ವಿದ್ಯೋದಯ ಕಾನೂನು ಕಾಲೇಜು ವತಿಯಿಂದ ಶ್ರೀ ಕ್ಷೇತ್ರ ಸಿದ್ದರಬೆಟ್ಟ ಬಾಳೆಹೊನ್ನೂರು ಶಾಖ ಮಠದಲ್ಲಿ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರವನ್ನು ಆಯೋಜಿಸಲಾಗಿತ್ತು ಶಿಬಿರವನ್ನು ವಿನಯ ವಿ ಕುಂದಾಪುರ ಗೌರವಾನ್ವಿತ ಸಿವಿಲ್ ನ್ಯಾಯಾಧೀಶರು ತುಮಕೂರು ಹಾಗೂ ಪ್ರಭಾರ ಕೊರಟಗೆರೆ ನ್ಯಾಯಾಲಯ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಸೇವೆಯ ಉದ್ದೇಶ ಹಾಗೂ ಸೇವಾ ಮನೋಭಾವನೆಯಿಂದ ಪ್ರತಿಯೊಂದು ಕೆಲಸವನ್ನು ಮಾಡಬೇಕು ಯಾವುದೇ ರೀತಿಯ ಅಪೇಕ್ಷೆಗಳನ್ನು ಪಡೆದೆ ನಿಸ್ವಾರ್ಥವಾಗಿ ಮಾಡುವುದೇ ಸೇವೆ ಮಾಡಬೇಕು ಆ ಒಂದು ಸೇವೆಯನ್ನು ಕಲಿಯಲು ಎನ್ಎಸ್ಎಸ್ ತುಂಬಾ ಸಹಕಾರಿಯಾಗಿದೆ ಎಂದು ತಿಳಿಸಿದರು.
ಈ ಒಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಎಚ್ಎಸ್ ರಾಜು ಮ್ಯಾನೇಜಿಂಗ್ ಟ್ರಸ್ಟಿ ಶ್ರೀ ವಿದ್ಯೋದಯ ಫೌಂಡೇಶನ್ ಟ್ರಸ್ಟ್ ಇವರು ವಹಿಸಿದ್ದರು ಕಾಲೇಜಿನ ಪ್ರೊ. ಚಂದ್ರಣ್ಣ ಸಿಇಒ ರವರು ಮಾತನಾಡಿ ಎನ್ಎಸ್ಎಸ್ ಗುರಿ ಮತ್ತು ಉದ್ದೇಶವನ್ನು ವಿವರಿಸಿದರು ಹಾಗೂ ಸಿದ್ದರ ಬೆಟ್ಟದ ಕ್ಷೇತ್ರದ ವಿಶೇಷತೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಪ್ರಾಂಶುಪಾಲರಾದ ಡಾ ಎ ನಾರಾಯಣಸ್ವಾಮಿ ರವರು ಮಾತನಾಡಿ ಕಾಲೇಜಿನಲ್ಲಿ ಎನ್ಎಸ್ಎಸ್ ವಿದ್ಯಾರ್ಥಿಗಳ ಮಾಡಬೇಕಾದ ಕೆಲಸಗಳು ಹಾಗೂ ಸಮಾಜದಲ್ಲಿ ಹಾಗೂ ವಿಶೇಷ ಶಿಬಿರಗಳಲ್ಲಿ ಪಾಲ್ಗೊಂಡಾಗ ನಿರ್ವಹಿಸಬೇಕಾದ ಕೆಲಸಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಶ್ರೀ ಮಲ್ಲಿಕಾರ್ಜುನಯ್ಯ ಕೊರಟಗೆರೆ ವಕೀಲರ ಸಂಘದ ಕಾರ್ಯದರ್ಶಿಗಳು ಕಾನೂನು ವಿದ್ಯಾರ್ಥಿಗಳು ಯಾವ ರೀತಿ ಸೇವೆಗಳನ್ನು ಮಾಡಬಹುದು ಎಂಬುದನ್ನು ವಿವರಿಸಿದರು, ಈ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅತಿಥಿಗಳನ್ನು ಶಿಬಿರ ಅಧಿಕಾರಿ ಡಾ ಕಿಶೋರ್ ರವರು ಸ್ವಾಗತಿಸಿದರು ಶ್ರೀಮತಿ ರೂಪ ಕಾರ್ಯಕ್ರಮದ ಅತಿಥಿಗಳಿಗೆ ವಂದನಾರ್ಪಣೆ ಮಾಡಿದರು, ಶ್ರೀಮತಿ ಪುಷ್ಪಾ ಮತ್ತು ಡಾ.ಮುದ್ದುರಾಜು ರವರು ಕಾರ್ಯಕ್ರಮವನ್ನು ನಿರೂಪಿಸಿದರು.