ತುಮಕೂರು ಗಾರ್ಡನ್ ರಸ್ತೆ ಯಲ್ಲಿರುವ ಸವಿತಾ ಭವನದಲ್ಲಿ ಜಿಲ್ಲಾ ಮಟ್ಟದ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪ್ರತಿಭಾವಂತ ಸವಿತಾ ಸಮಾಜದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನ ತುಮಕೂರು ನಗರದ ಜಿ.ಬಿ ಜ್ಯೋತಿ ಗಣೇಶ್ ಉದ್ಘಾಟಿಸಿದರು.
ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ವೀರ ಕೇತಮ್ಮ ದೇವಸ್ಥಾನ ಕಲ್ಲುಮರಿ ಶ್ರೀ ಗಂಗಾಧರ ಸ್ವಾಮೀಜಿಯವರು ವಹಿಸಿದ್ದರು.
ಜಿಲ್ಲಾಧ್ಯಕ್ಷರಾದ ಕಟ್ ವೆಲ್ ರಂಗನಾಥ್ ರವರು ಮಾತನಾಡಿ ಸಮುದಾಯದ ಮಕ್ಕಳಿಗೆ ಪ್ರತಿವರ್ಷ ಪ್ರತಿಭಾ ಪುರಸ್ಕಾರ ಮಾಡಿ ಸನ್ಮಾನಿಸಿ ಶಿಕ್ಷಣದ ಉತ್ತೇಜನ ಮಾಡಲಾಗುತ್ತಿದೆ ಎಂದರು, ಸಮುದಾಯದ ಬಂಧುಗಳು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಹೇಳಿದರು, ಸಮುದಾಯದ ವಿಚಾರವಾಗಿ ನಿಂದನೆಗಳಾದರೆ ಮೊದಲು ಪೋಲಿಸ್ ಠಾಣೆಯಲ್ಲಿ ದೂರು ದಾಖಲು ಮಾಡಿ ಎಂದು ಕಿವಿ ಮಾತು ಹೇಳಿದರು, ಹೋಬಳಿ ಮಟ್ಟದಲ್ಲಿ ಸಮಸ್ಯೆಗಳಾದರೆ ಜಿಲ್ಲಾ ಮಟ್ಟಕ್ಕೆ ತಿಳಿಸಿ ಕಾನೂನಾತ್ಮಕ ಹೋರಾಟಕ್ಕೆ ಮುಂದಾಗುತ್ತೆವೆ ಎಂದರು.
ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ತುಮಕೂರು ಗ್ರಾಮಾಂತರ ಶಾಸಕರಾದ ಬಿ. ಸುರೇಶ್ ಗೌಡ್ರು ಮಾತನಾಡಿ ಇನ್ನು ಮುಂದೆ ಪ್ರತಿ ವರ್ಷ ಸವಿತಾ ಸಮಾಜದ ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ ಒಂದು ಲಕ್ಷ ಹಣವನ್ನು ತಮ್ಮ ವತಿಯಿಂದ ನೀಡುವುದಾಗಿ ತಿಳಿಸಿದರು. ಸವಿತಾ ಸಮಾಜದವರು ರಾಜಕೀಯವಾಗಿ ಮುಂದೆ ಬರಬೇಕು ಎಂದರಲ್ಲದೇ ಮುಂದಿನ ದಿನದಲ್ಲಿ ತುಮಕೂರು ಗ್ರಾಮಾಂತರ ವ್ಯಾಪ್ತಿಯಲ್ಲಿ ಸವಿತಾ ಸಮಾಜದ ಸಭೆ ಸಮಾರಂಭ, ಕಾರ್ಯಚಟುವಟಿಕೆಗೆ ನಿವೇಶನ ಕಲ್ಪಿಸಿಕೊಡುವುದಾಗಿ ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಎಸ್ .ಪಿ ಚಿದಾನಂದ್ ರವರು ಮಾತನಾಡಿ ಸವಿತಾ ಸಮಾಜ ಕಾಯಕ ಸಮಾಜ, ಮನು ಕುಲವನ್ನ ಸ್ವಚ್ಚ ಮಾಡುವ ಕೆಲಸ ಸವಿತಾ ಸಮಾಜ ಮಾಡುತ್ತಿದೆ ಇವರ ಜೊತೆಯಲ್ಲಿ ನಿಲ್ಲುತ್ತೆವೆ ಎಂದರು. ಕನ್ನಡ ಸೇನೆ ಜಿಲ್ಲಾಧ್ಯಕ್ಷರಾದ ಧನಿಯ ಕುಮಾರ್ ಮಾತನಾಡಿ ಸವಿತಾ ಸಮಾಜದವರು ಸಂಘಟಿತರಾಗಬೇಕು, ವೃತ್ತಿಯನ್ನ ಆಧುನಿಕತೆಗೆ ಕಡೆಗೆ ಕೊಂಡೊಯ್ಯಬೇಕು ಎಂದರು.
ಕಾರ್ಯಕ್ರಮದಲ್ಲಿ ಸಮುದಾಯದ ಗುಬ್ಬಿ ತಾಲ್ಲೂಕಿನ ಗೌ. ಅಧ್ಯಕ್ಷರು, ಎ.ಪಿ.ಎಂ.ಸಿ ಮಾಜಿ ಸದಸ್ಯರು, ಲಯನ್ಸ್ ಕ್ಲಬ್ ಖಜಾಂಚಿಯಾದ, ಡಿ.ವಿ.ಲಕ್ಷೀ ನಾರಾಯಣ [ಪಾಪಣ್ಣ] ರವರಿಗೆ ಹಾಗೂ ತಿಪಟೂರು ಸವಿತಾ ಸಮಾಜದ ಪ್ರಧಾನ ಕಾರ್ಯದರ್ಶಿಯಾದ ಟಿ.ಜೆ. ವಿಜಯ್ ಕುಮಾರ್ ರವರಿಗೆ ಸವಿತಾ ಸಮಾಜದಲ್ಲಿ ಸಲ್ಲಿಸಿರುವ ಸೇವೆಯನ್ನು ಗಣನೆಗೆ ತೆಗೆದುಕೊಂಡು ತುಮಕೂರು ಸವಿತಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂಧರ್ಭದಲ್ಲಿ ತುಮಕೂರು ಜಿಲ್ಲಾ ಸವಿತಾ ಸಮಾಜದ ಯುವ ಪಡೆ ಜಿಲ್ಲಾಧ್ಯಕ್ಷರಾದ ಕಟ್ ವೆಲ್ ರಂಗನಾಥ್, ಜಿಲ್ಲಾ ಸಮಾಜದ ಅಧ್ಯಕ್ಷರಾದ ಮಂಜೇಶ್, ಜಿಲ್ಲಾ ಪ್ರತಿನಿಧಿಯಾದ ಕುಣಿಗಲ್ ನಾರಾಯಣ್ ರವರು, ಪ್ರಧಾನ ಕಾರ್ಯದರ್ಶಿಯಾದ ಉಮೇಶ್ ಕೆ, ಗುಬ್ಬಿ ಯುವ ಪಡೆ ಅಧ್ಯಕ್ಷರಾದ ರಮೇಶ್ ಎನ್, ತಿಪಟೂರು ಯುವ ಪಡೆ ಅಧ್ಯಕ್ಷರಾದ ವರದರಾಜು, ತುಮಕೂರು ಯುವ ಪಡೆ ಅಧ್ಯಕ್ಷರಾದ ಹರೀಶ್, ತುಮಕೂರು ಎಲ್ಲಾ ತಾಲ್ಲೂಕು ಯುವ ಪಡೆ ಸದಸ್ಯರು ಹಾಗೂ ತಾಲ್ಲೂಕು ಅಧ್ಯಕ್ಷರು ಪ್ರತಿನಿಧಿಗಳು ಸಮುದಾಯದ ಬಂದುಗಳು ಹಾಜರಿದ್ದರು.