್ರದಲ್ಲಿ ತಿಳಿಸಿದರು.

 

 

 

ಈ ಸಂದರ್ಭದಲ್ಲಿ ತುಮಕೂರು ಜಿಲ್ಲಾ ಪಿಂಜಾರ್ / ನದಾಫ್ ಸಂಘದ ಜಿಲ್ಲಾಧ್ಯಕ್ಷರಾದ ಬಷೀರ್ ಅಹಮದ್, ಸಾಹಿಲ್ ಪಾಷ, ಅಬ್ದುಲ್ ಲತೀಫ್, ಮಹಬೂಬ್ ಪಾಷ, ಅಸೀಫ್, ಜಾವೀದ್ ಹಾಗೂ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!