ತುಮಕೂರಿನಲ್ಲಿ ಸಂಗ್ರಹವಾಗಿತ್ತು ಟನ್‌ ಗಟ್ಟಲೇ ಗೋ ಮಾಂಸ !

ತುಮಕೂರು : ತುಮಕೂರು ನಗರದಲ್ಲಿ ಬೃಹತ್ ಗೋಮಾಂಸದ ಅಡ್ಡೆ ಮೇಲೆ ಪೊಲೀಸರು ದಿಡೀರ್ ದಾಳಿ ಮಾಡಿ ಟನ್ ಗಟ್ಟಲೆ ಗೋಮಾಂಸವನ್ನು ವಶಪಡಿಸಿಕೊಂಡಿರುವ ಘಟನೆ ಇಂದು ವರದಿಯಾಗಿದೆ.

 

 

 

 

ತುಮಕೂರು ನಗರದ ಮರಳೂರು ದಿನ್ನೆಯ 12ನೇ ಕ್ರಾಸ್ ನ ಮನೆಯೊಂದರಲ್ಲಿ ಅಕ್ರಮವಾಗಿ ಕಸಾಯಿ ಖಾನೆ ಮಾಡಿಕೊಂಡು ಗೋಮಾಂಸ ಮಾರಾಟ ಮಾಡುತ್ತಿದ್ದರು ಎಂಬ ಖಚಿತ ಮಾಹಿತಿ ಮೇಲೆ ತೆರಳಿದ್ದ ಪೊಲೀಸರಿಗೆ ಅಲ್ಲಿದ್ದ ಬೃಹತ್‌ ಬೃಹತ್ ಗೋಮಾಂಸವನ್ನು ಕಂಡು ಒಂದು ಕ್ಷಣ ಬೆರಗಾಗಿದ್ದಾರೆ.

 

 

 

 

ಇನ್ನು ಅಮಿತ್ ಎಂಬುವವರು ನೀಡಿದ ದೂರಿನ ಮೇರೆಗೆ ದಾಳಿ ನಡೆಸಿರುವ ಪೊಲೀಸರು ಸರ್ದಾರ್ ಎಂಬುವವರ ಕಟ್ಟಡದಲ್ಲಿ ಅಕ್ರಮವಾಗಿ ಗೋಮಾಂಸ ಮಾರುತಿದ್ದ ವ್ಯಕ್ತಿ ಮತ್ತು ಕಸಾಯಿ ಖಾನೆಯಲ್ಲಿ ಕೆಲಸಗಾರರು ಪೊಲೀಸರು ಆಗಮಿಸುತ್ತಿರುವ ಸುದ್ಧಿ ತಿಳಿದು ಪರಾರಿಯಾಗಿದ್ದಾರೆ  ಎನ್ನಲಾಗಿದೆ.

 

 

 

 

ಕಳೆದ ಮೂರು ತಿಂಗಳ ಹಿಂದೆ ಬಾಡಿಗೆ ಪಡೆದಿದ್ದ ವ್ಯಕ್ತಿಯಿಂದ ಆಕ್ರಮವಾಗಿ ಗೋಮಾಂಸ ಮಾರಾಟ ಮಾಡಲಾಗುತ್ತಿತ್ತು ಎನ್ನುವ ಆರೋಪ ಕೇಳಿ ಬಂದಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ದಾಬಸ್‌ಪೇಟೆ ಮಾರ್ಗವಾಗಿ ಹೊನ್ನುಡಿಕೆ ಗ್ರಾಮದಿಂದ ತುಮಕೂರು ನಗರಕ್ಕೆ ಗೋವುಗಳನ್ನು / ಹಸುಗಳನ್ನು ತಂದು ಗೋಮಾಂಸದ ಅಡ್ಡೆ ಅಥವಾ ಕಸಾಯಿ ಖಾನೆ ನಡೆಸುತ್ತಿದ್ದರು ಎನ್ನಲಾಗಿದೆ.

 

 

 

 

ಈ ದಾಳಿ ನಡೆಸಿದ ಸಂದರ್ಭದಲ್ಲಿ ಸಿಕ್ಕಿದ ಬೃಹತ್ ಗೋಮಾಂಸವನ್ನು ತುಮಕೂರು ಮಹಾನಗರ ಪಾಲಿಕೆಯ ವಾಹನದಲ್ಲಿ ಗೋಮಾಂಸವನ್ನು ಬೇರೆಕಡೆಗೆ ಕೊಂಡೊಯ್ದಿದ್ದಾರೆ.

 

 

ತುಮಕೂರು ನಗರದ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಸರ್ಕಲ್ ಇನ್ಸ್ಪೆಕ್ಟರ್ ಪುರುಷೋತ್ತಮ್ ಹಾಗೂ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ

Leave a Reply

Your email address will not be published. Required fields are marked *

error: Content is protected !!