ಶ್ರೀ ಸಿದ್ದಾರ್ಥ ಮಾದ್ಯಮ ಅಧ್ಯಯನ ಕೇಂದ್ರದಲ್ಲಿ ಪತ್ರಕರ್ತರಿಗೆ ಗೌರವ ಸಮರ್ಪಿಸಿದ ಸಂಭ್ರಮ

ತುಮಕೂರು: ಶ್ರೀ ಸಿದ್ದಾರ್ಥ ಮಾದ್ಯಮ ಅಧ್ಯಯನ ಕೇಂದ್ರದಲ್ಲಿ 19ನೇ ವರ್ಷದ ಸಂಭ್ರಮ ಕಾರ್ಯಕ್ರಮವನ್ನು ಪತ್ರಕರ್ತರಿಗೆ ಸಮರ್ಪಣೆ ಮಾಡುವ ಮೂಲಕ ಆಚರಿಸಲಾಯಿತು.

 

 

 

 

ನಗರದ ಶ್ರೀ ಸಿದ್ದಾರ್ಥ ಮಾದ್ಯಮ ಅಧ್ಯಯನ ಕೇಂದ್ರದ ಸಭಾಂಗಣದಲ್ಲಿ ನಡೆದ ಸಿದ್ಧಾರ್ಥ ಸಂಭ್ರಮ ಕಾರ್ಯಕ್ರಮವನ್ನು ವಿಜಯ ಕರ್ನಾಟಕದ ದಿನ ಪತ್ರಿಕೆಯ ಸಂಪಾದಕರಾದ ಸುದರ್ಶನ್ ಚೆನ್ನಂಗಿಹಳ್ಳಿ ಉದ್ಘಾಟಿಸಿದರು.

 

 

 

 

 

 

ನಂತರ ಮಾತನಾಡಿದ ಅವರು ವಿದ್ಯಾರ್ಥಿಗಳು ಮಾಧ್ಯಮ ಲೋಕದಲ್ಲಿ ಉನ್ನತ ಮಟ್ಟಕ್ಕೆ ತಲುಪಬೇಕಾದರೆ ಪ್ರಾಯೋಗಿಕ ಚಟುವಟಿಕೆಗಳು ಬಹಳ ತುಂಬಾ ಮುಖ್ಯ.ಇತ್ತೀಚಿನ ದಿನಗಳಲ್ಲಿ ಪತ್ರಿಕೆಯ ಕಚೇರಿಗಳಲ್ಲಿ ಇಂಟರ್ಶಿಪ್ ಗೆ ಬರುವವರ ಸಂಖ್ಯೆ ಕಡಿಮೆಯಾಗಿದ್ದು, ಸಾಧ್ಯವಾದಷ್ಟು ಮಟ್ಟಿಗೆ ಪತ್ರಿಕೆಗಳಲ್ಲಿ ಸೇರಿ ಅತಿ ಹೆಚ್ಚಿನ ವಿಷಯಗಳನ್ನೂ ಕಲಿಯಬಹುದಾಗಿದೆ ಇದು ನಿಮ್ಮ ಮೇಲೆ ನಿಮಗೆ ವಿಶ್ವಾಸ ಹೆಚ್ಚಿಸಲಿದೆ.

 

 

 

 

 

ಮುಂದಿನ ಪತ್ರಕರ್ತರಾಗುವ ನೀವು ಪ್ರತಿದಿನ ಹೊಸ ವಿಷಯಗಳನ್ನು ತಿಳಿದುಕೊಳ್ಳಿ, ವಿಶೇಷವಾದ ಸುದ್ದಿಗಳನ್ನು ಬರೆಯಿರಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಪ್ರತಿಕೆಗಳ ಸುದ್ದಿಗಳು ವಿಶ್ವಾಸನೀಯವಾಗಿದ್ದು ಮುದ್ರಣ ಮಾಧ್ಯಮದಲ್ಲಿ ಮಾಧ್ಯಮದ ಕಾರ್ಯ ವೈಖರಿ ಕಲಿಯಿರಿ ಎಂದರು . ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ. ಬಿ. ಟಿ. ಮುದ್ದೇಶ್ ಮಾತನಾಡಿ ಗ್ರಾಮೀಣ ಮಕ್ಕಳ ಅಭ್ಯುದಯಕ್ಕಾಗಿ ಸಂಸ್ಥೆಯನ್ನು ನಿರ್ಮಿಸಲಾಗಿದ್ದು ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳ ಸಹಕಾರ ದೊರಕಿದ್ದು ಸಂತಸದ ಸುದ್ದಿ ಎಂದರು.

 

 

 

 

 

ಗ್ರಾಮೀಣ ಪತ್ರಕರ್ತರನ್ನು ಸನ್ಮಾನಿಸುವ ಕಾರ್ಯ ಮಾಡುತ್ತಿರುವುದು ವಿದ್ಯಾರ್ಥಿಗಳಿಂದ ಪತ್ರಕರ್ತರು ವೆದೀಕೆಯನ್ನು ಹಂಚಿಕೊಳ್ಳಲ್ಲೂ ವಿದ್ಯಾರ್ಥಿಗಳ ನಿರ್ಧರಿಸಿ ಸಹಕಾರ ನೀಡಿದ್ದು ಜೊತೆಗೆ ವೇದಿಕೆ ಹಾಕಿಕೊಂಡಿದ್ದು ನನ್ಮಗೆಲ್ಲ ಸಂತಸ ತಂದಿದೆ ಎಂದರು. 8 ಸ್ಪರ್ಧೆಗಳು ನಡೆಯುತ್ತಿದ್ದು ಎಲ್ಲರೂ ಭಾಗವಹಿಸುವುದು ತುಂಬಾ ಮುಖ್ಯವಾಗಿದೆ ಎಂದರು. ಪ್ರಾಯೋಗಿಕ ಶಿಕ್ಷಣಕ್ಕೆ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ ಹೆಚ್ಚಿನ ಒತ್ತು ನೀಡುತ್ತಿದ್ದು ಉತ್ತಮ ಪತ್ರಕರ್ತರನ್ನು ರೂಪಿಸುವುದು ನಮ್ಮ ಗುರಿಯಾಗಿದೆ ಎಂದರು.

 

 

 

 

 

ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ರವಿ ಪ್ರಕಾಶ್ ಎಂ ಎಸ್, ಮಾತನಾಡಿ ಪತ್ರಿಕೆಗಳಲ್ಲಿ ಕಳೆದ ಹತ್ತು ವರ್ಷಗಳಿಂದ ಹಲವಾರು ಬದಲಾವಣೆಗಳಾಗಿದ್ದು ಸಮಾಜದ ಜಲ್ವಂತ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು. ಟಿವಿ 9 ವಾಹಿನಿಯ ನಿರೂಪಕಿ ಸುಕನ್ಯಾ ಅವರು ಮಾತನಾಡಿ ನಾನು ಹಲವು ಕಡೆ ಕಾರ್ಯ ನಿರ್ವಹಿಸುವ ವೇಳೆ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದಲ್ಲಿ ಓದಿದ ಸಹಪಾಠಿಗಳು ಇದ್ದು ಉತ್ತಮ ಕೆಲಸ ಮಾಡುತ್ತಿದ್ದಾರೆ..ಆದ್ದರಿಂದ ಈ ಕಾಲೇಜಿನ ಮಹತ್ವ ಏನೆಂದು ತಿಳಿಯುತ್ತದೆ. ಇಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಮಾಧ್ಯಮವನ್ನು ಹಿಂದಿಕ್ಕಿ ನಡೆಯುತ್ತಿದ್ದು ಹಲವಾರು ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸಿದರು ಕೂಡ ಹಲವಾರು ತಪ್ಪು ಸುದ್ದಿಗಳನ್ನು ಹರಡುವ ಭೀತಿ ಇದೆ ಎಂದರು.

 

 

 

 

 

ಡಿಜಿಟಲ್ ಮಾಧ್ಯಮದಿಂದ ನಿಮ್ಮ ಚಾನೆಲ್ ನೀವೇ ತೆರೆದುಕೊಂಡು ನಿಮ್ಮ ವಿಚಾರಗಳನ್ನು ಜಗತ್ತಿಗೆ ಹಂಚಿ ನಿಮ್ಮಲ್ಲಿನ ಆತ್ಮ ವಿಶ್ವಾಸ ಹೆಚ್ಚಾದಲ್ಲಿ ಮಾದ್ಯಮ ಲೋಕದಲ್ಲಿ ನಿಮ್ಮದೇ ಛಾಪು ಮೂಡಿಸಿ ಎಂದರು. ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಜಾ ಪ್ರಗತಿ ಪತ್ರಿಕೆಯ ಸಂಪಾದಕರಾದ ಎಸ್ ನಾಗಣ್ಣ, ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಆಡಳಿತಾಧಿಕಾರಿ ಖಲಂದರ್ ಪಾಷಾ, ಮಹಾನಗರ ಪಾಲಿಕೆಯ ಮಹಾಪೌರರಾದ ಪ್ರಭಾವತಿ, ತುಮಕೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಚಿ ನಿ ಪುರುಷೋತ್ತಮ ಹಿರಿಯ ಪತ್ರಕರ್ತರು ಮತ್ತಿತರರು ವೇದಿಕೆ ಹಂಚಿಕೊಂಡರು.

Leave a Reply

Your email address will not be published. Required fields are marked *

error: Content is protected !!