ತುಮಕೂರಿನ ಶಿರಾ ಗೇಟ್ ನಲ್ಲಿ ಅದಿತಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಗರ್ಭಿಣಿಯರಿಗೆ ಸೇವೆ ಸಲ್ಲಿಸುತ್ತಿದೆ. ಡೆಲಿವರಿ ಸಮಯಕ್ಕೂ ಮೊದಲೇ ಹುಟ್ಟುವ ಮಕ್ಕಳ ಆರೋಗ್ಯದ ಮೇಲೆ ಅದಿತಿ ಆಸ್ಪತ್ರೆಯಲ್ಲಿ ಸಾಕಷ್ಟು ಗಮನ ಹರಿಸಲಾಗುತ್ತಿದೆ. ಇತ್ತಿಚೆಗೆ ಆ ರೀತಿಯ ಬೇಗ ಹುಟ್ಟಿದ ಮಕ್ಕಳಲ್ಲಿ ಏನೆಲ್ಲಾ ಆರೋಗ್ಯ ಸಮಸ್ಯೆಯ ಸವಾಲು ಎದುರಾಯ್ತು ಎಂಬುದರ ಬಗ್ಗೆ ಇಂದು ಸುದ್ದಿಗೋಷ್ಠಿಯಲ್ಲಿ ವಿವರಿಸಲಾಗಿದೆ.
ಅದಿತಿ ಆಸ್ಪತ್ರೆಯ ಡಾ.ಚಂದನ್ ಮಾತನಾಡಿ, ದಿವ್ಯಾ ಎಂಬ ಮಹಿಳೆ. ಅವರಿಗೆ ಈ ಮೊದಲು ಅಬಾಷನ್ ಆಗಿತ್ತು. ಮತ್ತೆ ಎರಡನೇ ಮಗುವಿಗೂ ಅಬಾಷನ್ ಆಗುವ ಸಾಧ್ಯತೆ ಜಾಸ್ತಿ ಇತ್ತು. ಯಾಕಂದ್ರೆ ಸರ್ವೀಕ್ಸ್ ಎನ್ನುವುದರ ಉದ್ದಳತೆ ಕಡಿಮೆ ಇತ್ತು. ಆಕೆಗೆ ಸರ್ವೀಕ್ಸ್ ಹೊಲಿಗೆ ಹಾಕಿದ್ದೆವು. ಅದು ನಾಲ್ಕು ವಾರಗಳ ಕಾಲ ಇತ್ತು. ಅದು ಬಿಚ್ಚಿಕೊಳ್ಳುವ ಸಾಧ್ಯತೆ ಇತ್ತು. ಆದ್ರೆ ಮತ್ತೆ ಸ್ಟಿಚ್ ಹಾಕಿದೆವು. 24 ವಾರ ಚಿಕಿತ್ಸೆ ಬಳಿಕ ಡೆಲಿವರಿ ಆಯ್ತು ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ.
ಈ ರೀತಿಯ ಮಕ್ಕಳಲ್ಲಿ ಕಣ್ಣಿನ ಬೆಳವಣಿಗೆ ಸರಿಯಾಗಿ ಆಗಿರುವುದಿಲ್ಲ. ಕಣ್ಣಿನ ಪರೀಕ್ಷೆಯನ್ನು ಮಾಡಿದ್ದೇವೆ. ಅದಕ್ಕೆ ಲೇಸರ್ ಥೆರಪಿ ಬೇಕಾಗಿರುವುದರಿಂದ ಬುಧವಾರ ಆಪರೇಷನ್ ಮಾಡುತ್ತೇವೆ. ಮುಂಚೆ ಜನಿಸಿದ ಮಕ್ಕಳಲ್ಲಿ ರಕ್ತವೂ ಕಡಿಮೆ ಇರುತ್ತದೆ. ನಾಲ್ಕು ಬಾರಿ ರಕ್ತ ಹಾಕಲಾಗಿದೆ. ಕರುಳು ಬೆಳವಣಿಗೆ ಕೂಡ ಆಗಿರುವುದಿಲ್ಲ. ಹಾಲನ್ನು ಜೀರ್ಣ ಮಾಡಿಕೊಳ್ಳುವುದು ಕಷ್ಟವಾಗಿತ್ತು. ಅದಕ್ಕೂ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಈಗ ಮಗು ಹಾಲನ್ನು ಜೀರ್ಣ ಮಾಡಿಕೊಳ್ಳುತ್ತದೆ.
ಇಂಥ ಮಗುವಿಗೆ ಜೀರ್ಣ ಶಕ್ತಿಯೂ ಕಡಿಮೆ ಇರುವುದರಿಂದ ಅದಕ್ಕೂ ಚಿಕಿತ್ಸೆ ನೀಡಲಾಗಿದೆ. ಸಾಕಷ್ಟು ಕಷ್ಟ ಅನುಭವಿಸಿದ ಮಗು ಇಂದು ಆರೋಗ್ಯವಾಗಿದೆ. ಇಂದು 1 ಕೆಜಿ 400 ಗ್ರಾಂ ಆಗಿ ಮನೆಗೆ ತೆರಳಿದೆ. ಸದ್ಯ ಮಗುವಿನ ಆರೋಗ್ಯ ಸ್ಥಿರವಾಗಿದೆ ಎಂದಿದ್ದಾರೆ.