ತುಮಕೂರು ನಗರದ ಪ್ರಾಚೀನ ಬಡಾವಣೆ ಹಾಗೂ ಪ್ರಮುಖ ಬಡಾವಣೆಯು ಆಗಿರುವ ಸದಾಶಿವನಗರದ 5 ಮುಖ್ಯರಸ್ತೆ ಅಥವಾ ಅತೀ ಪುರಾತನ ಮತ್ತು ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದ ಮುಖ್ಯರಸ್ತೆಯಲ್ಲಿ ಇದೆ ಯಮನ ಆವಾಸ ಸ್ಥಾನ, ಇದು ನಿಮಗೆ ಅಚ್ಛರಿಯಾದರೂ ಸತ್ಯ.
ಏಕೆಂದರೆ ಇಲ್ಲಿನ ಮುಖ್ಯರಸ್ತೆಯಲ್ಲಿ ಹಳೆಯ ಹೈಟೆನ್ಷನ್ ವೈರ್ ಮತ್ತು ಬೃಹದ್ ಆಕಾರದ ಕರೆಂಟ್ ಕಂಬವೊಂದು ಇದ್ದು, ಪುಣ್ಯಾತ್ಮರು ನಮ್ಮ ಅಧಿಕಾರಿಗಳು ಅದರ ಅಡಿಯಲ್ಲಿಯೇ ಡಾಂಬರೀಕರಣ ರಸ್ತೆಯನ್ನು ಸಹ ಮಾಡಿ ಯಮನ ಆವಾಸ ಸ್ಥಾನದ ಕೆಳಗಡೆಯೇ ಜನರು ಓಡಾಡುವಂತೆ ಮಾಡಿದ್ದಾರೆ.
ಇನ್ನು ಸದ್ಯಕ್ಕೆ ಈ ಕಂಬದ ಕೆಳಗೆ ಯಾವೊಂದು ಅವಘಡವೂ ಸಂಭವಿಸಿಲ್ಲ, ಅದಕ್ಕೆ ಕಾರಣವೂಂದಿದೆ ಏನಪ್ಪ ಅಂದರೆ ಈ ಕಂಬದ ಎದರುಗಡೆ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯು ಜನರ ಪ್ರಾಣಗಳನ್ನು ಸದ್ಯಕ್ಕೆ ಕಾಪಾಡುತ್ತಾ ಬಂದಿದ್ದಾನೆ. ಆದರೆ ದೇವರಿಗೆ ಎಂದು ಬೇಜಾರು ಆಗುವುದೋ ಗೊತ್ತಿಲ್ಲ ಅಂದು ಭಯಾನಕ ಸಾವು ನೋವುಗಳು ಸಂಭವಿಸುವ ಸಾಧ್ಯತೆಗಳು ಇವೆ.
ಕಳೆದ ಎರಡು ವರ್ಷಗಳ ಹಿಂದೆ ಇದೇ ಭಾಗದಲ್ಲಿ ಅಂದರೇ ಇದೇ ರಸ್ತೆಯಲ್ಲಿಯೇ ಮನೆಯ ಮೇಲೆ ಒಬ್ಬ ಹುಡುಗ ಆಟವಾಡುತ್ತಿದ್ದಾಗ ತನ್ನ ಗಾಳಿಪಟ ಇದೇ ಹೈಟೆನ್ಷನ್ ವೈರ್ಗೆ ಸಿಲುಕಿಕೊಂಡಿತ್ತು, ಅದನ್ನು ಬಿಡಿಸಿಕೊಳ್ಳಲು ಪರದಾಡುತ್ತಿದ್ದ ಸಮಯದಲ್ಲಿ ಅ ಹುಡುಗ ಸಹ ಸುಟ್ಟು ಭಾರೀ ಅನಾಹುತ ಸಂಭವಿಸಿದ್ದು ಇಂದಿಗೂ ಕಣ್ಮುಂದೆಯೇ ಇದೆ.
ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು ಈ ಕುರಿತು ಗಮನಹರಿಸಿ, ಇದಕ್ಕೆ ಪರಿಹಾರ ರೂಪಿಸಿಕೊಳ್ಳುತ್ತಾರೋ, ಅಥವಾ ಯಮನಿಗೆ ಆಹಾರವಾದ ನಂತರ ಇವರು ಎಚ್ಚೆತ್ತುಕೊಳ್ಳುತ್ತಾರೋ ಕಾದು ನೋಡಬೇಕಿದೆ.