ತುಮಕೂರು : ತುಮಕೂರಿನ ಊರುಕೆರೆಯಲ್ಲಿರುವ ಜೈನ್ ಪಬ್ಲಿಕ್ ಶಾಲೆಯಲ್ಲಿ ಯೋಗ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಶಾಲಾ ಆಡಳಿತ ವತಿಯಿಂದ ಯೋಗ ದಿನಾಚರಣೆಯನ್ನು ವಿಶೇಷ ರೀತಿಯಲ್ಲಿ ಆಚರಿಸಿದರು.
ಈ ಶಾಲೆಯಲ್ಲಿ ಮಕ್ಕಳಿಗೆ ಮಾತ್ರವಲ್ಲದೇ ಪೋಷಕರೊಂದಿಗೆ ಯೋಗವನ್ನು ಮಾಡುವುದರ ಮೂಲಕ ವಿಶೇಷವಾದ ರೀತಿಯಲ್ಲಿ ಆಚರಣೆ ಮಾಡಿದರು. ಜೊತೆಗೆ ಪೋಷಕರು ತಮ್ಮ ಮಕ್ಕಳಿಗೆ ಪ್ರತಿನಿತ್ಯ ಮನೆಯಲ್ಲಿ ಯೋಗಭ್ಯಾಸವನ್ನು ಮಾಡಿಸುವಂತೆ ಪ್ರೇರೇಪಿಸಿದರು. ಮಕ್ಕಳು ಬಹಳ ಹುಮ್ಮಸ್ಸಿನಿಂದ ಯೋಗವನ್ನು ತಮ್ಮ ತಮ್ಮ ಪೋಷಕರೊಂದಿಗೆ ಮಾಡಿ ಸಂಭ್ರಮಿಸಿದರು.
ಇನ್ನು ಯೋಗ ನಡೆದು ಬಂದ ದಾರಿಯನ್ನು ಪ್ರತಿಯೊಬ್ಬರಿಗೂ ಅರಿವಾಗುವಂತೆ ಹೇಳಿದರು, ಯೋಗ ಮಾಡುವುದರಿಂದ ಮನುಷ್ಯನಿಗಾಗುವ ಲಾಭಗಳನ್ನು ಅಚ್ಚುಕಟ್ಟಾಗಿ ಹೇಳಿದರು, ಪ್ರತಿನಿತ್ಯ ಯೋಗ ಮಾಡುವುದರಿಂದ ನಮ್ಮ ಆರೋಗ್ಯವನ್ನು ಸುಸ್ಥಿರವಾಗಿಟ್ಟುಕೊಳ್ಳಬಹುದು, ಯೋಗದಿಂದ ರೋಗಮುಕ್ತರಾಗಬಹುದು ಎಂಬ ಸಂದೇಶವನ್ನು ರವಾನೆ ಮಾಡಿದರು.
ಇನ್ನು ಶಾಲೆಯಲ್ಲಿ ಆಯೋಜಿಸಿದ್ದ ಯೋಗ ದಿನಾಚರಣೆಯಲ್ಲಿ ಪೋಷಕರು ಬಹಳ ಹುಮ್ಮಸ್ಸಿನಿಂದ ಪಾಲ್ಗೊಂಡರಲ್ಲದೇ, ಇನ್ಮುಂದೆ ತಾವು ತಮ್ಮ ಮಕ್ಕಳೊಂದಿಗೆ ಮನೆಯಲ್ಲಿ ಯೋಗಭ್ಯಾಸವನ್ನು ಮಾಡಿಸುತ್ತೇವೆಂದು ಶಾಲಾ ಶಿಕ್ಷಕರ ಬಳಿ ಹೇಳಿಕೊಂಡರು. ಜೊತೆಗೆ ಈ ರೀತಿಯಾದ ವಿಭಿನ್ನ ಪೋಷಕರೊಟ್ಟಿಗೆ ಮಕ್ಕಳ ಯೋಗದ ಕುರಿತು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಇನ್ನು ಕೆಲವು ಕ್ಲಿಷ್ಠಕರವಾದ ಆಸನಗಳನ್ನು ನುರಿತ ವಿದ್ಯಾರ್ಥಿಗಳು ಪ್ರದರ್ಶನವನ್ನು ಸಹ ಈ ಸಂದರ್ಭದಲ್ಲಿ ಮಾಡಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಸುನೀತ ದಗ್ಗಲ್ ಸೇರಿದಂತೆ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಜರಿದ್ದರು.