ರಾಜ್ಯ ಬಿಜೆಪಿ ಶಾಸಕರ ಅಮಾನತು ಆದೇಶವನ್ನು ವಿರೋಧಿಸಿ ಬಿಜೆಪಿ ಪಕ್ಷದ ವತಿಯಿಂದ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆ ನಡೆಯುತ್ತಿದ್ದು, ಇದರ ಅಂಗವಾಗಿ ತುಮಕೂರು ನಗರದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರಣಿಗೆಯಲ್ಲಿ ಬಿಜೆಪಿ ಮುಖಂಡರುಗಳು ಪಾಲ್ಗೊಂಡು ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
ಕಾಂಗ್ರೆಸ್ ಸರ್ಕಾರ ನಮ್ಮ ಪಕ್ಷದ ಹಿರಿಯ ಶಾಸಕರನ್ನು ಅಮಾನತು ಮಾಡಿ ಪ್ರತಿಪಕ್ಷದ ಧ್ವನಿ ಹತ್ತಿಕ್ಕುವ ಹುನ್ನಾರ ನಡೆಸುತ್ತಿದೆ. ಪಕ್ಷಾತೀತವಾಗಿ ನಡೆದುಕೊಳ್ಳಬೇಕಿದ್ದ ಸಬಾಪತಿಯವರು ಕೂಡ ಕಾಂಗ್ರೆಸ್ ನೊಂದಿಗೆ ಶಾಮೀಲಾಗಿ ವಿಧಾನಸಭೆ ಇತಿಹಾಸದಲ್ಲಿ ಎಂದೂ ನಡೆದಿರತಕ್ಕಂತ ಘಟನೆಗೆ ಕಾರಣಕರ್ತರಾಗಿದ್ದಾರೆ. ಐಎಎಸ್ ಅಧಿಕಾರಿಗಳನ್ನು ಸರ್ಕಾರೇತರ ಕೆಲಸಗಳಿಗೆ ನಿಯೋಜಿಸಿ ಜವಾನರಂತೆ ನಡೆಸಿಕೊಳ್ಳುತ್ತಿರುವದನ್ನು ವಿರೋಧಿಸಿದ ಕಾರಣಕ್ಕೆ ಪ್ರತಿಪಕ್ಷದ ಹಿರಿಯ ಶಾಸಕರನ್ನು ಅಮಾನತು ಮಾಡಿ ಅವರನ್ನು ವಿಧಾನಸಭೆ ಇಂದ ಬಲವಂತವಾಗಿ ಹೊರದಬ್ಬುವ ಮೂಲಕ ಜನ ಸಾಮಾನ್ಯರಲ್ಲಿ ಭಯದ ವಾತಾವರಣ ನಿರ್ಮಿಸುತ್ತಿದ್ದಾರೆ. ಆದ್ದರಿಂದ ಈ ಕಾಂಗ್ರೆಸ್ ಆಡಳಿತ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಕ್ಷದ ಕಾರ್ಯಕರ್ತರು ಮಾತ್ರವಲ್ಲದೆ, ಜನ ಸಾಮಾನ್ಯರು ಕೂಡ ಭಾಗವಹಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ರವಿಶಂಕರ್ ಹೆಬ್ಬಾಕ ರವರು, ವಿಧಾನ ಪರಿಷತ್ ಶಾಸಕರಾದ ವೈ.ಎ ನಾರಾಯಣಸ್ವಾಮಿ ಅವರು, ತುಮಕೂರು ಗ್ರಾಮಾಂತರ ಶಾಸಕರಾದ ಬಿ. ಸುರೇಶ್ ಗೌಡ ರವರು, ರಾಜ್ಯ ಉಪಾಧ್ಯಕ್ಷರಾದ ಎಂ ಬಿ ನಂದೀಶ್ ರವರು, ರೈತ ಮೋರ್ಚಾ ಅಧ್ಯಕ್ಷರಾದ ಶಿವಪ್ರಸಾದ್ ರವರು, ಮುಖಂಡರಾದ ಸ್ಪೂರ್ತಿ ಚಿದಾನಂದ್ ರವರು, ಯುವ ಮೋರ್ಚಾ ಅಧ್ಯಕ್ಷರಾದ ಶ್ರೇಯಸ್ ರವರು, ನಗರ ಮಂಡಲ ಅಧ್ಯಕ್ಷರಾದ ಹನುಮಂತ ರಾಜು ರವರು, ಕಾರ್ಯಕಾರಿಣಿ ಸದಸ್ಯರಾದ ಪ್ರೇಮ ಹೆಗ್ಗಡೆ ಯವರು, ಪಾಲಿಕೆ ಸದಸ್ಯರಾದ ಮಲ್ಲಿಕಾರ್ಜುನ್ ರವರು, ಮಹಿಳಾ ಮೋರ್ಚದವರು ಸೇರಿದಂತೆ ಎಲ್ಲಾ ಮೋರ್ಚಾ ಅಧ್ಯಕ್ಷರುಗಳು, ಪದಾಧಿಕಾರಿಗಳು ಹಾಗೂ ಅನೇಕ ಪ್ರಮುಖರು ಉಪಸ್ಥಿತರಿದ್ದರು.