ತುಮಕೂರು : ಗ್ರಾಮದಲ್ಲಿ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಅದರಿಂದ ಬೇಸತ್ತ ಗ್ರಾಮಸ್ಥರು ಅಕ್ರಮ ಮಧ್ಯ ಮಾರಾಟವನ್ನು ತಡೆಗಟ್ಟಲು ಸಂಬಂಧಿಸಿದ ಅಬಕಾರಿ ಇಲಾಖೆಗೆ ದಲಿತರು ದೂರು ನೀಡಿದ ಹಿನ್ನೆಲೆಯಲ್ಲಿ ಸವರ್ಣಿಯರು ದಲಿತರನ್ನು ಬಹಿಷ್ಕಾರ ಹಾಕಿರುವ ಅಮಾನವೀಯ ಘಟನೆ ವರದಿಯಾಗಿದೆ.
ಈ ಘಟನೆ ಸಂಭವಿಸಿರುವುದು ತುಮಕೂರು ಜಿಲ್ಲೆ ಶಿರಾ ತಾಲೂಕಿನ ಹುಲಿಕುಂಟೆ ಹೋಬಳಿಯ ನಾರಗೊಂಡನಹಳ್ಳಿಯಲ್ಲಿ.
ಕಳೆದ ಕೆಲವು ವರ್ಷಗಳಿಂದ ಈ ನಾರಗೊಂಡನಹಳ್ಳಿ ಗ್ರಾಮದಲ್ಲಿನ ಕೆಲ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಸಂಗ್ರಹಿಸಿ ಮಾರಾಟ ಮಾಡಲಾಗುತ್ತಿದ್ದು ಇದರಿಂದ ಗ್ರಾಮದ ಯುವಕರು ದಾರಿ ತುಪ್ಪುತ್ತಿದ್ದರಲ್ಲದೇ ಕೆಲವರು ರಸ್ತೆಯಲ್ಲಿಯೇ ಕುಡಿದು ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿರುವುದನ್ನು ನೋಡಿ ನೋಡಿ ಬೇಸತ್ತ ಜನರು ಅದರಲ್ಲಿಯೂ ಬಡ ಕುಟುಂಬಗಳು ಕಣ್ಣೀರು ಹಾಕುವಂಥ ಸ್ಥಿತಿ ನಿರ್ಮಾಣವಾಗಿತ್ತು ಎನ್ನಲಾಗಿದೆ. ಇದರಿಂದ ಬೇಸತ್ತ ಕೆಲವರು ಪ್ರಮುಖವಾಗಿ ದಲಿತ ಹೆಣ್ಣು ಮಕ್ಕಳು ಇಲ್ಲಿ ನಡೆಯುತ್ತಿರುವ ಅಕ್ರಮ ಮಧ್ಯ ಮಾರಾಟಕ್ಕೆ ಚಟುವಟಿಕೆಗೆ ಬ್ರೇಕ್ ಹಾಕಲು ಕಳೆದ ಕೆಲ ದಿನಗಳ ಹಿಂದೆ ಅಬಕಾರಿ ಇಲಾಖೆಗೆ ದೂರು ನೀಡಿದ್ದರು.
ಇದರಿಂದ ಗ್ರಾಮದಲ್ಲಿ ಅಕ್ರಮ ಮಧ್ಯ ಮಾರಾಟ ಮಾರುತ್ತಿದ್ದ ಕೆಲ ಮಂದಿಯ ಕೆಂಗಣ್ಣಿಗೆ ಗುರಿಯಾದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ವಾಸವಾಗಿರುವ ದಲಿತ ಕುಟುಂಬಗಳಿಗೆ ಇಲ್ಲಿನ ಕೆಲವು ಅಂಗಡಿಗಳಲ್ಲಿ (ಮದ್ಯ ಮಾರಾಟ ಮಾಡುತ್ತಿದ್ದ ಅಂಗಡಿಗಳು ಒಳಗೊಂಡಂತೆ) ದಿನ ನಿತ್ಯ ಬಳಕೆಯ ವಸ್ತುಗಳನ್ನ ನೀಡದೆ ನಿರಾಕರಿಸಿ ತಮ್ಮ ಹೇಯ ಕೃತ್ಯ ಪ್ರದರ್ಶಿಸಿದ್ದಾರೆ. ಇದರಿಂದ ಬೇಸತ್ತ ದಲಿತ ಕುಟುಂಬಗಳು ಇಂದು ತಮ್ಮ ಆಕ್ರೋಶವನ್ನು ಗ್ರಾಮದಲ್ಲಿ ಧರಣಿ ಮಾಡುವುದರ ಮೂಲಕ ಹೊರಹಾಕಿದ್ದಾರೆ.
ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರಾಮದ ದಲಿತ ಮಹಿಳೆ ಕರಿಯಮ್ಮ ಮಾತನಾಡಿ ನಮ್ಮ ಗ್ರಾಮದಲ್ಲಿ ಹಲವು ವರ್ಷಗಳಿಂದ ಅಕ್ರಮ ಮಧ್ಯ ಮಾರಾಟ ಮಾಡಲಾಗುತ್ತಿದ್ದು ಇದರಿಂದ ದೂರು ನೀಡಿದ ಹಿನ್ನೆಲೆಯಲ್ಲಿಯೇ ಇಂದು ನಮ್ಮ ಗ್ರಾಮದಲ್ಲಿನ ಹಲವು ಅಂಗಡಿಗಳಲ್ಲಿ ದಲಿತರಿಗೆ ಯಾವುದೇ ರೀತಿಯಾದ ದಿನ ನಿತ್ಯ ಬಳಕೆಯ ವಸ್ತುಗಳನ್ನ ನೀಡದೆ ನಮ್ಮನ್ನು ಅಮಾನುಷವಾಗಿ ನೋಡಿಕೊಂಡಿದ್ದಾರೆಂದು ಹೇಳಿದರಲ್ಲದೇ, ಹೀಗೆ ಒಳ್ಳೆಯದನ್ನು ಮಾಡಲು ಹೋಗಿದ್ದಕ್ಕೆ ನಮಗೆ ಈ ರೀತಿಯಾದ ಶಿಕ್ಷೆ ಕೊಡುತ್ತಿದ್ದಾರೆಂದು ತಮ್ಮ ನೋವನ್ನು ಹೊರಹಾಕಿದ್ದಾರೆ.
ಯಾವುದೇ ಏನೇ ಇರಲಿ ನಮ್ಮ ಸಮಾಜದಲ್ಲಿ ಬಲಾಡ್ಯರಿಂದ ಬಲಹೀನರಿಗೆ ಈ ರೀತಿಯಾದ ದಬ್ಬಾಳಿಕೆ ನಡೆಯುತ್ತಲೇ ಇದೆ, ಇದನ್ನು ತಡಯುವಂತಹ ಬಹು ಬಲಾಡ್ಯರು ಏನು ಮಾಡುತ್ತಾರೋ ಕಾದು ನೋಡಬೇಕಿದೆ.
ಇಷ್ಟೇಲ್ಲಾ ಅವ್ಯವಸ್ಥೆ / ಅವಮಾನ ನಡೆಯುತ್ತಿದ್ದರೂ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಏನು ಮಾಡುತ್ತಿದ್ದಾರೋ ನಮಗೆ ಅರಿಯದು