ದೇಶದಲ್ಲಿ ಅಂಬೇಡ್ಕರ್ ಅವರ ತತ್ವಾದರ್ಶ, ಸಂವಿಧಾನ ಮತ್ತು ಐಕ್ಯತೆ ಪಾಲನೆ ಯಾಗಬೇಕು: ಕಾಂಗ್ರೆಸ್ ಮುಖಂಡ ಇಕ್ಬಾಲ್ ಅಹಮ್ಮದ್

 

ತುಮಕೂರು. ಜೂನ್:- ದೇಶದಲ್ಲಿ ಬಡವರು ಶೋಷಿತರು ಸಮಾನವಾಗಿ ಬದುಕಬೇಕಾದರೆ ಸಮಾನವಾದ ಜೀವನ ನಡೆಸಬೇಕಾದರೆ ಅಂಬೇಡ್ಕರ್ ಅವರ ತತ್ವಾದರ್ಶಗಳು ಮತ್ತು ನೀತಿ ವಾಕ್ಯಗಳನ್ನು ಪಾಲನೆ ಮಾಡಿ ಸಂವಿಧಾನದ ಅಡಿಯಲ್ಲಿ ಐಕ್ಯತೆಯನ್ನು ಕಾಪಾಡಬೇಕು ಎಂದು ತುಮಕೂರು ನಗರ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಇಕ್ಬಾಲ್ ಅಹಮದವರು ಅಭಿಪ್ರಾಯಪಟ್ಟರು.

 

 

 

 

ನಗರದಲ್ಲಿ ದಲಿತ ಜನಾಂದೋಲನ ಸಮಿತಿಯವರು ಏರ್ಪಡಿಸಿದ್ದ ಅಂಬೇಡ್ಕರ್ ಬಾಬು ಜಗಜೀವನ್ ರಾಮ್ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಟೌನ್ ಹಾಲ್ ಮಹಾನಗರ ಪಾಲಿಕೆ ಆವರಣದಿಂದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಇರುವ ಗುಂಚಿ ವೃತ್ತದವರೆಗೂ ಹೆಜ್ಜೆ ಹಾಕಿದ ವಿವಿಧ ಜಾನಪದ ಕಲಾತಂಡಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು ಏಪ್ರಿಲ್ 14ರ ಅಂಬೇಡ್ಕರ್ ಜಯಂತಿ ಹಾಗೂ ಬಾಬು ಜಗಜೀವನ್ ರಾಮ್ ಜಯಂತಿ ಚುನಾವಣಾ ಆಯೋಗವು ಚುನಾವಣಾ ನೀತಿ ಸಂಹಿತೆ ಆಯೋಜನೆ ಮಾಡಿದ್ದ ಕಾರಣದಿಂದಾಗಿ ಅದ್ದೂರಿಯಾಗಿ ಅಂಬೇಡ್ಕರ್ ಜಯಂತಿಯನ್ನು ಆಚರಣೆ ಮಾಡಲು ಆಗಲಿಲ್ಲ ಈ ನಿಟ್ಟಿನಲ್ಲಿ ಅಂಬೇಡ್ಕರ್ ಅವರ ತತ್ವದರ್ಶನಗಳನ್ನ ಜಗತ್ತಿಗೆ ಸಾರಲು ದಲಿತ ಜನಾಂದೋಲನ ಸಮಿತಿಯ ಜಿಲ್ಲಾಧ್ಯಕ್ಷ ಟಿಸಿ ರಾಮಯ್ಯ ಸೇರಿದಂತೆ ಅವರ ಸಂಗಡಿಗರು ಬಹಳ ವಿಜ್ರಂಭಣೆಯಿಂದ ಅರ್ಥಪೂರ್ಣವಾಗಿ ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ಅವರ ಜಯಂತಿ ಆಚರಿಸುವುದು ಶ್ಲಾಘನೀಯವೆಂದು ಪ್ರಶಂಸಿದರು.

 

 

 

ಅಂಬೇಡ್ಕರ್ ಅವರು ಪ್ರಜಾಪ್ರಭುತ್ವದ ಅಡಿಯಲ್ಲಿರುವ ಸಂವಿಧಾನದ ರಚನೆಯಲ್ಲಿ ಶೋಷಿತರ ಪ್ರಗತಿಗಾಗಿ ಅನೇಕ ಯೋಜನೆಗಳು ಕೈ ಸೇರಿವಂತೆ ಕಾಯ್ದೆ ಕಾನೂನುಗಳನ್ನ ಆ ರೂಪಿಸಿದ್ದು ಆದರೆ ಇಂದು ಮಾನಸಿಕ ವಿಚಿಧ್ರ ಕಾರಿ ಶಕ್ತಿಗಳು ಸಂವಿಧಾನದ ಕಾನೂನನ್ನೇ ಬುಡಮೇಲು ಮಾಡಲು ಹೊರಟಿದ್ದು ಶೋಷಿತರಿಗೆ ಸಿಗಬೇಕಾದ ಸೌಲಭ್ಯಗಳು ವುಳ್ಳವರ ಪಾಲಾಗುತ್ತಿದ್ದು ಇದು ಆತಂಕದ ವಾತಾವರಣ ಸೃಷ್ಟಿ ಮಾಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದರು.

 

 

 

 

ದಲಿತ ಜನಾಂದೋಲನಾ ಸಮಿತಿಯ ಜಿಲ್ಲಾಧ್ಯಕ್ಷ ಟಿಸಿ ರಾಮಯ್ಯನವರು ಮಾತನಾಡಿ ವಿಶ್ವಜ್ಞಾನಿ ಅಂಬೇಡ್ಕರ್ ಅವರು ನಮ್ಮ ದೇಶಕ್ಕೆ ಪವಿತ್ರವಾದ ಸ್ವಾತಂತ್ರ್ಯದ ಜೊತೆಗೆ ಸೂಕ್ತ ಸಂವಿಧಾನ ಒದಗಿಸಿದ್ದು ಈತ ಮಹಾಜ್ಞಾನಿಯನ್ನು ವರ್ಷದ 324 ದಿನವೂ ನೆನೆಯುವುದು ನಮ್ಮಗಳ ಆದ್ಯ ಕರ್ತವ್ಯವಾಗಿದ್ದು ಪ್ರತಿ ಬಾರಿಯೂ ಅಂಬೇಡ್ಕರ್ ಜಯಂತಿ ಹಾಗೂ ಬಾಬು ಜಗಜೀವನ್ ರಾಮ್ ಜಯಂತಿ ಸಂದರ್ಭದಲ್ಲಿ ಒಂದಿಲ್ಲ ಒಂದು ತೊಡಕು ತೊಂದರೆಗಳು ಎದುರಾಗುತ್ತಿದ್ದು ಕಳೆದ ಬಾರಿ ಕೋವಿಡ್ ನಿಂದ ಜಯಂತಿಯನ್ನು ಸಂಭ್ರಮ ಸಡಗರದಿಂದ ಆಚರಣೆ ಮಾಡಲು ಸಾಧ್ಯವಾಗುತ್ತಿಲ್ಲ ಬೇರೆ ಸಮುದಾಯದ ವ್ಯಕ್ತಿಗಳ ಆದರ್ಶ ಪುರುಷರ ಜಯಂತಿ ಗಳು ಉತ್ತಮ ವಾಗಿ ನಡೆಯುತ್ತಿದ್ದು ಈ ಹಿನ್ನೆಲೆಯಲ್ಲಿ ಅಂಬೇಡ್ಕರ್ ಅವರ ಜೀವನ ಮೌಲ್ಯಗಳು ತಳಸಮುದಾಯದ ಯುವ ಸಮೂಹಕ್ಕೆ ತಲುಪಿಸುವ ಸಲುವಾಗಿ ಅಂಬೇಡ್ಕರ್ ಜಯಂತಿ ಹಾಗೂ ಕಲಾ ತಂಡಗಳ‌ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದರು.

 

 

 

 

 

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಟಿಸಿ ರಾಮಯ್ಯ. ಸಿದ್ದೇಶ್. ನೇಗಲಾಲ. ಯೋಗೀಶ್ ಎಂ. ಎಚ್. ರಂಗನಾಥ್ ಮದಕರಿ. ಹೆತ್ತೇನಳ್ಳಿ ನರಸಿಂಹಮೂರ್ತಿ.ಅಮರ್. ಮಾರುತಿ. ರಾಮಮೂರ್ತಿ. ಮೋಹನ್. ದೇವರಾಜ್.ರವಿ, ರಮೇಶ. ರಾಜಣ್ಣ ಗೂಳೂರು. ರಘು. ಆನಂದ್. ಶಿವಣ್ಣ ಅಕ್ಷರ ದಾಸ್ವಾಹ . ಸುರೇಶ. ಅರ್ಜುನ.ಹಾಗೂ ದಲಿತ ಆಂದೋಲನ ಸಮಿತಿ ಕಾರ್ಯಕರ್ತರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!