ತುಮಕೂರು : ನಗರದ ಸದಾಶಿವನಗರ ನಿವಾಸಿಯಾಗಿರುವ ಅಲ್ಲಬಕಾಶ್ ಎಂಬ ವ್ಯಕ್ತಿಯು ತನಗೆ ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಹೋದ ವ್ಯಕ್ತಿ ಶವವಾಗಿ ಮನೆಗೆ ಹಿಂತಿರುಗಿ ಬಂದಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ತುಮಕೂರು ನಗರದ ಗಾಂಧಿನಗರದಲ್ಲಿರುವ ಹೆಸರೇ ಹೇಳುವಂತೆ ಎಕ್ಸ್‌ಪರ್ಟ್ ಹಾಸ್ಪಟೆಲ್ ಗೆ ಹೋದ ವ್ಯಕ್ತಿಯೇ ಇದೀಗ ಶವವಾಗಿರುವುದು, ಘಟನೆ ನಡೆದು ಒಂದು ದಿನ ಕಳೆದ ನಂತರ ಬೆಳಕಿಗೆ ಬಂದಿದೆ.
ಅಲ್ಲಾಬಕಾಶ್ ಎಂಬ ವ್ಯಕ್ತಿಯು ಮೂಲತಃ ಸದಾಶಿವನಗರ ಬಡಾವಣೆಯ ನಿವಾಸಿಯಾಗಿದ್ದು, ಪ್ರಿನ್ಸ್ ಆಪ್ಟಿಕಲ್ಸ್ ಮಾಲೀಕನಾಗಿರುತ್ತಾನೆ, ಆತ ಎಂದಿನಂತೆ ಮಧ್ಯಾಹ್ನ ಊಟ ಮುಗಿಸಿ ಅಂಗಡಿಯಲ್ಲಿ ಕುಳಿತಿರುವಾಗ ಆಕಸ್ಮಿಕವಾಗಿ ಹೊಟ್ಟೆ ನೋವು ಕಾಣಿಸಿಕೊಂಡಿದೆ, ಸ್ವತಃ ಅವರೇ ಕಾರು ಡ್ರೈವ್ ಮಾಡಿಕೊಂಡು ಗಾಂಧಿನಗರದಲ್ಲಿರುವ ಎಕ್ಸ್‌ಪರ್ಟ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಹೋಗಿದ್ದಾರೆ.
ಇನ್ನು ಚಿಕಿತ್ಸೆಗೆ ಬಂದ ವ್ಯಕ್ತಿಯನ್ನು ಎಕ್ಸ್‌ಪರ್ಟ್ ಆಸ್ಪತ್ರೆಯ ವೈದ್ಯರು ಸರಿಯಾಗಿ ಚಿಕಿತ್ಸೆ ನೀಡದೇ ಏಕಾಏಕೀ ಡ್ರಿಪ್ಸ್ ಹಾಕಿ ತದನಂತರ ಯಾವುದೋ ಇಂಜೆಕ್ಷನ್ ನೀಡಿಋುತ್ತಾರೆ, ಇಂಜೆಕ್ಷನ್ ನೀಡಿದ ಕೆಲ ಹೊತ್ತಿನಲ್ಲಿ ಅಲ್ಲಬಕಾಶ್ ಎಂಬ ವ್ಯಕ್ತಿಯ ದೇಹದಲ್ಲಿ ಏರುಪೇರು ಆಗಿ ಮಲ-ಮೂತ್ರ ವಿಸರ್ಜನೆಯಾಗಿದ್ದಲ್ಲದೇ, ವಾಂತಿ ಸಹ ಆಗಿರುತ್ತದೆ ಎಂದು ಅವರ ಸಂಬಂಧಿಕರು ತಿಳಿಸಿದರು, ಇದರಿಂದ ಗಾಬರಿಯಾದ ಅವರ ಸಂಬಂಧಿಕರು ವೈದ್ಯರಲ್ಲಿ ವಿಚಾರಿಸಿದಾಗ ಏನೂ ಗಾಬರಿಯಾಗಬೇಡಿ, ಸರಿಯಾದ ಇಂಜೆಕ್ಷನ್ ನೀಡಿದ್ದೇವೆ, ಕೆಲ ಹೊತ್ತಿನಲ್ಲಿಯೇ ಸರಿ ಹೋಗುತ್ತದೆಂದು ಹೇಳಿದ್ದಾರೆ.
ಆದರೂ ಸಹ ಗಾಬರಿ ಮತ್ತು ಆತಂಕದಲ್ಲಿಯೇ ಇದ್ದ ಸಂಬಂಧಿಕರು, ಅಲ್ಲಬಕಾಶ್‌ರವರ ದೇಹದಲ್ಲಿ ಆಗುತ್ತಿರುವ ವ್ಯತ್ಯಾಸಗಳನ್ನು ಗಮನಿಸಿ ಮತ್ತೊಮ್ಮೆ ವೈದ್ಯರಲ್ಲಿ ಕೇಳಿದಾಗ ಆಗ ವೈದ್ಯರು ಪರೀಕ್ಷೆ ಮಾಡಿ ಹಾರ್ಟ್ ಬೀಟ್‌ನಲ್ಲಿ ಕೊಂಚ ವ್ಯತ್ಯಾಸವಾಗಿದೆ ಸ್ಕ್ಯಾನಿಂಗ್, ಇಸಿಜಿ ಇತ್ಯಾದಿ ಮಾಡಿಸಬೇಕು ಎಂದು ಹೇಳಿ ಮಾರುತಿ ಚಿತ್ರಮಂದಿರದ ಬಳಿ ಇರುವ ಟಿ.ಹೆಚ್.ಎಸ್. ಸೆಂಟರ್‌ಗೆ ರೆಫರ್ ಮಾಡಿದ್ದಲ್ಲದೇ ಅವರೇ ಸ್ವತಃ ಅಂಬುಲೇನ್ಸ್ ವ್ಯವಸ್ಥೆ ಮಾಡಿ ಕಳುಹಿಸಿಕೊಟ್ಟಿರುತ್ತಾರೆ.
ಟಿ.ಹೆಚ್.ಎಸ್. ಆಸ್ಪತ್ರೆಗೆ ಕರೆದೊಯ್ದ ಸಂದರ್ಭದಲ್ಲಿ ಅಲ್ಲಿನ ವೈದ್ಯರು ಚಿಕಿತ್ಸೆ ಮಾಡಲು ಮುಂದಾಗಿ ಕೆಲವು ಪರೀಕ್ಷೆ ಮಾಡಲು ಹೋದಾಗ ಹಾರ್ಟ್ ಬೀಟ್ ನಿಂತಿರುವುದು ಬೆಳಕಿಗೆ ಬಂದಿದೆ, ಇದೀಗ 10-15 ನಿಮಿಷದ ಕೆಳೆಗೇ ಹಾರ್ಟ್ ಬೀಟ್ ನಿಂತಿದೆ, ನೀವು ಆದಷ್ಟು ಬೇಗವಾಗಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಹೇಳುತ್ತಾರೆ, ಅದರಂತೆಯೇ ಅವರ ಸಂಬಂಧಿಕರು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬರಲಾಗಿ, ಆಕ್ಸಿಜನ್, ಇತ್ಯಾದಿಯಾಗಿ ಪರೀಕ್ಷೆಗೆ ಒಳಪಡಿಸಿದಾಗ ದೇಹದಲ್ಲಿ ಯಾವುದೇ ರೀತಿಯಾದ ಚೇತರಿಕೆ ಕಾಣದ ವ್ಯಕ್ತಿಯು ಆಗಾಗಲೇ ಮೃತಪಟ್ಟಿರುವುದಾಗಿ ಅಲ್ಲಬಕಾಶ್‌ನ ಸಂಬಂಧಿಕರಿಗೆ ತಿಳಿದಿದ್ದಾರಲ್ಲದೇ, ನಿಮ್ಮಗಳಿಗಾಗಿ ಟೆಸ್ಟ್ ಮಾಡಲಾಗಿದೆ ವ್ಯಕ್ತಿಯು ಮೃತಪಟ್ಟು ಈಗಾಗಲೇ 40-45 ನಿಮಿಷಗಳು ಆಗಿರಬಹುದು ಎಂದು ವೈದ್ಯರು ತಿಳಿಸಿರುತ್ತಾರೆ.
ಇದರಿಂದ ದಿಗ್ಬ್ರಮೆಯಾದ ಸಂಬಂಧಿಕರು ಶವವನ್ನು ತಮ್ಮ ಮನೆಗೆ ಕರೆದೊಯ್ಯಲು ಕೇಳಿದಾಗ ಜಿಲ್ಲಾಆಸ್ಪತ್ರೆಯ ವೈದ್ಯರು ಇಲ್ಲಿ ಎಂ.ಎನ್.ಸಿ. ಆಗಿರುವುದರ ಪ್ರಯುಕ್ತ ಪೊಲೀಸ್ ಠಾಣೆಗೆ ವಿಚಾರ ತಿಳಿಸಿ, ಅವರಿಂದ ಪತ್ರ ತಂದ ನಂತರವಷ್ಟೇ ಶವವನ್ನು ನೀಡುವುದಾಗಿ ತಿಳಿಸುತ್ತಾರೆ, ಇದರಿಂದ ದಿಕ್ಕು ತೋಚದಂತಾದ ಅಲ್ಲಬಕಾಶ್‌ನ ಸಂಬಂಧಿಕರು ಎಕ್ಸ್‌ಪರ್ಟ್ ಆಸ್ಪತ್ರೆಯ ವೈದ್ಯರ ಬಳಿ ತೆರಳಿ ಕೇಳಿದಾಗ ತಮಗೆ ರಾಜಕೀಯ ಪ್ರಭಾವ ಚೆನ್ನಾಗಿ ಇದೆ, ನಾವು ನಮ್ಮ ಪ್ರಭಾವ ಬಳಸಿ ಇಲ್ಲೇ ಮೃತಪಟ್ಟಿರುವುದಾಗಿ ತಿಳಿಸಿ, ನಿಮಗೆ ಶವವನ್ನು ಹಸ್ತಾಂತರ ಮಾಡಿಕೊಡುವುದಾಗಿಯೂ ಭರವಸೆ ನೀಡಿ, ಪೊಲೀಸ್ ಠಾಣೆಯಲ್ಲಿ ಬುಧವಾರ ಸಂಜೆ 4.00 ರಿಂದ ಮಧ್ಯಾರಾತ್ರಿ 2.00 ರವರೆಗೂ ಸತಾಯಿಸಿ, ಅವರಿಗೆ ಯಾವುದೇ ರೀತಿಯಾದ ನ್ಯಾಯ ದೊರಕಿಸದೇ ಹಾಗೇ ಬಿಟ್ಟಿರುತ್ತಾರೆ.
ನಂತರ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಮಧ್ಯಾರಾತ್ರಿ 2.30ರ ಸಮಯಕ್ಕೆ ದೂರು ದಾಖಲಿಸಿಕೊಂಡು ಎಫ್. ಐ.ಆರ್. ನೀಡಿರುತ್ತಾರೆ. ತದನಂತರ ಎಕ್ಸ್‌ಪರ್ಟ್ ಆಸ್ಪತ್ರೆಯ ಸಿಬ್ಬಂದಿ ಮತ್ತು ವೈದ್ಯರು ತಮ್ಮ ಫೋನ್ ಗಳನ್ನು ಸ್ವಿಚ್ ಆಫ್ ಮಾಡಿಕೊಂಡಿರುತ್ತಾರೆ. ಇನ್ನು ಈ ಸಾವಿನ ಬಗ್ಗೆ ಎಕ್ಸ್‌ಪರ್ಟ್ ಆಸ್ಪತ್ರೆಯ ಬಳಿ ಕೇಳಲು ಹೋದವರಿಗೆ ಆಗಿದ್ದು ಶಾಕ್ !!!!!!!
ಏನಪ್ಪಾ ಅಂದರೆ ಸತ್ತ ವ್ಯಕ್ತಿ ಚೈನ್ ಸ್ಮೋಕರ್ , ಡ್ರಗ್ ಅಡಿಕ್ಟ್ ಎಂಬ ಇತ್ಯಾದಿ ಕಹಾನಿ ಹೇಳಲು ಮುಂದಾದ ವೈದ್ಯರು, ಮೃತ ಅಲ್ಲಬಕಾಶ್ ಸಂಬಂಧಿಕರಿಗೆ ಆವಾಜ್ ಹಾಕಿ ಕಳುಹಿಸುವಲ್ಲಿ ಯಶಸ್ವಿಯಾಗಿರುತ್ತಾರೆ. ಅಸಹಾಯಕರಾದ ಮೃತ ಅಲ್ಲಬಕಾಶ್ ಸಂಬಂಧಿಕರು ಜಿಲ್ಲಾ ಆಸ್ಪತ್ರೆಯ ಶವಾಗರದ ಬಳಿ ಪತ್ರಕರ್ತರೊಡನೆ ತಮ್ಮ ಅಳಲನ್ನು ತೋಡಿಕೊಂಡಿರುತ್ತಾರೆ.
ಯಾವುದು ಏನೇ ಆಗಲಿ; ಒಬ್ಬ ವೈದ್ಯರ ನಿರ್ಲಕ್ಷ್ಯದಿಂದ ಒಂದು ಜೀವ ಹೋಗಿರುತ್ತದೆ; ಜೀವಕ್ಕೆ ಬೆಲೆ ಇಲ್ಲವೇ????? ಜೀವವಿದ್ದಾಗ ಒಂದು ರೀತಿಯಾಗಿ ಹೇಳಿದ ವೈದ್ಯರು; ಜೀವ ಹೋದ ನಂತರ ಮತ್ತೊಂದು ರೀತಿಯಲ್ಲಿ ಹೇಳುತ್ತಿರುವುದು ಸರಿಯೇ??????