ಕುಣಿಗಲ್ : ಹೇಗೆ ರಾತ್ರಿ ಕಳೆದ ನಂತರ ಸೂರ್ಯೋದಯವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲವೋ ಹಾಗೆಯೇ ಕಾಲಮಹಿಮೆಗನುಸಾರ ಆಗಲಿರುವ ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರದ ಸ್ಥಾಪನೆಯನ್ನೂ ಯಾರೂ ತಡೆಯಲು ಸಾಧ್ಯವಿಲ್ಲ. ‘ಹಿಂದೂ ರಾಷ್ಟ್ರ ಬಂದೇ ಬರಲಿದೆ ಇದು ಕಲ್ಲಿನ ಮೇಲೆ ಕೊರೆದ ವಾಕ್ಯವಾಗಿದೆ. ಅನೇಕ ಸಂತರು ಸಹ ಇದರ ಬಗ್ಗೆ ಹೇಳಿದ್ದು ಕಾಲವೂ ಅದೇ ದಿಕ್ಕಿನಲ್ಲಿ ನಡೆಯುತ್ತಿದೆ. ಆದ್ದರಿಂದ ಈ ಕಾಲದಲ್ಲಿ ನಾವು ಒಂದು ವೇಳೆ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಕಾರ್ಯವನ್ನು ಮಾಡಿದರೆ, ಕಾಲಕ್ಕನುಗುಣವಾಗಿ ಧರ್ಮಕಾರ್ಯವಾಗಿ ಆ ಮಾಧ್ಯಮದಿಂದ ನಮ್ಮ ಸಾಧನೆಯಾಗಲಿದೆ. ಆದ್ದರಿಂದ ಈ ವರ್ಷದ ಗುರುಪೂರ್ಣಿಮೆಯ ಶುಭ ಸಂದರ್ಭದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯ ಮಾಡುವ ದೃಢ ನಿಶ್ಚಯ ಮಾಡಿ ಎಂದು ಸೌ. ದೀಪ ತಿಲಕ್ ಇವರು ಈ ಸಂದರ್ಭದಲ್ಲಿ ಕರೆ ನೀಡಿದರು. ಹಿಂದೂ ಜನಜಾಗೃತಿ ಸಮಿತಿಯು ಆಯೋಜಿಸಿದ್ದ ಗುರುಪೂರ್ಣಿಮಾ ಮಹೋತ್ಸವದಲ್ಲಿ ಅವರು ಮಾತನಾಡುತ್ತಿದ್ದರು. ಜುಲೈ 3 ಸೋಮವಾರದಂದು ಕುಣಿಗಲ್, ಶ್ರೀ ಗಂಗಾಧರೇಶ್ವರ ಪ್ಯಾಲೆಸ್ ನಲ್ಲಿ ಭಾವಪೂರ್ಣ ವಾತಾವರಣದಲ್ಲಿ ಗುರುಪೂರ್ಣಿಮಾ ಮಹೋತ್ಸವವು ಜರುಗಿತು. ದೇಶಾದ್ಯಂತ 83 ಕಡೆಗಳಲ್ಲಿ ಮತ್ತು ಕರ್ನಾಟಕದಲ್ಲಿ ಹುಬ್ಬಳ್ಳಿ, ವಿಜಯಪುರ, ಶಿವಮೊಗ್ಗ, ಮಂಗಳೂರು, ಉಡುಪಿ, ಬೆಂಗಳೂರು ಸೇರಿದಂತೆ 28 ಕಡೆಗಳಲ್ಲಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ‘ಗುರುಪೂರ್ಣಿಮಾ ಮಹೋತ್ಸವ’ ವನ್ನು ಭಾವಪೂರ್ಣ ವಾತಾವರಣದಲ್ಲಿ ಆಚರಿಸಲಾಯಿತು.

ಇವರು ಕುಣಿಗಲ್ ನಲ್ಲಿ ನಡೆದ ಗುರುಪೂರ್ಣಿಮಾ ಮಹೋತ್ಸವದಲ್ಲಿ ಮಾತನಾಡುತ್ತಾ ಕೆಲವು ವರ್ಷಗಳ ಹಿಂದೆ ಕುಣಿಗಲ್ ನಿಂದ ತುಮಕೂರಿಗೆ ಓದಲು ಬರುತ್ತಿದ್ದ ಇಬ್ಬರು ಹೆಣ್ಣು ಮಕ್ಕಳ ಲವ್ ಜಿಹಾದ್ ನ ಕಹಿ ಘಟನೆಯನ್ನು ವಿವರಿಸಿದರು. ಅವರು ’ಕೇರಳ ಸ್ಟೋರಿ’ ಕೇವಲ ಸಿನಿಮಾದಲ್ಲಿಯೇ ಮಾತ್ರವಲ್ಲ ನಮ್ಮ ಸುತ್ತಮುತ್ತಲಿನಲ್ಲಿಯೂ ನಡೆಯುತ್ತಿದೆ ಇದರ ಬಗ್ಗೆ ನಾವೆಲ್ಲರೂ ಜಾಗೃತರಾಗಿರಬೇಕು ಮತ್ತು ನಮ್ಮ ಮಕ್ಕಳಿಗೂ ಜಾಗೃತಿಯನ್ನು ಮೂಡಿಸಬೇಕು ಎಂದು ತಿಳಿಸಿದರು.
ಮಹೋತ್ಸವದ ಪ್ರಾರಂಭದಲ್ಲಿ ಶ್ರೀ ವ್ಯಾಸಪೂಜೆ ಮತ್ತು ಪ.ಪೂ. ಭಕ್ತರಾಜ ಮಹಾರಾಜರ ಪ್ರತಿಮೆಯ ಪೂಜೆಯನ್ನು ಮಾಡಲಾಯಿತು. ಈ ಸಮಯದಲಿ ‘ಸ್ವರಕ್ಷಣೆಯ ಪ್ರಾತ್ಯಕ್ಷಿಕೆಗಳನ್ನು ವಿಡಿಯೋವನ್ನು ತೋರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಶ್ರೀ ರಾಜೇಶ್ ಗೌಡರು ಹಾಗೂ ಸಂಸ್ಕೃತ ಜ್ಯೋತಿಷ್ಯ ತಜ್ಞರಾದ ಓ.ಎಸ್ ಕುಮಾರಸ್ವಾಮಿಯವರು ಉಪಸ್ಥಿತರಿದ್ದರು